ಉಡುಪಿಯಲ್ಲಿ ಸಮಾಜ ಸೇವಕ ಅಪತ್ಭಾಂಧವ ಎಂದೇ ಪ್ರಸಿದ್ಧಿ
ಮಗಳ ಫೋಟೋ ಜೊತೆ ಸಂಬಂಧಿಕ ಹುಡುಗನ ಫೋಟೋ!
ಆಪತ್ಬಾಂಧವ ಆಸಿಫ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಉಡುಪಿ: ಪಾಪಿ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ವಿಡಿಯೋವನ್ನು ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್ಗೆ ಹರಿ ಬಿಟ್ಟ ವಿಲಕ್ಷಣ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಈ ಕೃತ್ಯದಿಂದ ಮನನೊಂದ ಮಗಳು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಮಾಜ ಸೇವಕನಿಂದ ಅಪ್ಪನ ದುಷ್ಕೃತ್ಯಕ್ಕೆ ಇಡೀ ಕುಟುಂಬವೇ ಬೆಚ್ಚಿ ಬಿದ್ದಿದೆ.
ಆರೋಪಿ ತಂದೆಯ ಹೆಸರು ಮೊಹಮ್ಮದ್ ಆಸಿಫ್. ಇವರು ಉಡುಪಿಯಲ್ಲಿ ಸಮಾಜ ಸೇವಕ ಅಪತ್ಭಾಂಧವ ಎಂದೇ ಹೆಸರು ಪಡೆದುಕೊಂಡಿದ್ದರು. ಆದರೆ ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ಹಾಗೆ ಸಂಬಂಧಿ ಹುಡುಗನ ಜೊತೆಗೆ ಮಗಳ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮದುವೆ ಆದರೂ ಬಾಡದ ಹಳೇ ಪ್ರೀತಿ.. ಟೊಂಕಕ್ಕೆ ವೇಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ತನ್ನ ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕಾಗಿ ಮಗಳ ಫೋಟೋ ಜೊತೆ ಸಂಬಂಧಿಕ ಹುಡುಗನ ಫೋಟೋ, ವೀಡಿಯೋ ಎಡಿಟ್ ಮಾಡಿ ವಾಟ್ಸಾಪ್ ಗ್ರೂಪ್ಗೆ ಹಾಕಿದ್ದಾರೆ. ಮಗಳ ಪ್ರೀತಿಗೆ ವಿರೋಧಿಸಿ ಅಶ್ಲೀಲವಾಗಿ ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ
ಆಪತ್ಬಾಂಧವ ಆಸಿಫ್ ಈ ಕೃತ್ಯವನ್ನು ಖಂಡಿಸಿರುವ ಪತ್ನಿ ಶಬನಮ್ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆಸಿಫ್ ಮಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ತಂದೆಯ ಈ ವಿಲಕ್ಷಣ ಕೃತ್ಯದಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯಲ್ಲಿದ್ದ ಪಿನಾಯಿಲ್ ಕುಡಿದು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ