newsfirstkannada.com

ರಾಮಾಯಣ ಆಧಾರಿತ ನಾಟಕದಲ್ಲಿ ಸೀತೆಗೆ ಅಪಮಾನ; ಪ್ರೊಫೆಸರ್​ ಸೇರಿ ಐವರು ವಿದ್ಯಾರ್ಥಿಗಳು ಅರೆಸ್ಟ್..!​

Share :

Published February 4, 2024 at 6:23am

    ಸಿಗರೇಟ್ ಸೇದಿದ ಸೀತೆ, ಆಕ್ಷೇಪಾರ್ಹ ಸಂಭಾಷಣೆ

    ಪುಣೆ ವಿವಿ ರಾಮಲೀಲಾ ನಾಟಕದಲ್ಲಿ ಭಾರೀ ವಿವಾದ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ಪುಣೆ: ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳು ರಾಮಾಯಣ ಆಧಾರಿತ ನಾಟಕದಲ್ಲಿ ‘ಸೀತೆ’ ಪಾತ್ರಧಾರಿಯೂ ಧೂಮಪಾನ ಮಾಡುತ್ತಿರೋ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ.

‘ರಾಮಲೀಲಾ’ ಆಧಾರಿತ ನಾಟಕದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್ ಮತ್ತು ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕ್ಷೇಪಾರ್ಹ ನಾಟಕವನ್ನು ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಿದ್ದರು. ಇದೇ ವೇಳೆ ಸೀತಾ ಮಾತೆಯ ಪಾತ್ರಧಾರಿ ಸಿಗರೇಟ್​ ಸೇದುತ್ತಿದ್ದ. ಇದರಿಂದ ಕುಪಿತಗೊಂಡ ಆರ್​ಎಸ್​ಎಸ್​ನ ವಿದ್ಯಾರ್ಥಿ ಘಟಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಎಬಿವಿಪಿ ಹಾಗೂ ಪುಣೆ ವಿಶ್ವವಿದ್ಯಾಲಯದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ.

ಇದನ್ನು ಓದಿ: ಹಣೆಗೆ ಕುಂಕುಮ ಬೇಡ ಅಂದ್ರಾ ಸಿಎಂ? ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಬ್ರಹ್ಮಾಸ್ತ್ರ! ಅಸಲಿಗೆ ಆಗಿದ್ದೇನು?

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಲಲಿತ ಕಲಾ ವಿಭಾಗ ಮುಖ್ಯಸ್ಥ ಡಾ ಪ್ರವೀಣ್ ಭೋಳೆ ಹಾಗೂ ವಿದ್ಯಾರ್ಥಿಗಳಾದ ಭವೇಶ್ ಪಾಟೀಲ್, ಜಯ್ ಪೆಡ್ನೇಕರ್, ಪ್ರಥಮೇಶ್ ಸಾವಂತ್, ರಿಷಿಕೇಶ್ ದಳವಿ ಮತ್ತು ಯಶ್ ಚಿಖ್ಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರಲಿ. ನಾಟಕ ಒಂದು ಉತ್ತಮವಾದ ರಂಗ ಕಲೆ. ಅದರಲ್ಲಿ ಅಭಿನಯವು ಸಮಾಜಕ್ಕೆ ಮಾದರಿಯಾಗ ಬೇಕೇ ಹೊರತು ಮಾರಕವಾಗಬಾರದು.. ಸದ್ಯ ದೇಶದೆಲ್ಲೆಡೆ ಪುಣೆ ವಿವಿ ವಿದ್ಯಾರ್ಥಿಗಳ ನಾಟಕ ಪ್ರದರ್ಶನ ಭಾರಿ ವಿವಾದಕ್ಕೆ ಕಾರಣವಾಗಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಾಯಣ ಆಧಾರಿತ ನಾಟಕದಲ್ಲಿ ಸೀತೆಗೆ ಅಪಮಾನ; ಪ್ರೊಫೆಸರ್​ ಸೇರಿ ಐವರು ವಿದ್ಯಾರ್ಥಿಗಳು ಅರೆಸ್ಟ್..!​

https://newsfirstlive.com/wp-content/uploads/2024/02/sita.jpg

Load More