/newsfirstlive-kannada/media/post_attachments/wp-content/uploads/2024/05/prajwal-revanna-1-1.jpg)
ಹಾಸನ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ. 34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್​ ರೇವಣ್ಣ ಬೆಂಗಳೂರು ಏರ್​ಪೋರ್ಟ್​ಗೆ ಬಂದಿಳಿದಂತೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮಹಿಳಾ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್ ಅವರನ್ನ ಬಂಧಿಸಿದ್ದಾರೆ.
ಮಧ್ಯರಾತ್ರಿ 12;30ರ ಸುಮಾರಿಗೆ ಅವರನ್ನು ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ರೇವಣ್ಣನವರನ್ನು ಅರೆಸ್ಟ್​ ಮಾಡಿದ್ದಾರೆ. ಕೆಂಪೇಗೌಡ ಏರ್​ಪೋರ್ಟ್​ಗೆ ಬಂದು ಇಳಿದಂತೆ ಸುಮನ್​ ಕರ್ನೇಕರ್​ ಅವರ ಟೀಂ ಅವರನ್ನು ಬಂಧಿಸಿದ್ದಾರೆ. ನಾಲ್ಕೈದು ಮಹಿಳಾ ಅಧಿಕಾರಿಗಳು ಪ್ರಜ್ವಲ್​ ಅವರನ್ನು ಬಂಧಿಸಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಜ್ವಲ್​ ಅವರನ್ನು ಅರೆಸ್ಟ್​ ಮಾಡಲು ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan)
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan) May 30, 2024
">May 30, 2024
ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್​ ಅರೆಸ್ಟ್​?
ಅತ್ಯಾಚಾರ ಆರೋಪ ಪ್ರಕರಣವಾಗಿದ್ದರಿಂದ. ಈ ಪ್ರಕರಣದ ಕುರಿತು ಸಂತ್ರಸ್ತೆಯರು ಮುಜುಗರಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಮಹಿಳಾ ತಂಡವನ್ನು ಅಧಿಕಾರಿಗಳು ನೇಮಿಸುತ್ತಾರೆ. ಅದರಂತೆ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ಮಹಿಳಾ ತಂಡವನ್ನು ರಚಿಸಲಾಗಿತ್ತು. ಹಾಗಾಗಿ ಬೆಂಗಳೂರು ಏರ್​ಪೋರ್ಟ್​ಗೆ ಬಂದ ಪ್ರಜ್ವಲ್​ ರೇವಣ್ಣನವರನ್ನು ಸುಮನ್​ ಕರ್ನೇಕರ್​ ಅವರ ತಂಡ ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us