ಪೇಜರ್ ಬಾಂಬ್ ದಾಳಿಗೆ ಒಂಭತ್ತು ಜನರು ಸಾವು
ಭಾರತಕ್ಕೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಆಮದು ಅಪಾಯವೇ?
ಭಾರತಕ್ಕೆ ಹಲವು ದೇಶಗಳಿಂದ ಬರುತ್ತಿದೆ ಎಲೆಕ್ಟ್ರಾನಿಕ್ಸ್ ವಸ್ತುಗಳು!
ಇತ್ತೀಚೆಗೆ ಲೆಬನಾನ್ನಲ್ಲಿ ಹಿಜ್ಬುಲ್ಲಾಗಳ ಮೇಲೆ ರಹಸ್ಯ ದಾಳಿ ನಡೆದಿತ್ತು. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್ ಸಾಧನವೇ ಸ್ಫೋಟಗೊಂಡು ಸಾವು ನೋವು ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ರೆ, 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಒಟ್ಟಿನಲ್ಲಿ ಪೇಜರ್ ಬಾಂಬ್ ಸ್ಫೋಟ ಜಾಗತಿಕ ಕಳವಳವನ್ನು ಹೆಚ್ಚಿಸಿದಲ್ಲದೆ, ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಆದರೀಗ ಇಂಟರ್ನೆಟ್ ಸಂಪರ್ಕವಿರುವ ಮತ್ತು ಸಂವಹನ ಸಾಧನವಾಗಿರುವ ಸ್ಮಾರ್ಟ್ಫೋನ್ಗಳು ಕೂಡ ಹೀಗೆ ಸ್ಫೋಟಗೊಳ್ಳಬಹುದೇ? ಎಂಬ ಅನುಮಾನ ಅನೇಕರಿಗೆ ಮೂಡಿದೆ. ಅದಕ್ಕೆ ಸರಿಯಾದ ಉತ್ತರ ಇಲ್ಲಿದೆ.
ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದೇ ಎಂಬ ಅನುಮಾನದ ಕುರಿತಾಗಿ ಭದ್ರತಾ ತಜ್ಞರಾದ ಮೌಕೇಶ್ ಸೈನಿ ಮಾತನಾಡಿದ್ದಾರೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಲಿಥಿಯಂ ಬ್ಯಾಟರಿ ಅಳವಡಿಸಲಾಗುತ್ತಿದೆ. ಇದು ಅಪಾಯಕಾರಿಯೂ ಹೌದು. ಶಾರ್ಟ್ ಸರ್ಕ್ಯೂಟ್ ವೇಳೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಜಬುಲ್ನ ಟಾಪ್ ಕಮಾಂಡರ್ನ ಕಥೆ ಮುಗಿಸಿದ ಇಸ್ರೇಲ್ ! ಯಾರು ಈ ಇಬ್ರಾಹಿಮ್ ಅಕಿಲ್..?
ಎಲ್ಲಾ ಲಿಥಿಯಂ ಬ್ಯಾಟರಿಗಳು ನಿರ್ವಹಣಾ ವ್ಯವಸ್ಥೆಯ (BMS) ಮೂಲಕ ನಿಯಂತ್ರಿಸಲ್ಪಡುವ ವಿಭಜಕವನ್ನು ಹೊಂದಿದೆ. ಯಾರಾದರೂ ಬ್ಯಾಟರಿ ಮ್ಯಾನೇಜಿಂಗ್ ಸಿಸ್ಟಂ ಅನ್ನು ಹ್ಯಾಕ್ ಮಾಡಿದರೆ ಶಾರ್ಟ್ ಸರ್ಕ್ಯೂಟ್ ಮಾಡಬಹುದು. ಬ್ಯಾಟರಿ ಮತ್ತು ಬ್ಯಾಟರಿ ಮ್ಯಾನೇಜಿಂಗ್ ಸಿಸ್ಟಂ ಲಿಥಿಯಂ ಮತ್ತು ಐಯಾನ್ನಲ್ಲಿ ಸ್ಫೋಟ ಮತ್ತು ಬೆಂಕಿ ತಡೆಗಟ್ಟುವಲ್ಲಿ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಪೇಜರ್ ಎಂದರೇನು? ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?
ಮತ್ತೋರ್ವ ಸೈಬರ್ ಸೆಕ್ಯುರಿಟಿ ತಜ್ಞ, ಪವನ್ ದುಗ್ಗಲ್ ಕೂಡ ಈ ಬಗ್ಗೆ ಮಾತನಾಡಿದ್ದು, ಪೇಜರ್ಗಳು ಸ್ಫೋಟಗೊಳ್ಳುವಂತಹ ಹ್ಯಾಕಿಂಗ್ ಸಿದ್ಧಾಂತವನ್ನು ಹೊಂದಿರಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಏಕೆಂದರೆ ಏಕಕಾಲದಲ್ಲಿ ಸ್ಫೋಟಗೊಳ್ಳಲು ಕೇಂದ್ರೀಕೃತ ನೆಟ್ವರ್ಕ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಮೇಜರ್ ಸಂಜಯ್ ಸೂರಿ ಕೂಡ ಈ ಬಗ್ಗೆ ಮಾತನಾಡಿದ್ದು, ಭಾರತವು ಚೀನಾ ಸೇರಿದಂತೆ ಹಲವು ದೇಶಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಅಪಾಯಕಾರಿಯಾಗಿದ್ದು, ಇಂತಹ ರೀತಿಯ ದಾಳಿಗೆ ಒಳಗಾಗಬೇಕಾಗುತ್ತದೆ ಎಂದಿದ್ದಾರೆ. ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸುವುದು ಹೆಚ್ಚು ಸೂಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ