/newsfirstlive-kannada/media/post_attachments/wp-content/uploads/2024/05/prajwal-revanna-1.jpg)
ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣರ ಕೊನೆಗೂ ಎಸ್‌ಐಟಿ ಕೈಯಲ್ಲಿ ಲಾಕ್ ಆಗಿದ್ದಾರೆ. ಬರೋಬ್ಬರಿ 34 ದಿನಗಳಿಂದ ವಿದೇಶದಲ್ಲಿ ಭೂಗತರಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್, ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ವಿಮಾನದ ಬಳಿ ತೆರಳಿ ವಶಕ್ಕೆ ಪಡೆದ CISF ಸಿಬ್ಬಂದಿ
ಗುರುತರ ಆರೋಪ ಹೊತ್ತು ಜರ್ಮನಿಯಲ್ಲಿ ಝಾಂಡಾ ಊರಿದ್ದ ಸಂಸದ ಪ್ರಜ್ವಲ್ ಲುಫ್ತಾನ್ಸಾ ಏರ್ಲೈನ್ಸ್ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ್ರು. ಇನ್ನು ಪ್ರಜ್ವಲ್ ಇದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದು ಎಮಿಗ್ರೇಷನ್ ಬಳಿಗೆ ಕರೆತಂದರು. ಬ್ರೌನ್ ಕಲರ್ ನೈಟ್ ಪ್ಯಾಂಟ್, ಗ್ರೇ ಕಲರ್ ಫುಲ್ಓವರ್ ಧರಿಸಿದ್ದ ಪ್ರಜ್ವಲ್, ಯಾವುದೇ ಪಶ್ಚಾತಾಪವಿಲ್ಲದೇ ಆರಾಮಾಗಿ ನಡೆದುಕೊಂಡು ಬಂದ ದೃಶ್ಯ ನಿಜಕ್ಕೂ ಅಚ್ಚರಿ ಮೂಡಿಸಿತು.
ಬಿಗಿ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣನ ಕರೆತಂದ ಪೊಲೀಸ್ರು..!#PrajwalRevanna#KempegowdaAirport#SIT#HassanPendriveCase#KIAL#NewsFirstKannadapic.twitter.com/gKVZXevob9
— NewsFirst Kannada (@NewsFirstKan)

— NewsFirst Kannada (@NewsFirstKan) May 30, 2024
">May 30, 2024
">May 30, 2024
ಎಮಿಗ್ರೇಷನ್ ಬಳಿಕ ಪ್ರಜ್ವಲ್ನನ್ನು ವಶಕ್ಕೆ ಪಡೆದ ಎಸ್‌ಐಟಿ
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎಮಿಗ್ರೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಸಿಐಎಸ್ಎಫ್ ಪೊಲೀಸರಿಂದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ತಮ್ಮ ವಶಕ್ಕೆ ಪಡೆದುಕೊಂಡರು.. ಎಸ್‌ಐಟಿ ಎಸ್ಪಿ ಸಮನ ಡಿ ಪನ್ನೇಕರ್ ನೇತೃತ್ವದಲ್ಲಿ ಪ್ರಜ್ವಲ್ನನ್ನು ವಶಕ್ಕೆ ಪಡೆಯಲಾಯ್ತು.
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan)
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan) May 30, 2024
">May 30, 2024
ಏರ್ಪೋರ್ಟ್ನಿಂದ ಎಸ್‌ಐಟಿ ಕಚೇರಿಗೆ ಪ್ರಜ್ವಲ್ ಶಿಫ್ಟ್
ಏರ್ಪೋರ್ಟ್ನಲ್ಲಿ ಪ್ರಜ್ವಲ್ನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು, ನೇರವಾಗಿ ಎಸ್‌ಐಟಿ ಕಚೇರಿಗೆ ಕರೆದುಕೊಂಡು ಬಂದ್ರು. ಬಳಿಕ ಎಸ್‌ಐಟಿ ಕಚೇರಿಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸಿ, ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಅಧಿಕೃತವಾಗಿ ಬಂಧನ ಮಾಡಿದ್ರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?
ಬಿಗಿ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣನ ಕರೆತಂದ ಪೊಲೀಸ್ರು..!#PrajwalRevanna#KempegowdaAirport#SIT#HassanPendriveCase#KIAL#NewsFirstKannadapic.twitter.com/gKVZXevob9
— NewsFirst Kannada (@NewsFirstKan)
ಬಿಗಿ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣನ ಕರೆತಂದ ಪೊಲೀಸ್ರು..!#PrajwalRevanna#KempegowdaAirport#SIT#HassanPendriveCase#KIAL#NewsFirstKannadapic.twitter.com/gKVZXevob9
— NewsFirst Kannada (@NewsFirstKan)
ಬಿಗಿ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣನ ಕರೆತಂದ ಪೊಲೀಸ್ರು..!#PrajwalRevanna#KempegowdaAirport#SIT#HassanPendriveCase#KIAL#NewsFirstKannadapic.twitter.com/gKVZXevob9
— NewsFirst Kannada (@NewsFirstKan) May 30, 2024
">May 30, 2024
">May 30, 2024
ಒಟ್ಟಾರೆ. ಕಳೆದೊಂದು ತಿಂಗಳಿಂದ ವಿದೇಶದಲ್ಲಿ ಕುಳಿತು ಎಸ್‌ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್, ಕೊನೆಗೂ ಎಸ್‌ಐಟಿ ಕೈಯಲ್ಲಿ ಲಾಕ್ ಆಗಿದ್ದಾರೆ. ಇನ್ನು ಸೂಕ್ತ ರೀತಿ ತನಿಖೆ ನಡೆಸಿ, ಸಂತ್ರಸ್ತೆಯರಿಗೆ ನ್ಯಾಯಕೊಡಿಸುವ ಜವಾಬ್ದಾರಿ ಎಸ್‌ಐಟಿ ಹೆಗಲ ಮೇಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ