Advertisment

ಅಯ್ಯೋ.. ಸೆಕೆ ತಡೆಯೋಕಾಗ್ತಿಲ್ವಾ? ಈ ಗ್ಯಾಜೆಟ್ ಬಳಸಿ ನೋಡಿ,​ ತಂಪು ತಂಪು ಕೂಲ್ ಕೂಲ್​ ಮಾಡುತ್ತೆ

author-image
Veena Gangani
Updated On
ಅಯ್ಯೋ.. ಸೆಕೆ ತಡೆಯೋಕಾಗ್ತಿಲ್ವಾ? ಈ ಗ್ಯಾಜೆಟ್ ಬಳಸಿ ನೋಡಿ,​ ತಂಪು ತಂಪು ಕೂಲ್ ಕೂಲ್​ ಮಾಡುತ್ತೆ
Advertisment
  • ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬಿಸಿಲಿನ ತಾಪಮಾನ
  • ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರಿಂದ ಹೊಸ ಹೊಸ ಪ್ಲಾನ್​
  • ಆನ್ಲೈನ್​ಲ್ಲಿ ಸಿಗುವ ನೆಕ್ ಫ್ಯಾನ್​ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚು

ಬಿಸಿಲು.. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇಂತಹ ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ಬಾಯಾರಿಕೆಯನ್ನು ನೀಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

Advertisment

publive-image

ಇದರ ಜೊತೆಗೆ ಸಾರ್ವಜನಿಕರು ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕುತ್ತಿಗೆಯ ಸುತ್ತ ಫ್ಯಾನ್‌ಗಳನ್ನು ಅಳವಡಿಸಿಕೊಂಡು ತಣ್ಣನೆಯ ಗಾಳಿ ತೆಗೆದುಕೊಳ್ಳುತ್ತಿದ್ದಾರೆ. ಹೌದು, ಈಗಂತೂ ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚಾಗುತ್ತಿದೆ. ಕೆಲವರಿಗಂತೂ ತಣ್ಣನೆಯ ಗಾಳಿ ಸಿಕ್ಕರೆ ಸಾಕಪ್ಪ ಅಂದ್ರು ಅತ್ತ ಇತ್ತ ಎಲ್ಲೂ ಗಾಳಿ ಬೀಸುತ್ತಿಲ್ಲ. ಅಕಸ್ಮಾತ್ ಗಾಳಿ ಬೀಸಿದರೂ ಕೂಡ ಅದು ಬಿಸಿ ಬಿಸಿ ಗಾಳಿ. ಹೀಗಾಗಿ ಜನ ಆನ್ಲೈನ್​ನಲ್ಲಿ ದೊರಕುವ ನೆಕ್ ಫ್ಯಾನ್​ನ ಮೋರೆ ಹೋಗುತ್ತಿದ್ದಾರೆ.

ಇದನ್ನೂ ಓದಿ:ಎಚ್ಚರ! ಏಪ್ರಿಲ್‌ ತಿಂಗಳು ಪೂರ್ತಿ ಹುಷಾರಾಗಿರಿ.. ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ; ಏನದು?

publive-image

ಆನ್ಲೈನ್​ಲ್ಲಿ ಸಿಗುವ ನೆಕ್ ಫ್ಯಾನ್​ಗಳನ್ನು ಖರೀದಿಸಿ ಅದನ್ನು ಹೋದಲ್ಲಿ ಬಂದಲ್ಲಿ ಉಪಯೋಗ ಮಾಡುತ್ತಿದ್ದಾರೆ. ಅದರಲ್ಲೂ ವೃದ್ಧರು ಹೆಚ್ಚಾಗಿ ಯೂಸ್​ ಮಾಡುತ್ತಿದ್ದಾರೆ. ಬಿಸಿಲಿನ ತಾಪಮಾನಕ್ಕೆ ತಾಳಲಾರದೇ ಹೀಗೆ ಯುವಕರು, ಯುವತಿಯರು ಬಸ್​​, ರೈಲು, ಜಿಮ್​, ಶೂಟಿಂಗ್ ಸ್ಥಳಗಳಲ್ಲಿ ಹೆಚ್ಚಾಗಿ ನೆಕ್ ಫ್ಯಾನ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಈ ನೆಕ್ ಫ್ಯಾನ್​​ಗಳು ಆನ್ಲೈನ್​ಗಳಲ್ಲಿ ಕೈಗೆಟುಕುವ ದರದಲ್ಲಿ ದೊರಕುತ್ತವೆ. ನೆಕ್ ಫ್ಯಾನ್​ ಜೊತೆ ಚಾರ್ಜರ್ ವೈರ್ ಕೂಡ ನೀಡಲಾಗುತ್ತದೆ. ನೆಕ್ ಫ್ಯಾನ್ ನೋಡಲು ವೈರ್ ಲೆಸ್ ಹೆಡ್ ಸೆಟ್ ತರ ಇರುತ್ತದೆ. ಇದನ್ನು ಎಲ್ಲಿ ಬೇಕಾದರೂ ಉಪಯೋಗ ಮಾಡಬಹುದಾಗಿದೆ. ಅತಿಯಾಗಿ ಬೆವರುವವರು ಈ ನೆಕ್ ಫ್ಯಾನ್ ಅನ್ನು ಹೆಡ್ ಸೆಟ್ ರೀತಿಯಲ್ಲಿ ಉಪಯೋಗ ಮಾಡಬಹುದಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment