newsfirstkannada.com

ಜೈಲಲ್ಲಿ ರಾಜಾತಿಥ್ಯ.. ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ; ಏನಂದ್ರು?

Share :

Published August 27, 2024 at 3:00pm

    ‘ಅಮೆರಿಕಾದ ಜೈಲಲ್ಲೂ ಕೈದಿಗಳಿಗೆ ಡ್ರಗ್ಸ್, ಸಿಗರೇಟ್ ಎಲ್ಲಾ ಸಿಗುತ್ತೆ’

    ಸೆಂಟ್ರಲ್‌ ಜೈಲಿನಲ್ಲಿ ಹೀಗೆ ನಡೆಯುತ್ತಿರೋದು ಇದೇನು ಮೊದಲಲ್ಲ

    ಜೈಲಲ್ಲಿ ರೌಡಿಗಳ ಜೊತೆ ದರ್ಶನ್‌ಗೆ ಸಾಕಷ್ಟು ಐಷಾರಾಮಿ ಸೌಲಭ್ಯ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್‌ ಅವರಿಗೆ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರೌಡಿಗಳ ಜೊತೆ ದರ್ಶನ್‌ಗೆ ಸಾಕಷ್ಟು ಐಷಾರಾಮಿ ಸೌಲಭ್ಯಗಳು ಸಿಗುತ್ತಾ ಇರೋದು ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ: ಇದು ಗೋವಾ ಟ್ರಿಪಾ? ಜೈಲಿನ ಮತ್ತೊಂದು ಫೋಟೋ ವೈರಲ್‌; ರೌಡಿಗಳ ಬ್ರ್ಯಾಂಡೆಡ್ ಲೈಫ್‌ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತೀರಾ! 

ಸದ್ಯ ದರ್ಶನ್ ಅವರ ಫೋಟೋ ನೋಡಿ ಸಾಮಾನ್ಯವಾಗಿ ಕ್ರೈಂ ಮಾಡಿದ ಅಪರಾಧಿಗಳು ಜೈಲಿಗೆ ಹೋಗೋದು ಮನಃ ಪರಿವರ್ತನೆಗಾ ಅಥವಾ ಬಿಂದಾಸ್‌ ಆಗಿ ಕಾಲ ಕಳೆಯೋದಕ್ಕಾ ಅನ್ನೋ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ.

ಜೈಲಿನಲ್ಲಿರುವ ದರ್ಶನ್ ಫೋಟೋ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅವರ ಬೆನ್ನಿಗೆ ನಿಂತು ಮಾತನಾಡಿರುವ ಸುಮಲತಾ ಅವರು ಜೈಲಿನಲ್ಲಿ ಹೀಗೆ ನಡೆಯುತ್ತಿರೋದು ಇದೇನು ಮೊದಲಲ್ಲ. ನಾವು ಈ ರೀತಿಯ ಪ್ರಕರಣ ಇದೇ ಫಸ್ಟ್‌ ಅನ್ನೋದನ್ನ ನೋಡಬೇಕು. ಈ ಬಗ್ಗೆ ನಾನು ಮಾತನಾಡಿದ್ರೆ ಕಾಂಟ್ರವರ್ಸಿ ಆಗಬಹುದು ಎಂದಿದ್ದಾರೆ.

ಇದನ್ನೂ ಓದಿ: ರಚ್ಚು ಭೇಟಿ ದಚ್ಚುಗೆ ಫಜೀತಿ? ದರ್ಶನ್​ಗೆ ಕಾಡುತ್ತಿದೆಯಾ ಸ್ತ್ರೀ ಕಂಟಕ? ಫ್ಯಾನ್ಸ್​ ಬೇಸರ 

ದರ್ಶನ್ ಅವರು ನನಗೆ ಆಪ್ತರು. ಬಹಳ ಹತ್ತಿರದವರು ಎಂದ ಸುಮಲತಾ ಅಂಬರೀಶ್, ಜೈಲಲ್ಲಿ ಹಣ ಕೊಟ್ರೆ ಏನು ಸೌಲಭ್ಯ ಬೇಕಾದ್ರೂ ಸಿಗುತ್ತೆ. ಈ ಆರೋಪವನ್ನ ಐಪಿಎಸ್ ಅಧಿಕಾರಿ ಡಿ.ರೂಪಾ ಅವರೇ ಈ ಹಿಂದೆನೂ ತಿಳಿಸಿಕೊಟ್ಟಿದ್ದಾರೆ. ಇದು ಪರಪ್ಪನ ಅಗ್ರಹಾರದಲ್ಲಿ ಅಷ್ಟೇ ಆಗಿಲ್ಲ. ಪ್ರಪಂಚದಾದ್ಯಂತ ಜೈಲುಗಳಲ್ಲಿ ಇಂತಹ ಭ್ರಷ್ಟಾಚಾರ ನಡೀತಿದೆ. ಅಮೆರಿಕಾದ ಜೈಲಲ್ಲೂ ಡ್ರಗ್ಸ್, ಸಿಗರೇಟ್ ಎಲ್ಲಾ ಸಿಗುತ್ತೆ. ಇದು ಸರಿ ಅಂತಾ ನಾನು ಹೇಳಲ್ಲ. ಇದು ಸಿಸ್ಟಂನಲ್ಲಿ ಇರೋ ಸಮಸ್ಯೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ರಾಜಾತಿಥ್ಯ.. ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ; ಏನಂದ್ರು?

https://newsfirstlive.com/wp-content/uploads/2024/02/DARSHAN_SUMALTHA.jpg

Load More