ರಾಜಾತಿಥ್ಯ ಹಗರಣ ಬಯಲಿಗೆ ಬರ್ತಿದ್ದಂತೆ ಜೈಲಿನ ಡಿಐಜಿ ಬದಲಾವಣೆ
ಕಾರಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ಮಹಿಳಾ ಡಿಐಜಿ ದಿವ್ಯಶ್ರೀ ನೇಮಕ
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ನೇಮಕರಾದ ಕೆ.ಸುರೇಶ್
ಬೆಂಗಳೂರು: ಪರಪ್ಪನ ಅಗ್ರಹಾರದ ಜೈಲಿನ ಅಕ್ರಮ ಬಯಲಾಗುತ್ತಿದ್ದಂತೆ, ಅನೇಕ ಬದಲಾವಣೆಗಳಿಗೆ ರಾಜ್ಯ ಸರ್ಕಾರ ಮುನ್ನುಡಿ ಬರೆದಿದೆ. ಈಗಾಗಲೇ 9 ಮಂದಿ ಜೈಲು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಭಾರೀ ಬದಲಾವಣೆ ಆಗಿದೆ. ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ಮಹಿಳಾ ಡಿಐಜಿ ದಿವ್ಯಶ್ರೀ ನೇಮಕಗೊಂಡಿದ್ದಾರೆ. ಕಾರಾಗೃಹ ಅಕಾಡೆಮಿ ಡಿಐಜಿಯಾಗಿ ಸೋಮಶೇಖರ್ ವರ್ಗಾವಣೆಯಾಗಿದೆ.
ಇದನ್ನೂ ಓದಿ: ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್!
ದರ್ಶನ್ ಫೋಟೋ ಹಾಗೂ ವಿಡಿಯೋ ಕಾಲ್ಗಳು ವೈರಲ್ ಆಗುತ್ತಿದ್ದಂತೆ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ಉಂಟಾಗಿತ್ತು. ಮುಖ್ಯವಾಗಿ ಗೃಹ ಇಲಾಖೆ ಹಾಗೂ ಕಾರಾಗೃಹ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ದಕ್ಷತೆಯ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ದುಡ್ಡಿದ್ದವರಿಗೆ ಪರಪ್ಪನ ಅಗ್ರಹಾರ ಇಂದ್ರನ ಅರಮನೆಯಿದ್ದಂತೆ ಎಂದೆಲ್ಲಾ ವಾದಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಜೈಲಲ್ಲಿ ರಾಜಾತಿಥ್ಯ.. ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ; ಏನಂದ್ರು?
ದರ್ಶನ್‌ಗೆ ಸಿಕ್ಕ ರಾಜಾತಿಥ್ಯ ಇಡೀ ರಾಜ್ಯದಲ್ಲಿ ಸದ್ದು ಮಾಡಿದ ಬಳಿಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ. ಕರ್ತವ್ಯಲೋಪ ಎಸಗಿದವರ ಸ್ಥಳಕ್ಕೆ ಖಡಕ್ ಅಧಿಕಾರಿಗಳನ್ನು ತಂದು ಕೂರಿಸಲಾಗುತ್ತಿದೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಾಗಿ ಸುರೇಶ್ ನೇಮಕವಾಗಿದ್ದಾರೆ. ಈ ಹಿಂದೆ ಇದ್ದ ವಿ ಶೇಷಮೂರ್ತಿ ಅಮಾನತು ಮಾಡಿದ ಬೆನ್ನಲ್ಲೆ, ನೂತನ ಮುಖ್ಯ ಅಧೀಕ್ಷರಾಗಿ ಕೆ.ಸುರೇಶ್ ನೇಮಕಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ