ದರ್ಶನ್ ಗ್ಯಾಂಗ್‌ನ ಟೀ ಪಾರ್ಟಿ ಜೊತೆ ಮತ್ತೊಂದು ಫೋಟೋ
ಅಡಿಡಾಸ್, ಪೂಮಾ ಸ್ಲಿಪರ್ಸ್ ಹಾಕಿ ಬ್ರ್ಯಾಂಡೆಡ್ ಲೈಫ್ ಲೀಡ್!
ಜೈಲಿನಲ್ಲೇ ರೌಡಿಗಳ ಫೋಟೋ ಶೂಟ್ ಮಾಡಿಸೋದು ಯಾಕೆ?
ಸಮಾಜದಲ್ಲಿ ತಪ್ಪು ಮಾಡಿದವರು, ಕ್ರಿಮಿನಲ್‌ಗಳನ್ನ ಜೈಲಿಗೆ ಹಾಕೋದು ಶಿಕ್ಷೆ ಅನುಭವಿಸೋಕೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿ ಕೈದಿಗಳಿಗೆ ಮನಃ ಪರಿವರ್ತನೆ ಆಗೋ ಪುಣ್ಯಸ್ಥಾನವೇ ಜೈಲು. ಅಯ್ಯೋ ಈ ಮಾತು ಕೇವಲ ಮಾತಿಗಷ್ಟೇ ಸೀಮಿತ ಅನ್ನೋ ಹಾಗಾಗಿದೆ. ನಟ ದರ್ಶನ್ ಅವರ ಫೋಟೋ ವೈರಲ್ ಆದ ಮೇಲೆ ಸೆಂಟ್ರಲ್ ಜೈಲಿನ ಗೋಡೆಯೊಳಗೆ ನಡೆದ ಅನೇಕ ಅಕ್ರಮ ಚಟುವಟಿಕೆಗಳು ಬಯಲಾಗುತ್ತಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್, ನಾಗ ಕುಚಿಕುಗಳು.. ಇಬ್ಬರ ಭೇಟಿ ನಿತ್ಯ ಹೇಗೆ ನಡೆಯುತ್ತಿದೆ..?
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳು ಹಾಗೂ ವಿಚಾರಣಾಧೀನ ಕೈದಿ ದರ್ಶನ್ ಅಂತಹವರು ಫುಲ್ ಬಿಂದಾಸ್ ಆಗಿದ್ದಾರೆ. ದರ್ಶನ್ ಅವರ ಫೋಟೋ ನೋಡಿದ ಮೇಲಂತೂ ಇದು ಸಾರ್ವಜನಿಕರಿಗೆ ಗ್ಯಾರಂಟಿ ಆಗಿದೆ. ದರ್ಶನ್ ಗ್ಯಾಂಗ್‌ನ ಸಿಗರೇಟ್ ಪಾರ್ಟಿ ಚರ್ಚೆಯಲ್ಲಿರುವಾಗಲೇ ಇದೀಗ ಮತ್ತೊಂದು ಫೋಟೋ ಬಿಡುಗಡೆಯಾಗಿದೆ.
ಇದನ್ನೂ ಓದಿ: ರಚ್ಚು ಭೇಟಿ ದಚ್ಚುಗೆ ಫಜೀತಿ? ದರ್ಶನ್ಗೆ ಕಾಡುತ್ತಿದೆಯಾ ಸ್ತ್ರೀ ಕಂಟಕ? ಫ್ಯಾನ್ಸ್ ಬೇಸರ
ಜೈಲಿನಲ್ಲಿ ಕೊಲೆ ಆರೋಪಿಗಳು ಬಿಂದಾಸ್ ಆಗಿದ್ದಾರೆ. ಅವರು ಗೋವಾ ಟ್ರಿಪ್‌ಗೆ ಹೋಗುವ ಹಾಗೆ ಶಾಟ್ಸ್, ಡಿಸೈನ್, ಡಿಸೈನ್ ಚಪ್ಪಲಿ ಹಾಕ್ಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ರೌಡಿಗಳು ಅಡಿಡಾಸ್, ಪೂಮಾ ಸ್ಲಿಪರ್ಸ್ ಹಾಕಿ ಬ್ರ್ಯಾಂಡೆಡ್ ಲೈಫ್ ಲೀಡ್ ಮಾಡ್ತಿದ್ದಾರೆ. ಸೆಲ್‌ನಲ್ಲಿ ಆರೋಪಿಗಳು ಒಟ್ಟಿಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಸೆಲ್‌ನಲ್ಲಿ ಫೋಟೋ ಶೂಟ್ ಯಾಕೆ?
ಸಿದ್ದಾಪುರ ಮಹೇಶ್‌ನ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿರುವ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಂನ ಫೋಟೋ ಶೂಟ್ ಇದು. ಈ ಫೋಟೋಗಳೇ ಪರಪ್ಪನ ಅಗ್ರಹಾರ ಜೈಲಿನ ವ್ಯವಸ್ಥೆಗೆ ಮತ್ತೊಂದು ಕೈಗನ್ನಡಿಯಂತಿದೆ. ಅದಕ್ಕಿಂತಲೂ ಮುಖ್ಯವಾಗಿ ಈ ರೀತಿಯ ಫೋಟೋ ಶೂಟ್ ಮಾಡಿ ಹೊರಗಿನ ಅಪೋಸಿಟ್ ಟೀಂಗಳಿಗೆ ಟಾಂಗ್ ಕೊಡುತ್ತಾರೆ. ಜೈಲಿನಲ್ಲಿ ಫೋಟೋ ತೆಗೆಸಿಕೊಂಡ ಆರೋಪಿಗಳು ಎದುರಾಳಿ ರೌಡಿ ಗ್ಯಾಂಗ್‌ಗೆ ಕಳುಹಿಸಿ ಬಿಲ್ಡಪ್ ಕೊಡುತ್ತಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಸಿದ್ದಾಪುರ ಮಹೇಶ್ ಅನ್ನ ವಿಲ್ಸನ್ ಗಾರ್ಡನ್ ನಾಗನ ಟೀಂ ಕೊಚ್ಚಿ ಕೊಲೆ ಮಾಡಿತ್ತು. ಅರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಮಹೇಶನನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಬರೋಬ್ಬರಿ ಇಪ್ಪತ್ತು ಜನರ ಬಂಧನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ