/newsfirstlive-kannada/media/post_attachments/wp-content/uploads/2024/06/VIRAT_SMRITI.jpg)
ವಿರಾಟ್ ಕೊಹ್ಲಿ ಬ್ಯಾಟ್ ಬೀಸುವುದರಲ್ಲಿ ಚಾಣಕ್ಷ. ಅದೇ ರೀತಿ ಟೀಮ್ ಇಂಡಿಯಾದ ಮಹಿಳಾ ತಂಡದಲ್ಲೂ ಸ್ಮೃತಿ ಮಂದನಾ ಬ್ಯಾಟಿಂಗ್ ಮಾಡುವುದರಲ್ಲಿ ಶ್ರೇಷ್ಠ ಆಟಗಾರ್ತಿ. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯಲ್ ಟ್ರೋಫಿಯಲ್ಲಿ ಸ್ಮೃತಿ ಮಂದನಾ ಸತತ 2 ಶತಕ ಸಿಡಿಸಿದ್ದಾರೆ. ಅಲ್ಲದೇ ನಿನ್ನೆ ನಡೆದ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿಯಂತೆ ಸೇಮ್ ಟು ಸೇಮ್ ಬೌಲಿಂಗ್ ಮಾಡಿದ್ದಾರೆ.
ಇದನ್ನೂ ಓದಿ: RCBಯ ಅದೃಷ್ಟದ ಕ್ಯಾಪ್ಟನ್ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ
ವಿರಾಟ್ ಕೊಹ್ಲಿಯವರು ವಿಂಡೀಸ್ನಲ್ಲಿ ನಡೆಯುವ T20 ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತ ಸ್ಮೃತಿ ಮಂದನಾ, ಐಸಿಸಿ ನಡೆಸುತ್ತಿರುವ ಚಾಂಪಿಯನ್ಶಿಪ್ನಲ್ಲಿ ಬ್ಯಾಟಿಂಗ್, ಬೌಲಿಂಗ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಆದರೆ ಸ್ಮೃತಿ ಮಂದನಾ ಹಾಗೂ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುತ್ತಿರುವ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಈ ಇಬ್ಬರು ಸ್ಟಾರ್ ಪ್ಲೇಯರ್ಸ್ ಬೌಲಿಂಗ್ ಮಾಡುವ ಸ್ಟೈಲ್ ಹೋಲಿಕೆಯಾಗುತ್ತಿದೆ. ಇದರಿಂದ ಕ್ರಿಕೆಟ್ ಫ್ಯಾನ್ಸ್ ಎಲ್ಲ ಫುಲ್ ಶಾಕ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಬಟ್ಟೆಯಿಂದ ಚಪ್ಪಲಿವರೆಗೆ ಎಲ್ಲವೂ ಸೀಜ್.. ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ಕೊಟ್ಟ ಐ-ವಿಟ್ನೆಸ್‌ಗಳು; ಏನದು?
MAIDEN INTERNATIONAL WICKET FOR SMRITI MANDHANA ?? pic.twitter.com/ov2wwRvVHW
— Johns. (@CricCrazyJohns)
MAIDEN INTERNATIONAL WICKET FOR SMRITI MANDHANA 🇮🇳 pic.twitter.com/ov2wwRvVHW
— Johns. (@CricCrazyJohns) June 19, 2024
">June 19, 2024
ಇನ್ನು ನಿನ್ನೆ ಸೌತ್ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದನಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರರ್ಶನ ಮಾಡಿದ್ದಾರೆ. 120 ಎಸೆತಗಳಲ್ಲಿ 18 ಫೋರ್, 2 ಅಮೋಘವಾದ ಸಿಕ್ಸರ್ ಸಮೇತ 136 ರನ್ಗಳನ್ನು ಗಳಿಸಿ ಸಂಭ್ರಮಿಸಿದ್ದಾರೆ. ಇಷ್ಟೇ ಅಲ್ಲದೇ ಯಾವಾತ್ತೂ ಬೌಲಿಂಗ್ ಮಾಡದವರು, ನಿನ್ನೆಯ ಮ್ಯಾಚ್ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ 1 ವಿಕೆಟ್ ಅನ್ನು ಉರುಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಏನೇ ಆಗಲಿ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂದನಾ ಅವರ ಬೌಲಿಂಗ್ ಸ್ಟೈಲ್ ಅನ್ನು ಹೋಲಿಕೆ ಮಾಡಿ ಫೋಟೋ ಶೇರ್ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ