/newsfirstlive-kannada/media/post_attachments/wp-content/uploads/2024/05/PRAJWAL-REVANNA.jpg)
ಇಷ್ಟು ದಿನದ ತನಿಖೆಯಲ್ಲಿ ಒಂದಷ್ಟು ಮೇಜರ್ ಪಾಯಿಂಟ್ಸ್ ನೋಟ್ ಮಾಡಿರೋ ಎಸ್ಐಟಿ, ಮೂಲ ವಿಚಾರಗಳು.. ಮೂಲ ದಾಖಲೆ.. ಮೂಲ ಮನುಷ್ಯರ ಲಿಸ್ಟ್​ ಸಿದ್ಧಪಡಿಸಲು ಸಜ್ಜಾಗಿದೆ. ಹಾಗಾದ್ರೆ ಯಾವ ವಿಚಾರವೆಲ್ಲಾ SIT ಟೀಂನ ಫಸ್ಟ್​ ಲಿಸ್ಟ್​ನಲ್ಲಿದೆ. ಕೇಸ್ ಟ್ರ್ಯಾಕ್ ಮಾಡಲು ಸ್ಮಾರ್ಟ್ ವರ್ಕ್​ಗೆ ಎಸ್ಐಟಿ ಮುಂದಾಗಿದೆ..
ಎಸ್​​ಐಟಿ ಲಿಸ್ಟ್​​​ ನಂಬರ್​​​ 1: ಹೊಳೆನರಸೀಪುರ ಎಫ್ಐಆರ್ ಕೇಸ್
ಹೊಳೆನರಸೀಪುರ ಎಫ್ಐಆರ್ ಕೇಸ್ ಮೇಲೆ ಎಸ್​​ಐಟಿ ಮೇನ್​ ಫೋಕಸ್ ಮಾಡಿದೆ.. ಆ ಎಫ್ಐಆರ್​ಗೆ ಸಂಬಂಧಿಸಿ ಎಸ್ಐಟಿ ತಂಡ ತನಿಖೆಯನ್ನ ಚುರುಕುಗೊಳಿಸಿದೆ. ಕೇಸ್​ನ ದೂರುದಾರೆ, ಆರೋಪಿಗಳು, ಕೃತ್ಯ ನಡೆದ ಸ್ಥಳ ಪ್ರೈಮ್​​ ಸಬ್ಜೆಕ್ಟ್​​ ಆಗಿ ಎಸ್​​ಐಟಿ ಪರಿಗಣಿಸಿದೆ. ಈಗಾಗಲೇ ದೂರುದಾರೆಯನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಂಡಿದೆ.
ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?
/newsfirstlive-kannada/media/post_attachments/wp-content/uploads/2024/05/SIT.jpg)
ಎಸ್​​ಐಟಿ ಲಿಸ್ಟ್​​ ನಂಬರ್​​​ 2: ವಿಡಿಯೋ ಮೂಲ
ವಿಡಿಯೋಗಳು ವೈರಲ್ ಆದ್ಮೇಲೆಯೇ ಈ ಕೇಸ್​​​ ಬೆಳಕಿಗೆ ಬಂದಿರೋದು ಎಲ್ಲರಿಗೂ ಗೊತ್ತು.. ವೈರಲ್ ಆದ ವಿಡಿಯೋಗಳಲ್ಲಿ ದೂರುದಾರೆಯ ವಿಡಿಯೋ ಸಹ ಇದೆ ಅಂತ ಎಸ್​ಐಟಿಗೆ ಗೊತ್ತಾಗಿದೆ. ವಿಡಿಯೋ ವೈರಲ್ ಆದ ಮೇಲೆಯೇ ಸಂತ್ರಸ್ತೆ ದೂರು ನೀಡಿದ್ದಾರೆ. ಆ ವಿಡಿಯೋಗಳು ಎಲ್ಲಿಂದ ಬಂತು ಅನ್ನೋದನ್ನ ಮೊದಲು ನೋಟ್ ಮಾಡ್ಕೊಳ್ಳಲಿದೆ.. ಅದಕ್ಕೆ ಮೂಲ ಕಾರ್ತಿಕ್​ ಅನ್ನೋದು ಎಸ್​​ಐಟಿಗೆ ಕನ್ಫರ್ಮ್ ಆಗಿದೆ.. ಹೀಗಾಗಿ ಪೆನ್​​ಡ್ರೈವ್, ವಿಡಿಯೋ ಸರ್ಕ್ಯೂಲೇಟ್​ಗೇ ಫಸ್ಟ್​ಸ್ಟೆಪ್​ ಕಾರ್ತಿಕ್ ಅಂತ ಎಸ್​ಐಟಿ ಆತನ ಮೇಲೆ ಫೋಕಸ್​​ ಮಾಡಿದೆ.
ಎಸ್​​ಐಟಿ ಲಿಸ್ಟ್​​​ ನಂಬರ್​​​ 3: ವಿಡಿಯೋ ವೈರಲ್​​
ಪೆನ್​ಡ್ರೈವ್ ಇದ್ದಿದ್ದು ಸತ್ಯ, ವೈರಲ್ ಆಗೋವರೆಗೂ ಶೇರ್ ಮಾಡಿದ್ಯಾರು? ಈಗಾಗಲೇ ಪೆನ್​ಡ್ರೈವ್​ ಫಸ್ಟ್ ಕಾಪಿ ಇದ್ದಿದ್ದು ಇಬ್ಬರ ಹತ್ರ ಅನ್ನೋ ಮಾಹಿತಿ ಎಸ್​​ಐಟಿಗೆ ಸಿಕ್ಕಿದೆ.. ಒಂದು ಮಾಜಿ ಡ್ರೈವರ್ ಕಾರ್ತಿಕ್ ಹಾಗೂ ಲಾಯರ್ ದೇವರಾಜೇಗೌಡ.. ಈ ವಿಚಾರವನ್ನ ಇಬ್ಬರೂ ಸಹ ಒಪ್ಪಿದ್ದು ಶೇರ್ ಮಾಡಿಲ್ಲ ಅಂತಾರೆ.. ಹೀಗಾಗಿ ಕಾರ್ತಿಕ್ ಮತ್ತು ದೇವರಾಜೇಗೌಡರನ್ನ ಎಸ್​​ಐಟಿ ವಿಚಾರಣೆ ಮಾಡಲಿದೆ.. ಅಲ್ಲದೇ ಸಿಸ್ಟಮ್​ಗೆ ಕಾಪಿ ಮಾಡಿ ಪೆನ್​ಡ್ರೈವ್​ಗೆ ಹಾಕಿರೋ ಬಗ್ಗೆ ಶಂಕೆ ಸಹ ಇದೆ.
/newsfirstlive-kannada/media/post_attachments/wp-content/uploads/2024/05/prajwal-revanna6-1.jpg)
ಈ ಕಾರಣಕ್ಕೆ ಕಾರ್ತಿಕ್ ಮನೆ ಪರಿಶೀಲನೆಗೆ ಎಸ್​ಐಟಿ ಮುಂದಾಗಲಿದೆ. ಮನೇಲಿ ಬೇರೆ ಡಿವೈಸ್​ಗಳಲ್ಲೂ ವಿಡಿಯೋ ಇದ್ಯಾ ಅನ್ನೋದ್ರ ಬಗ್ಗೆ ಚೆಕ್ ಮಾಡಲಿದೆ.. ಇತ್ತ ದೇವರಾಜೇಗೌಡನ ವಿಚಾರಣೆ ನಡೆದಿದೆ.. ಮೊಬೈಲ್​​ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಎಸ್​​ಐಟಿ ಲಿಸ್ಟ್​​​ ನಂಬರ್​​​ 4: ಅನುಮಾನಸ್ಪದ ವ್ಯಕ್ತಿ ನವೀನ್​ಗೌಡ
ಪೆನ್​ಡ್ರೈವ್, ವಿಡಿಯೋ ಸರ್ಕ್ಯೂಲೇಟ್​ನಲ್ಲಿ ನವೀನ್ ಗೌಡ ಹೆಸರು ಆರಂಭದಲ್ಲಿ ಕೇಳಿ ಬಂದಿತ್ತು. ಈಗಾಗ್ಲೇ ಆತನ ವಿರುದ್ಧ ಹಾಸನ ಸೆನ್ ಠಾಣೆಯಲ್ಲಿ ಕೇಸ್ ಸಹ ದಾಖಲಾಗಿದೆ. ಈ ಕೇಸ್​​​ ಸಂಬಂಧ ನವೀನ್​ಗೌಡ ವಿಚಾರಣೆಯನ್ನೂ ಸಹ ಎಸ್ಐಟಿ ನಡೆಸಿದೆ. ವಿಚಾರಣೆಯಲ್ಲಿ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಅಂತ ನವೀನ್​​ ಹೇಳಿದ್ದಾನೆ. ಅಲ್ಲದೆ, ನನ್ನ ಬಳಿ ಯಾವುದೇ ಪೆನ್​ಡ್ರೈವ್​ ಇಲ್ಲ ಅಂತ ನವೀನ್​​ಗೌಡ ಹೇಳಿದ್ದರೂ ಎಸ್ಐಟಿಯ ತಂಡ ಕಣ್ಣಿಟ್ಟಿದೆ.
ಒಟ್ಟಾರೆ, ಈ ನಾಲ್ಕು ಅಂಶಗಳು ಕೇಸ್​ನ ಪ್ರೈಮ್ ಸಬ್ಜೆಕ್ಟ್ ಆಗಿದೆ.. ನಂತರ ಈ ಕೇಸ್​ನ ಬೇರೆ ಬೇರೆ ಸಂತ್ರಸ್ತೆಯರು, ಬೇರೆ ಬೇರೆ ಆರೋಪಿಗಳು ಆ್ಯಡ್ ಆಗೋ ಸಾಧ್ಯತೆ ಸಹ ಇದೆ.. ಸದ್ಯಕ್ಕೆ ಈ ನಾಲ್ಕು ಅಂಶಗಳ ಮೇಲೆ ಫೋಕಸ್ ಮಾಡಿ SIT ಸ್ಮಾರ್ಟ್ ವರ್ಕ್ ಮಾಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us