ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳಿಲ್ಲದೆ ಕೆಲಸ ಮಾಡುತ್ತೆ ಈ ಸ್ಮಾರ್ಟ್ರಿಂಗ್
ಸ್ಮಾರ್ಟ್ರಿಂಗ್ ನಗದು ರಹಿತ ವ್ಯವಹಾರ ಮಾಡಲು ಯೋಗ್ಯವಾಗಿದೆ
ವೈರ್ಲೆಸ್ ಪೇಮೆಂಟ್ ಚಿಪ್ಗಳನ್ನು ಒಳಗೊಂಡಿದೆ ಈ ಸ್ಮಾರ್ಟ್ರಿಂಗ್
ಭಾರತೀಯ ಸಂಸ್ಕೃತಿಯನ್ನು ಅರಿತವರೆಲ್ಲರೂ ಉಂಗುರವನ್ನು ತೊಡುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಇದೊಂದು ಫ್ಯಾಷನ್ ಆಗಿದೆ. ಮಾರುಕಟ್ಟೆಯಲ್ಲಿ ನಾನಾ ತರಹದ ಉಂಗುರಗಳು ಬಂದಿವೆ. ಅದರ ಸಾಲಿಗೆ ಸ್ಮಾರ್ಟ್ ಉಂಗುರಗಳು ಸೇರಿವೆ.
ಚಿನ್ನ, ಬೆಳ್ಳಿ, ಲೋಹದ ಉಂಗುರವನ್ನು ತೊಡುವವರಿದ್ದಾರೆ. ಆದರೀಗ ಸ್ಮಾರ್ಟ್ ಉಂಗುರಗಳು ಸಹ ಮಾರುಕಟ್ಟೆಗೆ ಧಾವಿಸಿದೆ. ಇವು ಸುಲಭವಾಗಿ ನಗದು ರಹಿತ ಪಾವತಿಯವನ್ನು ಮಾಡುವ ಕಾರ್ಯವನ್ನು ಮಾಡುತ್ತಿವೆ.
ಸ್ಮಾರ್ಟ್ ರಿಂಗ್ಗಳು ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳಿಲ್ಲದೆ ಮತ್ತು ಫೋನ್ಪೇ, ಪೇಟಿಯಂ ಅಗತ್ಯವಿಲ್ಲದೆ ನಗದು ರಹಿತ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಸ್ಮಾರ್ಟ್ರಿಂಗ್ ಅನ್ನು ಹಾಂಗ್ ಕಾಂಗ್ ಮೂಲಕ ಟೋಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ವೈರ್ಲೆಸ್ ಪೇಮೆಂಟ್ ಚಿಪ್ಗಳನ್ನು ಒಳಗೊಂಡಿದೆ.
ಸ್ಮಾರ್ಟ್ ರಿಂಗ್ ಫೋನ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ರಿಂಗ್ ಬಳಕೆದಾರರು ಆಯಾ ಆ್ಯಪ್ಗಳ ಮೂಲಕ ಬ್ಯಾಂಕ್ ಖಾತೆಯನ್ನ ಲಿಂಕ್ ಮಾಡಬೇಕು. ಇದರ ಅನ್ವಯ ಸ್ಮಾರ್ಟ್ ರಿಂಗ್ ಕಾರ್ಯ ನಿರ್ವಹಿಸುತ್ತದೆ.
ಮತ್ತೊಂದು ಅಚ್ಚರಿ ಸಂಗತಿ ಎಂದರೆ ಟೋಪಿ ಕಂಪನಿ ತಯಾರಿಸಿರುವ ಈ ಸ್ಮಾರ್ಟ್ರಿಂಗ್ ಅನ್ನು ಚಾರ್ಜ್ ಮಾಡಬೇಕಿದೆ. ಇದನ್ನು ಶಾಪಿಂಗ್ ಮಾಲ್ಗಳಲ್ಲಿರುವ ಪೇಮೆಂಟ್ ಯಂತ್ರದ ಬಳಿ ತೋರಿಸಿದಂತೆಯೇ ನಗದು ರಹಿತ ಪಾವತಿ ಮಾಡುತ್ತದೆ.
ಇದನ್ನೂ ಓದಿ: ಬೆಂಗಳೂರಲ್ಲಿ 18.28 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸೀಜ್.. ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ..?
ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಸ್ಮಾರ್ಟ್ರಿಂಗ್ ಗ್ರಾಹಕರ ಮನಸೆಳೆದಿದೆ. ಭಾರತದಲ್ಲೂ ಎಲೆಕ್ಟ್ರಾನಿಕ್ಸ್ ಸ್ಮಾರ್ಟ್ಅಪ್ ಎಂಬ ಕಂಪನಿ ಸೆವೆನ್ 7 ರಿಂಗ್ ಎಂಬ ಸ್ಮಾರ್ಟ್ರಿಂಗ್ ಪರಿಚಯಿಸಿದೆ. ಇದು 7 ಗಾತ್ರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ