Advertisment

ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಪ್ರೀತಿ.. 34 ವರ್ಷದ ಮಹಿಳೆಯನ್ನು ಮದುವೆಯಾದ 80 ವರ್ಷದ ವೃದ್ಧ

author-image
AS Harshith
Updated On
ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಪ್ರೀತಿ.. 34 ವರ್ಷದ ಮಹಿಳೆಯನ್ನು ಮದುವೆಯಾದ 80 ವರ್ಷದ ವೃದ್ಧ
Advertisment
  • ಇವರ ಲವ್​ ಸ್ಟೋರಿ ಸಾಮಾಜಿಕ ಜಾಲತಾಣದ ಮೂಲಕ ಶುರು ಆಯ್ತು
  • ಇಬ್ಬರ ನಡುವೆ 46 ವರ್ಷಗಳ ಅಂತರ.. ಕೊನೆಗೂ ಮದುವೆಯಾದ ಜೋಡಿ
  • ಆಕೆ ಬೇರೆ ರಾಜ್ಯ, ಈತ ಬೇರೆ ರಾಜ್ಯ.. ಇಬ್ಬರನ್ನು ಒಂದು ಮಾಡಿತು ಪ್ರೀತಿ

80 ವರ್ಷ ವಯಸ್ಸಿನ ವೃದ್ಧನೋರ್ವ 34 ವರ್ಷದ ಮಹಿಳೆಯನ್ನ ಪ್ರೀತಿಸಿ ವಿವಾಹವಾದ ಘಟನೆ ಮಧ್ಯಪ್ರದೇಶದ ಅಗರ್​ ಜಿಲ್ಲೆಯ ಸುಸ್ನರ್​ ತೆಹಸಿಲ್​ ಬಳಿಯ ಮಗರಿಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬಲುರಾಮ್​ ಬಗ್ರಿ ಎಂಬವರು ಶೀಲಾ ಇಂಗ್ಲೆ ಯನ್ನು ವಿವಾಹವಾಗಿದ್ದಾರೆ.

Advertisment

ಅಂದಹಾಗೆಯೇ ಬಲುರಾಮ್​ ಮತ್ತು ಶೀಲಾ ಇಬ್ಬರು ಪ್ರೇಮ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಪರಿಚಯಾಯ್ತು. ಬಳಿಕ ಸ್ನೇಹ ಬೆಳೆಯಿತು. ನಂತರ ಪ್ರೀತಿಗೆ ತಿರುಗಿತು.

ಶೀಲಾ ಇಂಗ್ಲೆ ಮಹಾರಾಷ್ಟ್ರದ ಅಮರಾತಿಯವರಾಗಿದ್ದು, ಸಾಮಾಜಿಕ ಜಾಲತಾಣ ಇವರಿಬ್ಬರನ್ನು ಪ್ರೇಮ ಬಂಧನದಲ್ಲಿ ಬೀಳಿಸಿದೆ. ಇಬ್ಬರ ನಡುವೆ 46 ವರ್ಷಗಳ ಅಂತರವಿದ್ದರು ಸಹ ಇದ್ಯಾವುದಕ್ಕೆ ಕ್ಯಾರೆ ಅನ್ನದೆ ಈ ಜೋಡಿ ಮದುವೆಯಾಗಲು ಬಯಸುತ್ತಾರೆ.

publive-image

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ.. 3 ಜನ ಬರ್ತಾರೆ ನಿಮಿಷಾರ್ಧದಲ್ಲಿ ಪೆಟ್ರೋಲ್ ಕದ್ದು ಹೋಗ್ತಾರೆ.. ಹುಷಾರ್​

Advertisment

ಸದ್ಯ ಈ ಜೊಡಿ ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಾರವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಸಂಗತಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment