newsfirstkannada.com

Video: ಉಷಾ ಉತ್ತುಪ್​ ಹಾಕುವ ಬಿಂದಿಗೂ ಕರ್ನಾಟಕಕ್ಕೂ ಸಂಬಂಧವಿದೆ! ಬೇಕಿದ್ರೆ ಅವರ ಬಾಯಲ್ಲೇ ಕೇಳಿ

Share :

Published March 23, 2024 at 10:36pm

Update March 23, 2024 at 10:40pm

  ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು

  ನನ್ನ ಹುಟ್ಟು ಬಾಂಬೆ, ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು

  ಬಿಂದಿಯಲ್ಲಿರುವ ‘ಕ’ ಅಕ್ಷರದ ಸೀಕ್ರೆಟ್​ ಬಿಚ್ಚಿಟ್ಟ ಉಷಾ ಉತ್ತುಪ್​

ಭಾರತದ ಖ್ಯಾತ ಹಾಡುಗಾರ್ತಿ ಉಷಾ ಉತ್ತುಪ್​ ತಮ್ಮ ದೊಡ್ಡ ಬಿಂದಿಯ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ನ್ಯೂಸ್​ ಫಸ್ಟ್​ ಜೊತೆಗೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಬಿಂದಿಗೂ ಕರ್ನಾಟಕಕ್ಕೂ ಇರುವ ಸಂಬಂಧದ ಬಗ್ಗೆ ತೆರೆದಿಟ್ಟಿದ್ದಾರೆ. 

ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್​ರವರು ಉಷಾ ಉತ್ತುಪ್​ ಅವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ದೊಡ್ಡ ಬಿಂದಿಯ ಹಿಂದಿರುವ  ಕುತೂಹಲಕಾರಿ ವಿಚಾರ ತೆರೆದಿಟ್ಟಿದ್ದಾರೆ. ‘ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ನನ್ನ ತಂದೆ ಪೊಲೀಸ್ ಆಗಿದ್ದರು​. ನಾನು ಹುಟ್ಟಿದ್ದು ಬಾಂಬೆಯಲ್ಲಿ. ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು. ಹಾಗಾಗಿ ಎಲ್ಲರೂ ಬಿಂದಿ ಹಾಕುತ್ತಾರೆ. ನನ್ನ ತಾಯಿ ಕೂಡ ಬಿಂದಿ ಹಾಕುತ್ತಿದ್ದರು. ಆಗಿನ ಕಾಲದಲ್ಲಿ ಬಾಟಲಿಯಲ್ಲಿ ಬರುತ್ತಿತ್ತು. ಅದನ್ನು ‘ಚಾಂದ್​ ಪುಟ್ಟು’ ಎಂದು ಕರೆಯುತ್ತಿದ್ದರು. ಚಿಕ್ಕ ಗ್ಲಾಸ್​ನಲ್ಲಿ ಬರುತ್ತಿತ್ತು. ಅದನ್ನು ನಾನು ಹಣೆಗೆ ಹಚ್ಚುತ್ತಿದ್ದೆ. ಆಮೇಲೆ ನಿಧಾನವಾಗಿ ಬಣ್ಣ ಬಣ್ಣದ ಬಿಂದಿ ಹಾಕಲು ಪ್ರಾರಂಭಿಸಿದೆ. ನಂತರ ಬಿಂದಿ ಗಾತ್ರವನ್ನು ಬದಲಾಯಿಸುತ್ತಾ ಬಂದೆ. ಆದರೆ ಈಗ ನನ್ನದೇ ಸ್ವಂತ ಸ್ಟಿಕ್ಕರ್ಸ್​​ ಇದೆ. ಈಗ ಬಿಂದಿ ನನ್ನ ಐಕಾನಿಕ್​ ಪಾರ್ಟ್​ ಆಗಿದೆ.

ಇದನ್ನೂ ಓದಿ: ಸ್ಯಾಮ್​ ಕರ್ರಾನ್​​ ಅರ್ಧ ಶತಕದಾಟ.. 4 ವಿಕೆಟ್​ಗಳ ಮೊದಲ ಜಯ ಪಡೆದ ಪಂಜಾಬ್​ ಕಿಂಗ್ಸ್​

‘ಕ’ ಅಂದ್ರೆ ಕರ್ನಾಟಕ

ನಾನೇ ನನ್ನ ಬಿಂದಿಯನ್ನು ಹಾಕುತ್ತೇನೆ ಮತ್ತು ಅದರಲ್ಲಿ ‘ಕ’ ಅಕ್ಷರವನ್ನು ಬಿಡಿಸುತ್ತೇನೆ. ಇದರ ನಿಜಾರ್ಥವೆಂದರೆ ಕೋಲ್ಕತ್ತಾ ಅದರ ಜೊತೆಗೆ ಕರ್ನಾಟಕ ಕೂಡ ಎಂದು ಹೇಳುತ್ತೇನೆ.

ಮಕ್ಕಳಿಗೂ ಇಷ್ಟ ನನ್ನ ಬಿಂದಿ

ಒಂದು ಬಾರಿ ನಾನು ಬಾಂಬೆಯ ಬೆಂಜಾಗೆ ಶಾಪಿಂಗ್​ ಹೋಗಿದ್ದೆ. ಅವಾಗ ಅದರ ಮಾಲೀಕ ಬಂದು ಹೇಳಿದ್ರು ನಿನ್ನ ಬಿಂದಿಯನ್ನು ಮಕ್ಕಳು ಕೇಳುತ್ತಿದ್ದಾರೆ ಎಂದು. ಆದರೆ ನನ್ನ ಬಿಂದಿಯನ್ನು ನಾನೇ ರಚಿಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಉಷಾ ಉತ್ತುಪ್​ ಹಾಕುವ ಬಿಂದಿಗೂ ಕರ್ನಾಟಕಕ್ಕೂ ಸಂಬಂಧವಿದೆ! ಬೇಕಿದ್ರೆ ಅವರ ಬಾಯಲ್ಲೇ ಕೇಳಿ

https://newsfirstlive.com/wp-content/uploads/2024/03/Usha-Uttup.jpg

Load More