newsfirstkannada.com

ಸ್ಲ್ಯಾಪ್​ ಫೈಟ್​​ನಿಂದ ಮೆದುಳಿಗೆ ಭಾರೀ ಅಪಾಯ; ನೀವು ಓದಲೇಬೇಕಾದ ಸ್ಟೋರಿ!

Share :

Published September 27, 2024 at 6:14am

    ಅಮೆರಿಕಾದಲ್ಲಿ ಮನೆ ಮಾತಾಗಿರುವ ಸ್ಲ್ಯಾಪ್ ಫೈಟಿಂಗ್​ನಿಂದ ಸಮಸ್ಯೆ

    ನರರೋಗ ತಜ್ಞರು ಈ ಕ್ರೀಡೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಏಕೆ ಗೊತ್ತಾ?

    ಈ ಕ್ರೀಡೆಯಿಂದ ಮೆದುಳಿನ ಮೇಲೆ ಆಗುಲಿರುವ ಅಪಾಯಗಳೇನು ಗೊತ್ತಾ?

ಇತ್ತೀಚಿನ ಅಧ್ಯಯನಗಳು ಪ್ರೋಫೆಷನಲ್ ಸ್ಲ್ಯಾಪ್ ಫೈಟಿಂಗ್ ಕ್ರೀಡೆಯ ಬಗ್ಗೆ ಹಲವು ಕಳವಳಗಳನ್ನು ವ್ಯಕ್ತಪಡಿಸಿವೆ. ಪ್ರಮುಖವಾಗಿ ನರಮಂಡಲದ ಸಮಸ್ಯೆಗಳಿಗೆ ಈ ಕ್ರೀಡೆ ಕಾರಣವಾಗಲಿದೆ ಅನ್ನೋ ಆತಂಕವನ್ನು ಅಧ್ಯಯನಗಳು ಹೊರ ಹಾಕುತ್ತಿವೆ.

ಯುಎಸ್​ನಲ್ಲಿ ಮನೆ ಮಾತಾಗಿರುವ ಈ ಸ್ಲ್ಯಾಪ್ ಫೈಟ್​ನ ವಿಡಿಯೋಗಳನ್ನು ಗಮನಿಸಿರುವ ವೈದ್ಯರು ಈ ಕ್ರೀಡೆ ನರಮಂಡಲಕ್ಕೆ ಹಾನಿಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಯುಎಫ್​ಸಿ ಅಧ್ಯಕ್ಷರಾದ ಡಾನಾ ವೈಟ್ ಮಾಲೀಕತ್ವದಲ್ಲಿ ಈ ಒಂದು ಸ್ಲ್ಯಾಪ್ ಫೈಟ್​ ನಡೆಯುತ್ತದೆ. ಮೈಯಲ್ಲಿರುವ ಶಕ್ತಿಯನ್ನೆಲ್ಲಾ ಕಿತ್ತು ಎದುರಿಗಿರುವವರು ಒಬ್ಬರಿಗೊಬ್ಬರು ಕಪಾಳಕ್ಕೆ ಬಲವಾಗಿ ಹೊಡೆಯುವ ಈ ಕ್ರೀಡೆ ಮುಂದೆ ಸಾಕಷ್ಟು ಅಪಾಯಗಳನ್ನು ತಂದೊಡ್ಡಲಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಎಲಾನ್​ ಮಸ್ಕ್ ಪ್ರೀತಿಗೆ ಬಿದ್ರಾ ಜಾರ್ಜಿಯಾ ಮೆಲೋನಿ? ಇಟಲಿ ಪ್ರಧಾನಿಯನ್ನು ಗುಣಗಾನ ಮಾಡಿದ ಎಂದ ಟೆಸ್ಲಾ ಸಿಇಓ

ಪಿಟರ್ಸಬರ್​ ವಿಶ್ವವಿದ್ಯಾಲಯದ ನರರೋಗ ತಜ್ಞರು ಹೇಳುವ ಪ್ರಕಾರ ಈ ವಿಶ್ವವಿದ್ಯಾಲಯ ಮೊದಲ ಸೀಸನ್​ ಹಲವು ದೃಶ್ಯಗಳನ್ನು ನೋಡಿ ಹಲವು ಊಹೆಗಳನ್ನು ಮಾಡಿದೆ. ಶೇಕಡಾ 30 ರಷ್ಟು ಬಿದ್ದ ಹೊಡೆತಗಳು ನರಮಂಡಲದ ಸಮಸ್ಯೆಯನ್ನು ತಂದೊಡ್ಡಲಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಂಡತಿ ಬಿಕನಿಯಲ್ಲಿ ಓಡಾಡಲಿ ಅಂತ ಈ ದುಬೈ ಗಂಡ ಮಾಡಿದ್ದೇನು ಅಂತ ಕೇಳಿದ್ರೆ ಶಾಕ್ ಆಗ್ತಿರಾ!

ಕಪಾಳಕ್ಕೆ ಬಿದ್ದ 333 ಹೊಡೆತಗಳಲ್ಲಿ 97 ಹೊಡೆತಗಳನ್ನು ಪರಿಶೀಲಿಸಿ ನೋಡಿದಾಗ ತುಂಬಾ ಆಘಾತಕಾರಿಯಾಗಿವೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹೀಗೆ ಹೊಡೆತ ತಿಂದವರು ಆ ಕ್ಷಣ ಕಣ್ಣಿಗೆ ಕತ್ತಲು ಬರುವಂತ, ನಿಲ್ಲಲು ಸಾಧ್ಯವಾಗದಂತಹ. ವಾಂತಿ ಹಾಗೂ ವಿಸ್ಮೃತಿಯಂತಹ ಲಕ್ಷಣಗಳನ್ನು ಕಂಡಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಇಂತಹ ಆಟಗಳನ್ನು ಆದಷ್ಟು ನಿಷೇಧಿಸುವುದು ಉತ್ತಮ ಎಂದೇ ಹೇಳುತ್ತಿದ್ದಾರೆ.

ಸಂಶೋಧನೆಯಲ್ಲಿ ಪ್ರಮುಖರಾಗಿರುವ ರಾಜ್ ಸ್ವರೂಪ್ ಲಾವಡಿ ಅವರು ಹೇಳುವ ಪ್ರಕಾರ, ಸ್ಲ್ಯಾಪ್ ಫೈಟಿಂಗ್​ನಂತಹ ಕ್ರೀಡೆಗಳನ್ನು ಬ್ಯಾನ್ ಮಾಡುವುದು ಅಷ್ಟು ಸರಳವಲ್ಲ. ಆದ್ರೆ ಈ ರೀತಿಯ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ. ನಮ್ಮ ಗುರಿಯಿರುವುದು ವೃತ್ತಿಪರ ಕ್ರೀಡೆಯಾಗಿರುವ ಸ್ಲ್ಯಾಪ್ ಫೈಟಿಂಗ್​ನ ಕ್ರೀಡಾಳುಗಳನ್ನು ನರರೋಗ ಸಮಸ್ಯೆಯಿಂದ ನರಳದಂತೆ ಕಾಪಾಡುವುದೇ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ:Russia-Ukraine ಯುದ್ಧಕ್ಕೆ ಭಯಾನಕ ತಿರುವು; ಉಕ್ರೇನ್​ ಬೆನ್ನಿಗೆ ನಿಂತವಾ ಪಾಶ್ಚಾತ್ಯ ರಾಷ್ಟ್ರಗಳು? ಮುಂದೇನು..

ಇನ್ನುಳಿದ ಅನೇಕ ವೈದ್ಯಕೀಯ ವೃತ್ತಿಪರರೂ ಕೂಡ ಈ ಕ್ರೀಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಒಂದು ಕ್ರೀಡೆ ಮೆದುಳಿನ ನರಮಂಡಲಕ್ಕೆ ಹಾನಿಯುಂಟು ಮಾಡುವ ಎಲ್ಲಾ ಸಾಧ್ಯತೆಗಳಿರುವ ಬಗ್ಗೆ ಹೇಳಿದ್ದಾರೆ. ಹೀಗಾಗಿ ಈ ಕ್ರೀಡೆಯಲ್ಲಿ ಹಲವು ಸುರಕ್ಷಾ ಕ್ರಮಗಳನ್ನು ಅಳವಡಿಸುವುದು ಸೂಕ್ತ ಎಂದೇ ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಲ್ಯಾಪ್​ ಫೈಟ್​​ನಿಂದ ಮೆದುಳಿಗೆ ಭಾರೀ ಅಪಾಯ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/09/SLAP-FIGHTING.jpg

Load More