newsfirstkannada.com

ಹೆಚ್‌.ಡಿ ರೇವಣ್ಣಗೆ ಬಿಗ್ ಶಾಕ್‌.. ಹಾಸನದ ಫಾರ್ಮ್‌ಹೌಸ್‌ಗೆ SIT ತಂಡ ಭೇಟಿ; ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್!

Share :

Published May 3, 2024 at 11:28am

Update May 3, 2024 at 11:29am

    ಎಚ್.ಡಿ ರೇವಣ್ಣ ಅವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ

    ಇಂದು ಬೆಳ್ಳಂಬೆಳಗ್ಗೆ ಹಾಸನಕ್ಕೆ ಭೇಟಿ ಕೊಟ್ಟ SIT ಅಧಿಕಾರಿಗಳ ತಂಡ

    ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಎರಡು ಫಾರ್ಮ್‌ಹೌಸ್‌ಗೂ ಭೇಟಿ

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ತನಿಖೆ ಚುರುಕಾಗಿದೆ. ಇಂದು ಬೆಳ್ಳಂಬೆಳಗ್ಗೆ ಎಸ್‌ಐಟಿ ಅಧಿಕಾರಿಗಳ ತಂಡ ಹಾಸನ ಜಿಲ್ಲೆಗೆ ಆಗಮಿಸಿದ್ದು, ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಇಂದು ಮುಂಜಾನೆ 3.15ಕ್ಕೆ ಐದು ವಾಹನಗಳಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಸನ ಜಿಲ್ಲೆಗೆ ಆಗಮಿಸಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ಎಚ್.ಡಿ ರೇವಣ್ಣ ಅವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಎಸ್‌ಪಿ ಸೀಮಾ ಲಾಠ್ಕರ್ ನೇತೃತ್ವದ ಎಸ್‌ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ಹೆಚ್‌.ಡಿ ರೇವಣ್ಣಗೆ ಕೋರ್ಟ್‌ನಲ್ಲಿ ಅಗ್ನಿ ಪರೀಕ್ಷೆ; ಇಂದೇ ಬಂಧನ? 

ಇದೇ ವೇಳೆ ಹೊಳೆನರಸೀಪುರ ತಾಲ್ಲೂಕಿನ ಘನ್ನಿಕಡ ಹಾಗೂ ಕಾಮೇನಹಳ್ಳಿ ಗ್ರಾಮದ ಬಳಿ ಇರುವ ಇನ್ನೆರಡು ಫಾರ್ಮ್‌ಹೌಸ್‌ಗೂ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಪ್ರಮುಖವಾಗಿ ಅಶ್ಲೀಲ ವಿಡಿಯೋ ಚಿತ್ರೀಕರಣದ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪಡುವಲಹಿಪ್ಪೆ ಫಾರ್ಮ್‌ಹೌಸ್‌ನಲ್ಲಿ ಅಸ್ಸಾಂ, ಬಿಹಾರ ಮೂಲದ ಕಾರ್ಮಿಕರು ಇದ್ದಾರೆ. ಕೆಲ ನಿಮಿಷಗಳ ಕಾಲ ಕಾರ್ಮಿಕರಿಂದ ಎಸ್‌ಐಟಿ ತಂಡ ಮಾಹಿತಿ ಪಡೆದುಕೊಂಡಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರು ಫಾರ್ಮ್‌ಹೌಸ್‌ಗೆ ಎಷ್ಟು ದಿನಕ್ಕೊಮ್ಮೆ ಬರುತ್ತಿದ್ದರು. ಇಲ್ಲಿಯೇ ಉಳಿದುಕೊಳ್ಳುತ್ತಿದ್ದಾರಾ ಎಂಬೆಲ್ಲಾ ವಿಷಯಗಳ ಬಗ್ಗೆ ಎಸ್‌ಐಟಿ ತಂಡ ಮಾಹಿತಿ ಕಲೆ ಹಾಕಿದೆ. ವಿಡಿಯೋ ಚಿತ್ರೀಕರಣ ನಡೆದಿದೆ ಎನ್ನುವ ಬಗ್ಗೆಯೂ ಎಸ್‌ಐಟಿ ಟೀಮ್‌ ಮಾಹಿತಿ ಸಂಗ್ರಹಿಸಿ ತೆರಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್‌.ಡಿ ರೇವಣ್ಣಗೆ ಬಿಗ್ ಶಾಕ್‌.. ಹಾಸನದ ಫಾರ್ಮ್‌ಹೌಸ್‌ಗೆ SIT ತಂಡ ಭೇಟಿ; ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್!

https://newsfirstlive.com/wp-content/uploads/2024/05/prajwal-revanna3-1.jpg

Load More