newsfirstkannada.com

ಪ್ರಧಾನಿ ಮೇಲೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು.. ಓರ್ವ ಶಂಕಿತ ಅರೆಸ್ಟ್

Share :

Published May 15, 2024 at 11:13pm

  ಪ್ರಧಾನಿ ಮೇಲೆ 4 ಸುತ್ತು ಗುಂಡುಗಳನ್ನ ಹಾರಿಸಿದ ಕಿರಾತಕರು

  ಬೆಂಬಲಿಗರ ಜೊತೆ ಸಭೆ ನಡೆಸುವಾಗ ದುಷ್ಕರ್ಮಿಗಳಿಂದ ದಾಳಿ

  ಗಂಭೀರವಾಗಿ ಗಾಯಗೊಂಡ ಪ್ರಧಾನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದ್ದು ಪ್ರಧಾನಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಬಲಿಗರನ್ನು ಭೇಟಿಯಾಗಲು ಆಗಮಿಸಿದ್ದ ವೇಳೆ ಸ್ಥಳೀಯ ಸಂಸ್ಕೃತಿಯ ಸಭಾಭವನದ ಮುಂದೆ ದುಷ್ಕರ್ಮಿಗಳು ಪ್ರಧಾನಿ ಮೇಲೆ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಓರ್ವ ಶಂಕಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಹ್ಯಾಂಡ್ಲೋವಾ ಪಟ್ಟಣದ ಹೌಸ್ ಆಫ್ ಕಲ್ಚರ್ ಹೊರಗೆ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದ ವೇಳೆ 4 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಅಪರಿಚಿತರು ಹಾರಿಸಿದ ಗುಂಡುಗಳು ಹೊಟ್ಟೆಗೆ ಬಿದ್ದಿದ್ದರಿಂದ ಪ್ರಧಾನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಬನಾಸ್ಕಿ ಬೈಸ್ಟ್ರಿಕ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಬಾಯ್ ​ಫ್ರೆಂಡ್​​ಗೆ ದುಬಾರಿ ಗಿಫ್ಟ್​ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!

ಸ್ಲೋವಾಕಿಯಾ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಅವರು ಪ್ರಧಾನಮಂತ್ರಿ ಮೇಲಿನ ಕ್ರೂರ ಮತ್ತು ನಿರ್ದಯ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ನಿರ್ಣಾಯಕ ಕ್ಷಣದಲ್ಲಿ ರಾಬರ್ಟ್ ಫಿಕೊಗೆ ಹೆಚ್ಚಿನ ಶಕ್ತಿ ಹಾಗೂ ಗಂಭೀರವಾದ ಗಾಯಗಳಿಂದ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೇಲೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು.. ಓರ್ವ ಶಂಕಿತ ಅರೆಸ್ಟ್

https://newsfirstlive.com/wp-content/uploads/2024/05/PM_FIRING_1.jpg

Load More