newsfirstkannada.com

3ನೇ ದಿನವೂ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್‌ಗೆ ಫುಲ್‌ ಡ್ರಿಲ್; ತಬ್ಬಿಬ್ಬುಗೊಂಡ ಹಾಸನ MP; ಬಾಯ್ಬಿಟ್ಟಿದ್ದೇನು?

Share :

Published June 2, 2024 at 8:43pm

    ಬಂಧನದಿಂದ ಹಿಡಿದು ವಿಚಾರಣೆವರೆಗೂ ಪ್ರಜ್ವಲ್ ಸುತ್ತ ಹೆಣ್ಮಕ್ಕಳೇ!

    ಪ್ರಜ್ವಲ್​​ನನ್ನ SIT ಮಹಿಳಾ ಅಧಿಕಾರಿಗಳು ಬಂಧಿಸಿ ಕರೆ ತಂದಿದ್ದರು

    SIT ಅಧಿಕಾರಿಗಳ ಮುಂದೆ ಪ್ರಜ್ವಲ್‌ ರೇವಣ್ಣ ಏನು ಹೇಳುತ್ತಿದ್ದಾರೆ?

ಮಹಿಳೆಯರು ಅಡುಗೆ ಮಾಡೋದಿಕ್ಕಷ್ಟೇ ಸೀಮಿತ ಅನ್ನೋ ಕಾಲ ಬದಲಾಗಿದೆ. ನಾರಿಶಕ್ತಿಯನ್ನು ಅಪಮಾನಗೊಳಿಸಿದ್ದವರೇ ಈಗ ಬೆರಗಾಗುವಂತೆ ಮಾಡಿದೆ. ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಾರಿಶಕ್ತಿ ಅನಾವರಣ ಆಗಿದೆ. ಪ್ರಜ್ವಲ್ ರೇವಣ್ಣ ಬಂಧಿಸುವುದರಿಂದ ಹಿಡಿದು ಕಸ್ಟಡಿಗೆ ಪಡೆಯುವವರೆಗೂ ಎಸ್​ಐಟಿ ಮಹಿಳಾ ಅಧಿಕಾರಿಶಕ್ತಿ ಮಾರ್ಧನಿಸಿದೆ.

ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ 6 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿದೆ. ಸಂಸದನಾಗಿ ಬಿಂದಾಸ್ ಲೈಫ್ ಮಾಡ್ತಿದ್ದ ಪ್ರಜ್ವಲ್​​ ಈಗ ಎಸ್​ಐಟಿ ಬೇಡಿಯಲ್ಲಿ ಬಂಧಿ. ಕತ್ತಲೆ ಜಗತ್ತಿನಲ್ಲಿ ಖುಷಿ ಅನುಭವಿಸಿದ್ದ ಪ್ರಜ್ವಲ್​ ರೇವಣ್ಣ ಸುತ್ತ ಮಹಿಳಾ ಅಧಿಕಾರಿಗಳೇ ಕಬಂಧಬಾಹು ಚಾಚಿದ್ದಾರೆ. ಫ್ರೀ ಬರ್ಡ್​​ ಆಗಿದ್ದ ಪ್ರಜ್ವಲ್​ ರೇವಣ್ಣ ಮಹಿಳಾ ಪೊಲೀಸರ ತೆಕ್ಕೆಯಲ್ಲಿ ವಿಲವಿಲ ಒದ್ದಾಡುವಂತಾಗಿದೆ.

ಪ್ರಜ್ವಲ್ ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳ ಪಾತ್ರ!

4 ಗೋಡೆಗಳ ಮಧ್ಯೆ ನಡೆದಿದ್ದ ವಿಡಿಯೋ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಜಗತ್ತು ಸುತ್ತಲು ಹೊರಟಿದ್ದರು. 34 ದಿನಗಳ ಬಳಿಕ ದೇಶಕ್ಕೆ ಮರಳಿದ ಪ್ರಜ್ವಲ್ ರೇವಣ್ಣ​ ಬಂಧನದಿಂದ ಹಿಡಿದು, ನ್ಯಾಯಾಲಯಕ್ಕೆ ಹಾಜರುಪಡಿಸುವುದು ಹಾಗೂ ವಿಚಾರಣೆಯತನಕವೂ ಮಹಿಳಾ ಅಧಿಕಾರಿಗಳ ಪಾತ್ರವೇ ದೊಡ್ಡದಿದೆ. ಎಸ್​​ಪಿ ಸುಮನ್ ಪನ್ನೇಕರ್ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳಿಂದಲೇ ಪ್ರಕರಣದ ವಿಚಾರಣೆ ನಡೀತಿದೆ. ಪ್ರಜ್ವಲ್ ರೇವಣ್ಣ ಸ್ಟೇಟ್​​​​ಮೆಂಟ್ ರೆಕಾರ್ಡ್ ಮಾಡುವುದು. ಎವಿಡೆನ್ಸ್ ಪರಿಶೀಲನೆ ಸೇರಿ ಎಲ್ಲವನ್ನೂ ಮಹಿಳಾ ಅಧಿಕಾರಿಗಳೇ ನಿಭಾಯಿಸ್ತಿದ್ದಾರೆ.

ಮೊನ್ನೆ ಮೇ 31ರಂದು ರಾತ್ರಿ 12.45ಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್ ರೇವಣ್ಣ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ಮಹಿಳಾ ಅಧಿಕಾರಿಗಳೇ ಬಂಧಿಸಿ ಕರೆ ತಂದಿದ್ದರು. ಬುಲೆರೋ ವಾಹನದಲ್ಲಿ ಪ್ರಜ್ವಲ್‌ನನ್ನು ಕರೆತರುವ ವೇಳೆ ಚಾಲಕನನ್ನ ಹೊರತುಪಡಿಸಿ ಉಳಿದವರೆಲ್ಲರೂ ಮಹಿಳಾ ಅಧಿಕಾರಿಗಳೇ ಆಗಿದ್ದರು. ಮೊನ್ನೆ ರಾತ್ರಿ ಬಂಧಿಸಿದ್ದ ವೇಳೆ ಮಹಿಳಾ ಪೊಲೀಸರು ತಮ್ಮ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದು ಪ್ರಜ್ವಲ್​​ ರೇವಣ್ಣಗೆ ಸಿಟ್ಟು ತರಿಸಿತ್ತು. ಆರೋಪಿ ಸಂಸದನಾಗಿದ್ದು ಏನೇ ಕೊಸರಾಡಿದ್ರೂ ಪಟ್ಟು ಸಡಿಲಿಸದ ಮಹಿಳಾ ಪೊಲೀಸರು ದಿಟ್ಟತನದಿಂದ ಕರ್ತವ್ಯ ನಿಭಾಯಿಸಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯೊಬ್ಬನನ್ನು ಮಹಿಳಾ ಪೊಲೀಸ್ ಅಧಿಕಾರಿಗಳೇ ಬಂಧಿಸಿ ಕರೆತರುವ ವಿಚಾರ ಎಲ್ಲೆಡೆ ಸದ್ದುಮಾಡಿತ್ತು.

ಇದನ್ನೂ ಓದಿ: T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

ಪ್ರಜ್ವಲ್ ರೇವಣ್ಣಗೆ ತೀವ್ರ ವಿಚಾರಣೆ.. ತನಿಖೆಗೆ ಅಸಹಕಾರ!

ಎಸ್‌ಐಟಿ ವಶದಲ್ಲಿರುವ ಆರೋಪಿ ಪ್ರಜ್ವಲ್‌ ರೇವಣ್ಣಗೆ 3ನೇ ದಿನವೂ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಡ್ರಿಲ್ ನಡೆದಿದೆ. ಸಾಕ್ಷ್ಯಾಧಾರಗಳನ್ನ ಮುಂದಿಟ್ಟುಕೊಂಡು ಪ್ರಶ್ನೆಗಳ ಸುರಿಮಳೆಗೈಯ್ಯಲಾಗ್ತಿದೆ. ಮಹಿಳಾಧಿಕಾರಿಗಳ ಗಟ್ಟಿ ಪ್ರಶ್ನೆಗಳಿಗೆ ಪ್ರಜ್ವಲ್ ತಬ್ಬಿಬ್ಬುಕೊಂಡಿದ್ದು ತನಿಖೆಗೆ ಅಸಹಾಕಾರ ನೀಡ್ತಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು ಏನೇ ಕೇಳಿದ್ರೂ ಸಮರ್ಪಕವಾದ ಉತ್ತರ ನೀಡುತ್ತಿಲ್ವಂತೆ. ಖುದ್ದು ಹಿರಿಯ ಅಧಿಕಾರಿಗಳೇ ವಿಚಾರಣೆ ನಡೆಸಿದರೂ ಪ್ರಜ್ವಲ್ ರೇವಣ್ಣ ಸರಿಯಾದ ಉತ್ತರ ನೀಡುತ್ತಿಲ್ಲ. ಎಷ್ಟೇ ಪ್ರಶ್ನೆ ಕೇಳಿದರೂ ಒಂದೇ ಉತ್ತರ ನೀಡುತ್ತಿದ್ದು, ಇದು ನನ್ನ ವಿರುದ್ಧದ ರಾಜಕೀಯ ಪಿತೂರಿ ಎಂದಷ್ಟೇ ಹೇಳ್ತಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ನೀಡಿದ್ದು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಎಸ್​ಐಟಿಯಲ್ಲಿರುವ ಗಟ್ಟಿಗಿತ್ತಿ ಮಹಿಳಾಧಿಕಾರಿಗಳು ತನಿಖೆ ನಡೆಸ್ತಿದ್ದು ಪ್ರಜ್ವಲ್ ರೇವಣ್ಣ ಬಾಯಿ ಬಿಡಿಸ್ತಿದ್ದಾರೆ. ಒಟ್ಟಾರೆ, ಮಹಿಳೆಯರನ್ನು ವೈಯಕ್ತಿಕ ತೃಷೆಗೆ ಬಳಸಿಕೊಂಡಿದ್ದ ಆರೋಪಿ ಪ್ರಜ್ವಲ್​​​​ ರೇವಣ್ಣಗೆ ಮಹಿಳಾ ಅಧಿಕಾರಿಗಳೇ ಪ್ರಶ್ನೆ ಮಾಡ್ತಿರೋದು ವಿಪರ್ಯಾಸವೆನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3ನೇ ದಿನವೂ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್‌ಗೆ ಫುಲ್‌ ಡ್ರಿಲ್; ತಬ್ಬಿಬ್ಬುಗೊಂಡ ಹಾಸನ MP; ಬಾಯ್ಬಿಟ್ಟಿದ್ದೇನು?

https://newsfirstlive.com/wp-content/uploads/2024/06/prajwal-revanna2.jpg

Load More