/newsfirstlive-kannada/media/post_attachments/wp-content/uploads/2024/04/dog-2.jpg)
ಲಕ್ನೋ: ಆರು ವರ್ಷದ ಬಾಲಕಿಯ ಮೇಲೆ ಶ್ವಾನವೊಂದು ಅಟ್ಯಾಕ್ ಮಾಡಿರೋ ಶಾಕಿಂಗ್ ಘಟನೆ ಘಾಜಿಯಾಬಾದ್ನ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ. ನಾಯಿ ಏಕಾಏಕಿ ಬಾಲಕಿ ಮೇಲೆ ಅಟ್ಯಾಕ್ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶ್ವಾನದ ಮಾಲೀಕರ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ವನ್ಯಾ ಚೌಹಾನ್ ಎಂಬ ಬಾಲಕಿ ಸೈಕಲ್‌ನಲ್ಲಿ ಹೋಗುತ್ತಿದ್ದಳು. ಇದೇ ವೇಳೆ ಜರ್ಮನ್ ಶೆಫರ್ಡ್ ತಳಿಯ ಶ್ವಾನ ಏಕಾಏಕಿ ಬಾಲಕಿಯ ಮೇಲೆ ದಾಳಿ ಮಾಡಿದೆ. ಕೂಡಲೇ ಅಲ್ಲೇ ನಿಂತಿದ್ದ ಬಾಲಕಿ ತಾಯಿ ನಮಿತಾ ಚೌಹಾಣ್ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಶ್ವಾನದಿಂದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಶ್ವಾನ ಬಾಲಕಿಯ ಮೇಲೆ ದಾಳಿ ಮಾಡುತ್ತಿದ್ದಾಗ ಅದನ್ನು ನಿಯಂತ್ರಿಸಲು ಮಾಲೀಕರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
#breakingnews : when did this menace stop?
German shepherd dog attacks child in Ajnara Integrity Society in Ghaziabad. #Ghaziabad#DogAttack#AjnaraIntegrity#UttarPradesh#NCR#DelhiPolicepic.twitter.com/IjImfesXnU— The Subtitle guy(MP) (@thesubtitleguy) April 29, 2024
ಇದನ್ನೂ ಓದಿ:ಒಳ ಉಡುಪಿನಲ್ಲಿ 49 ಲಕ್ಷ ಮೌಲ್ಯದ ಚಿನ್ನ ಸಾಗಾಟ! ಬೆಂಗಳೂರು ಏರ್ಪೋರ್ಟ್ನಲ್ಲಿ ಇಬ್ಬರು ಮಹಿಳೆಯರ ಬಂಧನ
ನಾಯಿ ದಾಳಿಗೆ ಒಳಗಾದ ಬಾಲಕಿಗೆ ಕೈಗೆ ಹಾಗೂ ಸೊಂಟದ ಭಾಗದಲ್ಲಿ ಗಾಯಗಳಾಗಿವೆ. ಕೂಡಲೇ ಬಾಲಕಿ ತಾಯಿ ಆಕೆಯನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಿದ್ದಾರೆ. ಜೊತೆಗೆ ಬಾಲಕಿಯ ತಾಯಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289ರ ಅಡಿಯಲ್ಲಿ ನಾಯಿಯ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ರವಿಕುಮಾರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ