newsfirstkannada.com

ಪ್ರಜ್ವಲ್​ ರೇವಣ್ಣ ಖಾಸಗಿ ವಿಡಿಯೋದಲ್ಲಿ ಇರೋದೇನು? ಮೆಡಿಕಲ್​ ಟೆಸ್ಟ್​​​ನಲ್ಲಿ ಏನೇನ್​ ಇರಲಿದೆ?

Share :

Published May 31, 2024 at 8:59pm

    ಸಂತ್ರಸ್ತೆಯರ ಹೇಳಿಕೆಯ ಮೇಲೆ ಚಾರ್ಚ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆ

    ಅತ್ಯಾಚಾರ ಕೇಸ್​ಗಳಲ್ಲಿ ಸಂತ್ರಸ್ತೆ ಹೇಳಿಕೆಗಳು ತುಂಬಾ ಇಂಪಾರ್ಟ್‌ಟೆಂಟ್‌

    ಮೊಬೈಲ್​​ನಿಂದ ಪ್ರಜ್ವಲ್​ಗೆ ಮಾತ್ರವಲ್ಲ, ಜೊತೆಗಿದ್ದವ್ರಿಗೂ ಸಂಕಷ್ಟ ಗ್ಯಾರಂಟಿ

ಒಂದಲ್ಲ ಎರಡಲ್ಲ ಬರೋಬ್ಬರಿ 34 ದಿನಗಳಿಂದ ತಲೆ ಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಭಾರತಕ್ಕೆ ರಿಟರ್ನ್ ಆಗಿದ್ದಾರೆ. ವಿದೇಶದಲ್ಲಿ ಭೂಗತರಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್​​ನನ್ನ SIT ಅರೆಸ್ಟ್ ಮಾಡಿದೆ. ಆದ್ರೆ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಎದುರಾಗುವ ಕಂಟಕಗಳು ಒಂದ್ಕಡೆಯಾದ್ರೆ.. ಇವನೇ ಆರೋಪಿ ಅಂತ ಸಾಬೀತು ಮಾಡಲು ಎಸ್​ಐಟಿಗಿರುವ ಸವಾಲುಗಳು ಇನ್ನೊಂದ್ಕಡೆ. ಹೀಗಾಗಿ ಈ ಕೇಸ್​ನಲ್ಲಿ ಪ್ರಜ್ವಲ್ ಮತ್ತು ಎಸ್​ಐಟಿ ನಡುವೆ ನೆಕ್​ ಟು ನೆಕ್ ರೇಸ್​ ಇರೋದು ಮಾತ್ರ ಸುಳ್ಳಲ್ಲ.

ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಕೊನೆಗೂ ಎಸ್​ಐಟಿ ಕೈಯಲ್ಲಿ ಲಾಕ್​ ಆಗಿದ್ದಾರೆ. ಬರೋಬ್ಬರಿ 34 ದಿನಗಳಿಂದ ವಿದೇಶದಲ್ಲಿ ಭೂಗತರಾಗಿದ್ದ ಪ್ರಜ್ವಲ್‌, ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮನೆಯೊಳಗೆ ಆಟವಾಡುತ್ತ ಕುಳಿತ್ತಿದ್ದಾಗ ಕುಸಿದು ಬಿದ್ದ ಮೇಲ್ಛಾವಣಿ.. ಉಸಿರು ಚೆಲ್ಲಿದ 2 ಮಕ್ಕಳು

ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಕೊನೆಗೂ ಲಾಕ್

ಜರ್ಮನಿಯಲ್ಲಿ ಝಾಂಡಾ ಊರಿದ್ದ ಸಂಸದ ಪ್ರಜ್ವಲ್​ ಲುಫ್ತಾನ್ಸಾ ಏರ್​ಲೈನ್ಸ್​ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಚ್​​ನಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದ್ರು. ಇನ್ನು ಪ್ರಜ್ವಲ್​ ಇದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್​ಎಫ್​ ಅಧಿಕಾರಿಗಳು ಪ್ರಜ್ವಲ್​ ರೇವಣ್ಣರನ್ನು ವಶಕ್ಕೆ ಪಡೆದು ಎಮಿಗ್ರೇಷನ್​ ಬಳಿಗೆ ಕರೆತಂದು ಬಳಿಕ ವಶಕ್ಕೆ ಪಡೆದಿದ್ದಾರೆ. ಐಸ್ ಪೈಸ್ ಆಟ ಆಡ್ತಾ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಕೊನೆಗೂ ಲಾಕ್ ಆಗಿದ್ದಾನೆ. ಅತ್ಯಾಚಾರದ ಆರೋಪ ಹೊತ್ತಿರುವ ಪ್ರಜ್ವಲ್ ಸದ್ಯ ಎಸ್​ಐಟಿ ವಶದಲ್ಲಿದ್ದಾರೆ. ಹಾಗಾದ್ರೆ ಮುಂದೇ ಈ ಕೇಸ್​ನಲ್ಲಿ ಏನೆಲ್ಲ ಆಗಬಹುದು? ಪ್ರಜ್ವಲ್​ಗೆ ಈ ಕೇಸ್​ನಲ್ಲಿ ಎದುರಾಗುವ ಕಂಟಕಗಳೇನು?

ಕಂಟಕ 1
ವಿಡಿಯೋ ಮಾಡಿದ ಮದರ್ ಡಿವೈಸ್!

ಪ್ರಜ್ವಲ್ ರೇವಣ್ಣನ ವಿಚಾರಣೆ ಶುರು ಮಾಡಿದಾಗ ಎಸ್​ಐಟಿ, ಮೊದಲು ಕೇಳಿದ ಪ್ರಶ್ನೆಯೇ ವಿಡಿಯೋ ಶೂಟ್ ಮಾಡಿದ ಮದರ್ ಡಿವೈಸ್ ಎಲ್ಲಿದೆ ಅಂತ. ಆ ಮೊಬೈಲ್ ಯಾವುದು?. ಈಗ ಮೊಬೈಲ್ ಎಲ್ಲಿದೆ ಅನ್ನೋ ಪ್ರಶ್ನೆಗಳನ್ನ ಎಸ್​ಐಟಿ ಪ್ರಜ್ವಲ್ ರೇವಣ್ಣ ಮುಂದಿಟ್ಟಿದೆ. ಮದರ್ ಡಿವೈಸ್‌ ಸಿಕ್ಕರೆ, ಆ ಮೊಬೈಲ್‌ನಲ್ಲಿದ್ದ ಪುರಾಣಗಳೆಲ್ಲ ಲಭ್ಯವಾಗ್ಲಿದೆ. ಆ ಮೊಬೈಲ್‌ನಲ್ಲಿ ಆರೋಪಗಳನ್ನೆಲ್ಲ ಸಾಬೀತುಪಡಿಸುವ ಸಾಕ್ಷ್ಯಗಳು ಸಿಕ್ಕರೆ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚು. ಒಂದ್ವೆಳೆ ವಿಡಿಯೋ ರೆಕಾರ್ಡ್ ಮಾಡಿದ ಮದರ್ ಡಿವೈಸ್ ಸಿಗದೇ ಇದ್ರೆ ಪ್ರಜ್ವಲ್​ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಮದರ್ ಡಿವೈಸ್ ಡೆಸ್ಟ್ರಾಯ್ ಮಾಡಿರೋ ಬಗ್ಗೆ ತನಿಖೆ ನಡೆಸುವ ಎಸ್​ಐಟಿ, ಸಾಕ್ಷಿ ನಾಶ ಮಾಡಿದ್ದು ಕಂಡು ಬಂದ್ರೆ ಮತ್ತೊಂದು ಸೆಕ್ಷನ್ ದಾಖಲಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಕಂಟಕ 2
ಕೇಸ್​​ನ ಎಫ್ಎಸ್ಎಲ್ ವರದಿ

ಪ್ರಜ್ವಲ್ ಪ್ರಕರಣದಲ್ಲಿ ತನಿಖಾ ತಂಡಕ್ಕೆ ಸಿಕ್ಕಿರುವ ಎಲ್ಲ ವಿಡಿಯೋಗಳನ್ನ ಎಫ್​ಎಸ್​ಎಲ್​ಗೆ ಕಳಿಸಿಕೊಡಲಾಗುತ್ತೆ. ಇಲ್ಲಿ ವಿಡಿಯೋದಲ್ಲಿರುವ ಧ್ವನಿಗೂ ಮತ್ತು ಪ್ರಜ್ವಲ್ ರೇವಣ್ಣನ ಧ್ವನಿಗೂ ಮ್ಯಾಚ್ ಮಾಡಿ ನೋಡಲಾಗುತ್ತೆ. ಒಂದ್ವೇಳೆ ಎಫ್​ಎಸ್​ಎಲ್ ವರದಿಯಲ್ಲಿ ವಿಡಿಯೋದಲ್ಲಿರುವ ಧ್ವನಿ ಪ್ರಜ್ವಲ್ ರೇವಣ್ಣಂದೇ ಅಂತ ಸಾಬೀತಾದ್ರೆ ಇದು ಪ್ರಜ್ವಲ್​ಗೆ ದೊಡ್ಡ ಕಂಟಕ ಆಗೋದ್ರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಈ ಪಾಯಿಂಟ್ ಪ್ರೂವಾದ್ರೆ ಅತ್ಯಾಚಾರದ ಕೇಸ್​​ ಇನ್ನಷ್ಟು ಸ್ಟ್ರಾಂಗ್ ಆಗಲಿದೆ. ಹೀಗಾಗಿ ಪ್ರಜ್ವಲ್​ಗೆ ಸಂಕಷ್ಟ ತಪ್ಪಿದಲ್ಲ.

ಇದನ್ನೂ ಓದಿ: ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ದಿಢೀರ್​ ಆಸ್ಪತ್ರೆಗೆ ದಾಖಲು

ಇಲ್ಲಿ ಇನ್ನೂ ವಿಚಾರ ಏನಂದ್ರೆ ಪ್ರಜ್ವಲ್ ರೇವಣ್ಣನ ಎನ್ನಲಾದ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಮುಖವಿಲ್ಲ. ಕೇವಲ ಧ್ವನಿ ಮಾತ್ರವೇ ಇರೋದ್ರಿಂದ್ರ ಈ ಧ್ವನಿ ಮೂಲಕವೇ ವಿಡಿಯೋದಲ್ಲಿರೋದು ಪ್ರಜ್ವಲ್ ಅಂತ ಪ್ರೂವ್ ಮಾಡ್ಬೇಕು. ಇದಲ್ಲದೇ ವಿಡಿಯೋದಲ್ಲಿ ವ್ಯಕ್ತಿಯ ಗುಪ್ತಾಂಗ ಕಾಣಿಸಿರುವ ಹಿನ್ನೆಲೆ ಮೆಡಿಕಲ್ ಚೇಕಪ್​​ನಲ್ಲಿ ಅದು ಮ್ಯಾಚ್ ಆದ್ರೆ ಇದು ಕೂಡ ಪ್ರಜ್ವಲ್​ಗೆ ಕಂಟಕವಾಗಲಿದೆ.

ಕಂಟಕ 3
ವಿಡಿಯೋ ಮಾಡಿದ್ದು ಪ್ರಜ್ವಲ್ ಎಂದಿರುವ ಸಂತ್ರಸ್ತೆಯ ಹೇಳಿಕೆ

ಪ್ರಜ್ವಲ್ ವಿರುದ್ಧ ಒಟ್ಟು 3 ಪ್ರಕರಣ ದಾಖಲಾಗಿವೆ.. ಒಂದು ಕಿಡ್ನ್ಯಾಪ್ ಕೇಸ್​ ಇನ್ನೆರಡು ಅತ್ಯಾಚಾರದ ಕೇಸ್.. ಅತ್ಯಾಚಾರದ ಕೇಸ್​ನಲ್ಲಿ ಸಂತ್ರಸ್ತೆಯ ಹೇಳಿಕೆ ಕೂಡ ಪ್ರಜ್ವಲ್​ಗೆ ಕಂಟಕವಾಗಲಿದೆ. ಒಂದು ಕೇಸ್​​ನಲ್ಲಿ ಸಂತ್ರಸ್ತೆ ಬಲವಂತವಾಗಿ ಅತ್ಯಾಚಾರ ಮಾಡಿರೋ ಹೇಳಿಕೆ ನೀಡಿದ್ರೆ, ಇನ್ನೊಂದು ಕೇಸ್​ನಲ್ಲಿ ಬೆದರಿಸಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ರು ಅನ್ನೋ ಹೇಳಿಕೆ ನೀಡಿದ್ದಾರೆ. ಇಷ್ಟೆ ಅಲ್ಲದೇ ಈ ವಿಚಾರದ ಬಗ್ಗೆ ಹೊರಗಡೆ ಬಾಯಿ ಬಿಟ್ಟರೆ ವಿಡಿಯೋಗಳನ್ನ ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ರು ಅಂತ ಸಂತಸ್ತ್ರೆ ಹೇಳಿಕೆ ನೀಡಿದ್ಳು. ಹೀಗಾಗಿ ಈ ಹೇಳಿಕೆಗಳ ಆಧಾರದ ಮೇಲೆ ಎಸ್​ಐಟಿ ತನಿಕೆ ನಡೆಸ್ತಿದ್ರು. ಸಂತಸ್ರ್ತೆಯರ ಹೇಳಿಕೆಗಳು ಪ್ರಜ್ವಲ್​ಗೆ ಕಂಟಕವಾಗುವ ಸಾಧ್ಯತೆ ಇದೆ.

ಪ್ರಜ್ವಲ್‌ ಆರೋಪಗಳನ್ನ ಒಪ್ಪಿಕೊಂಡ್ರೆ ತನಿಖೆ ಸುಗಮವಾಗಿ ಸಾಗಲಿದೆ. ಒಂದು ವೇಳೆ ಒಪ್ಪದಿದ್ರೆ, ಸಂತ್ರಸ್ತೆಯರ ಹೇಳಿಕೆಯ ಮೇಲೆ ಚಾರ್ಚ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ. 376(2) N ಅಂದ್ರೆ ನಿರಂತರ ಅತ್ಯಾಚಾರ ಕೇಸ್​ನಲ್ಲಿ ಸಂತ್ರಸ್ತೆ ಹೇಳಿಕೆ ತುಂಬಾ ಇಂಪಾರ್ಟ್‌ಟೆಂಟ್‌. ಸಂತ್ರಸ್ತೆಯರ ಹೇಳಿಕೆಗಳ ಆಧಾರದ ಮೇಲೆ ಚಾರ್ಚ್‌ಶೀಟ್ ಸಲ್ಲಿಕೆಗೆ ತಯಾರಿ ನಡೆಸಲಾಗ್ತಿದ್ದು, ಸ್ಥಳ ಮಹಜರು ನಡೆಸಿ, ಸಾಕ್ಷ್ಯಗಳ ಕಲೆ ಹಾಕಿದ ಬಳಿಕ ಆರೋಪಿ ಹೇಳಿಕೆ ದಾಖಲಿಸಿಕೊಂಡು ಚಾರ್ಚ್‌ಶೀಟ್‌ ಸಲ್ಲಿಕೆ ಮಾಡ್ಲಲಾಗುತ್ತೆ. ಹೀಗಾಗಿ ಸಂತ್ರಸ್ತೆಯರ ಹೇಳಿಕೆಯನ್ನ ಚಾರ್ಚ್​ಶೀಟ್​ನಲ್ಲಿ ಹಾಕಿದ್ರೆ ಇದು ಮುಳುವಾಗುವ ಎಲ್ಲಾ ಸಾಧ್ಯತೆಯಿದೆ.

ಕಂಟಕ 4
ಡಿಜಿಟಲ್ ಎವಿಡೆನ್ಸ್

ಇದು ಕೇಸ್‌ ಮೇಜರ್‌ ಎವಿಡೆನ್ಸ್‌. ಇಡೀ ಕೇಸ್‌ ಮೂಲ ಸತ್ವ ಇರೋದೇ ಡಿಜಿಟಲ್‌ ಎವಿಡೆನ್ಸ್‌ನಲ್ಲಿ. ಯಾಕಂದ್ರೆ, ಅಶ್ಲೀಲ ವಿಡಿಯೋಗಳು ಕ್ಯಾಪ್ಚರ್ ಆಗಿರೋದೇ ಮೊಬೈಲ್‌ನಲ್ಲಿ. ಹೀಗಾಗಿ ಡಿಜಿಟಲ್‌ ಎವಿಡೆನ್ಸ್‌ ಈ ಕೇಸ್‌ನಲ್ಲಿ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಪ್ರಜ್ವಲ್ ಬೆಂಗಳೂರಿಗೆ ಬರ್ತಿದ್ದಂತೆ ಎಸ್​ಐಟಿ ಪ್ರಜ್ವಲ್ ಬಳಿಯಿದ್ದ ಮೊಬೈಲ್​ನ್ನ ವಶಕ್ಕೆ ಪಡೆದುಕೊಂಡಿದ್ರು. ಸದ್ಯ ಬಳಸುತ್ತಿದ್ದ ಮೊಬೈಲ್​ನ್ನ ಕೂಡ ಎಪ್​ಎಸ್​​ಎಲ್​ಗೆ ರವಾನೆ ಮಾಡಲಾಗಿದೆ. ಒಂದ್ವೆಳೆ ಈ ಮೊಬೈಲ್​​ನಲ್ಲಿ ಹೊಸ ಇ-ಮೇಲ್​ನಿಂದ ಲಾಗಿನ್​ ಆಗಿದ್ರೆ, ಈ ಬಗ್ಗೆ ಎಸ್​ಐಟಿ ಪ್ರಶ್ನೆ ಮಾಡಲಿದೆ. ಇದಾದ ಮೇಲೆ ಹಳೆ ಇ-ಮೇಲ್ ಅಟ್ಯಾಚ್ ಮಾಡಿದ್ರೆ ಅಲ್ಲಿ ಸೇವ್ ಆಗಿರುವ ವಿಡಿಯೋ, ಫೋಟೋ ಒಂದ್ವೇಳೆ ರಿಟ್ರೀವಾದ್ರೆ, ಇದು ಕೂಡ ಪ್ರಜ್ವಲ್​​ಗೆ ಕಂಟಕವಾಗಲಿದೆ. ಮೊಬೈಲ್​​ನಿಂದ ಪ್ರಜ್ವಲ್​ಗೆ ಮಾತ್ರವಲ್ಲ, ಪ್ರಜ್ವಲ್​ ಜೊತೆ ಸಂಪರ್ಕದಲ್ಲಿದ್ದವರಿಗೂ ಸಂಕಷ್ಟ ಎದುರಾಗಲಿದೆ. ಪ್ರಜ್ವಲ್​ಗೆ ವಿದೇಶಕ್ಕೆ ತೆರಳಲು ಸಹಾಯ ಮಾಡಿದವರು ಮತ್ತು ವಿದೇಶದಲ್ಲಿ ಇರೋದಕ್ಕೆ ಯಾರೆಲ್ಲ ನೆರವಾಗಿದ್ರೋ ಅವರ ಹಿಸ್ಟರಿ ಮೊಬೈಲ್​ ಮೂಲಕ ಪತ್ತೆಯಾದ್ರೆ ಅವರಿಗೂ ವಿಚಾರಣೆ ಮಾಡುವ ಸಾಧ್ಯತೆ ಇರಲಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ.. ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ!

ಕಂಟಕ 5
ಆರೋಪಿಯ ವೈದ್ಯಕೀಯ ಪರೀಕ್ಷೆ

ಪ್ರಜ್ವಲ್​​ಗೆ ನಡೆಸುವ ವೈದ್ಯಕೀಯ ಪರೀಕ್ಷೆಗಳಿಂದಲೂ ವಿಡಿಯೋಗಳ ಅಸಲಿ ಸತ್ಯ ಹೊರ ಬರುವ ಸಾಧ್ಯತೆಯಿದೆ. ತನಿಖೆಯ ಭಾಗವಾಗಿ ಪ್ರಜ್ವಲ್​​ಗೆ ಕೆಲ ಮೆಡಿಕಲ್ ಟೆಸ್ಟ್​ಗಳನ್ನ ಮಾಡಲಾಗುತ್ತೆ. ಅದ್ರಲ್ಲಿ ಪ್ರಜ್ವಲ್​​ ಪುರಷತ್ವ ಪರೀಕ್ಷೆ, ವೀರ್ಯ ವಿಶ್ಲೇಷಣೆ. ಡಾಪ್ಲರ್‌ ಅಲ್ಟ್ರಾಸೌಂಡ್‌ ಪರೀಕ್ಷೆ, ಎನ್‌ಪಿಟಿ ಟೆಸ್ಟ್‌ ಹೀಗೆ ಹಲವು ಟೆಸ್ಟ್​ಗಳನ್ನ ಮಾಡಲಾಗುತ್ತೆ. ಹೀಗಾಗಿ ಈ ಪರೀಕ್ಷೆಗಳಿಂದಲೂ ಎಸ್​ಐಟಿಗೆ ಸಾಕಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ. ಟೆಸ್ಟ್​ನಲ್ಲಿ ವಯಾಗ್ರ ಸೇವಿಸಿದ್ದರೂ ಕೂಡ ಪತ್ತೆಯಾಗಲಿದೆ. ಒಂದು ವೇಳೆ ಪ್ರಜ್ವಲ್‌ ತಪ್ಪೆಸಗಿದ್ರೆ, ಈ ಪರೀಕ್ಷೆಗಳು ಕಂಟಕವಾಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ನಡೆಸಿದ್ರೂ, ಈ ಮೇಲಿನ ಅಂಶಗಳಿಂದ ಪ್ರಜ್ವಲ್​​ಗೆ ಮತ್ತಷ್ಟು ಸಂಕಷ್ಟ ಎದುರಾಗುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: BREAKING: ಪ್ರಜ್ವಲ್​ ರೇವಣ್ಣಗೆ ಬಿಗ್‌ ಶಾಕ್‌; ಕೋರ್ಟ್ ಮಹತ್ವದ ಆದೇಶ

ಅತ್ಯಚಾರ ಆರೋಪದಿಂದ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಿದ್ದಾರೆ. ಎಸ್​ಐಟಿ ಅಧಿಕಾರಿಗಳು ಎಲ್ಲ ಆಯಾಮದಿಂದ ತನಿಖೆ ನಡೆಸ್ತಿದ್ರೂ, ಎಸ್​ಐಟಿಗೂ ಕೂಡ ಹಲವು ಸವಾಲುಗಳಿವೆ. ಕೇಸ್​ನಲ್ಲಿರುವ ಪ್ರತಿಯೊಂದು ಲೂಪ್​ ಹೋಲ್​ಗಳನ್ನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿದ್ದಾರೆ ಅನ್ನೋದು ಮುಖ್ಯ. ಜೊತೆಗೆ ಆರೋಪಿಯ ಕೃತ್ಯವನ್ನು ಪ್ರೂವ್ ಮಾಡುವುದು ಕೂಡ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಕೇಸ್ ಸ್ಟ್ರಾಂಗ್​​ಗಾಗಿ ಎಸ್ಐಟಿ ಏನೆಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋದು ಕೂಡ ಅಷ್ಟೆ ಕುತೂಹಲಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​ ರೇವಣ್ಣ ಖಾಸಗಿ ವಿಡಿಯೋದಲ್ಲಿ ಇರೋದೇನು? ಮೆಡಿಕಲ್​ ಟೆಸ್ಟ್​​​ನಲ್ಲಿ ಏನೇನ್​ ಇರಲಿದೆ?

https://newsfirstlive.com/wp-content/uploads/2024/05/PRAJWAL_REVANNA_2.jpg

Load More