newsfirstkannada.com

ಬಿಜೆಪಿ ಮುಖಂಡ ದೇವರಾಜೇಗೌಡ, ಮಾಜಿ ಶಾಸಕ ಪ್ರಿತಮ್ ಗೌಡ ಆಪ್ತರ ಮನೆ ಮೇಲೆ SIT ದಾಳಿ.. ಏನೆಲ್ಲಾ ಸಿಕ್ತು ಗೊತ್ತಾ?

Share :

Published May 15, 2024 at 6:58am

Update May 15, 2024 at 10:03am

  ಹಾಸನದಲ್ಲಿ ಹಲವರ ಮನೆ ಮೇಲೆ ದಿಢೀರ್​ ದಾಳಿ ನಡೆಸಿದ SIT

  ಪೆನ್‌ಡ್ರೈವ್ ಬಗೆಗಿನ ಸಾಕ್ಷ್ಯಾಧಾರ ಹುಡಕಾಡಿದ SIT ಅಧಿಕಾರಿಗಳು

  ದೇವರಾಜೇಗೌಡ ಮನೆ ಮತ್ತು ಕಚೇರಿಯನ್ನು ಬಿಡದ ಅಧಿಕಾರಿಗಳು

ಹಾಸನದ ಅಶ್ಲೀಲ ವಿಡಿಯೋ ಹಗರಣ ರಾಜ್ಯ ಮಾತ್ರವಲ್ಲ ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದೆ. ಹಗರಣದಲ್ಲಿ ಎಸ್​ಐಟಿ ತನಿಖೆಯನ್ನ ತೀವ್ರಗೊಳಿಸಿದ್ದು ಮಾತ್ರವಲ್ಲದೆ ವ್ಯಾಪ್ತಿಯನ್ನ ವಿಸ್ತರಿಸುತ್ತಲೇ ಇದೆ. ಈ ನಡುವೆ ಅಶ್ಲೀಲ ವಿಡಿಯೋ ಹಂಚಿಕೆದಾರರಿಗೆ ಎಸ್​ಐಟಿ ಶಾಕ್ ಕೊಟ್ಟಿದೆ.

ಪ್ರೀತಂ ಗೌಡ ಆಪ್ತರ ಮನೆ ಮೇಲೆ ಎಸ್​ಐಟಿ ದಾಳಿ

ಕಳೆದ ಸಂಜೆ ಎಸ್‌ಐಟಿ ಹಾಸನದಲ್ಲಿ ಹಲವರ ಮನೆ ಮೇಲೆ ದಿಢೀರ್​ ದಾಳಿ ನಡೆಸಿದೆ. ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ ಮನೆ, ಬಾರ್, ಹೋಟೆಲ್ ಹಾಗೂ ಕಚೇರಿ ಸೇರಿದಂತೆ ಒಟ್ಟು ಏಳು ಕಡೆ ಏಕ ಕಾಲದಲ್ಲಿ 30 ಕ್ಕೂ ಹೆಚ್ಚು ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಪೆನ್‌ಡ್ರೈವ್ ಬಗೆಗಿನ ಸಾಕ್ಷ್ಯಾಧಾರ ಹುಡಕಾಡಿದ್ದಾರೆ.

ಇದನ್ನೂ ಓದಿ: ಕೆರೆಯಂತಾದ ಜಮೀನು, ಧರೆಗುಳಿದ 50ಕ್ಕೂ ವಿದ್ಯುತ್​ ಕಂಬಗಳು.. ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು ಒಂದಾ, ಎರಡಾ

ಪ್ರೀತಂ ಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಹೆಚ್.ಪಿ.ಕಿರಣ್, ವಲ್ಲಾಭಾಯ್ ರೋಡ್ ಪುನೀತ್ ಸೇರಿದಂತೆ ಹಲವರ ಬಾರ್, ಹೋಟೆಲ್, ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ತನಿಖೆಗೆ ಬೇಕಿರುವ ಮಾಹಿತಿ, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಬಾರ್​ ಮಾಲೀಕ ಶರತ್​ಗೆ ಸೇರಿದ ಬಿಎಂ ರಸ್ತೆಯಲ್ಲಿರುವ ಕ್ವಾಲಿಟಿ ಬಾರ್, ಲಾಡ್ಜ್, ಗೌರಿಕೊಪ್ಪಲಿನಲ್ಲಿರುವ ನಿವಾಸಗಳಿಗೂ ಭೇಟಿ ನೀಡಿ ಶೋಧನೆ ನಡೆಸಲಾಗಿದೆ. ಹೆಚ್.ಪಿ.ಕಿರಣ್ ಒಡೆತನದ ಕೃಷ್ಣ ಹೋಟೆಲ್, ಕಚೇರಿ ಹಾಗೂ ನಿವಾಸದಲ್ಲೂ ಶೋಧಕಾರ್ಯ ನಡೆಸಲಾಗಿದೆ. ಹೋಟೆಲ್, ಕಚೇರಿ ನಂತರ ಶಂಕರೀಪುರಂನಲ್ಲಿರುವ ಕಿರಣ್ ನಿವಾಸಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ಮತ್ತೊಬ್ಬ ಬಿಜೆಪಿ ಮುಖಂಡ ವಲ್ಲಭಾಯ್ ರೋಡ್ ಪುನೀತ್ ಅವರ ವಿವೇಕ ನಗರದ ಮನೆ ಮೇಲೂ ದಾಳಿ ಮಾಡಲಾಗಿದೆ.

ದೇವರಾಜೇಗೌಡ ಮನೆ ಮೇಲೂ ಎಸ್​ಐಟಿ ದಾಳಿ

ಪ್ರಿತಮ್ ಗೌಡ ಆಪ್ತರು ಮಾತ್ರವಲ್ಲದೇ ಈಗಾಗಲೇ ಬಂಧನವಾಗಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಮನೆ ಮೇಲೂ ಎಸ್​ಐಟಿ ದಾಳಿ ನಡೆಸಿದೆ. ರವೀಂದ್ರ ನಗರದ ಮನೆ ಹಾಗೂ ಹೊಳೆನರಸೀಪುರ ಪಟ್ಟಣದ ಕಾರಂಜಿ ಕಟ್ಟೆಯಲ್ಲಿರುವ ಕಚೇರಿ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿ ತಲಾಶ್ ಮಾಡಿದೆ.

ಇದನ್ನೂ ಓದಿ: ಹೆಂಡತಿ ಮುಂದೆನೇ ಗರ್ಲ್‌ಫ್ರೆಂಡ್ ಜೊತೆ ತಾಂಡವ್​ ರೋಮ್ಯಾನ್ಸ್; ಇದನ್ನು ನೋಡಿದ ಭಾಗ್ಯ ಫುಲ್​ ಶಾಕ್​

ಇನ್ನು ದಾಳಿಗೂ ಮುನ್ನ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿ ನಂತರವೇ ಎಸ್​ಐಟಿ ಅಧಿಕಾರಿಗಳು ಒಳ ಪ್ರವೇಶಿಸಿದ್ದಾರೆ. ಒಟ್ಟಾರೆ ಅಶ್ಲೀಲ ವಿಡಿಯೋ ಇದ್ದ ಪೆನ್‌ಡ್ರೈವ್ ವೈರಲ್ ಪ್ರಕರಣದ ತನಿಖೆಯನ್ನು ಎಸ್​ಐಟಿ ತೀವ್ರಗೊಳಿಸಿದೆ. ಮತ್ಯಾರ ಮೇಲೆ ಎಸ್​ಐಟಿ ಬಲೆ ಹಾಕುತ್ತೋ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಮುಖಂಡ ದೇವರಾಜೇಗೌಡ, ಮಾಜಿ ಶಾಸಕ ಪ್ರಿತಮ್ ಗೌಡ ಆಪ್ತರ ಮನೆ ಮೇಲೆ SIT ದಾಳಿ.. ಏನೆಲ್ಲಾ ಸಿಕ್ತು ಗೊತ್ತಾ?

https://newsfirstlive.com/wp-content/uploads/2024/05/PRITAM-GOWDA.jpg

Load More