newsfirstkannada.com

ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಮುಸ್ಲಿಂ ಮಹಿಳಾ MLA.. ಬೆಂಗಳೂರಿನ IIMBಯಲ್ಲಿ ಓದಿದ್ದ ಸೋಫಿಯಾ

Share :

Published June 9, 2024 at 10:32am

Update June 9, 2024 at 10:34am

    ರಾಜ್ಯದ ಇತಿಹಾಸ ತಿರುವಿ ನೋಡುವಂತೆ ಮಾಡಿದ ಶಾಸಕಿ

    ಸ್ಪರ್ಧೆ ಮಾಡಿದ ಮೊದಲ ಎಲೆಕ್ಷನ್​ನಲ್ಲೇ ಕ್ಷೇತ್ರದಿಂದ ಗೆಲುವು

    ತಂದೆಗೆ ಟಿಕೆಟ್ ನೀಡದೇ ಮಗಳನ್ನು ನಿಲ್ಲಿಸಿದ ಗೆಲ್ಲಿಸಿದ ಪಕ್ಷ

ಲೋಕಸಭಾ ಫಲಿತಾಂಶದ ಜೊತೆ ಜೊತೆಗೆ ಒಡಿಶಾ ವಿಧಾನಸಭಾ ಚುನಾವಣೆಯ ರಿಸಲ್ಟ್​ ಕೂಡ ಹೊರ ಬಿತ್ತು. ಸದ್ಯ ಅಲ್ಲಿ ಬಿಜೆಡಿ ಸರ್ಕಾರ ನೆಲ ಕಚ್ಚಿದ್ದು ಬಿಜೆಪಿ ಬಹುಮತ ಪಡೆದುಕೊಂಡಿದೆ. ಈ ಎರಡು ಪಕ್ಷದ್ದು ಸೋಲು-ಗೆಲುವು ಹೀಗಾದ್ರೆ, ಅತ್ತ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ 32 ವರ್ಷದ ಓರ್ವ ಬ್ಯೂಟಿ ವಿಶೇಷ ದಾಖಲೆ ಮಾಡಿದ್ದಾರೆ. ಇವರ ಹೆಸರು ಒಡಿಶಾ ವಿಧಾನಸಭೆಯ ಇತಿಹಾಸ ಪುಸ್ತಕದಲ್ಲಿ ಬರೆದಿಡುವಂತೆ ಆಗಿದೆ. ಇಡೀ ಒಡಿಶಾ ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಮುಸ್ಲಿಂ ಅಭ್ಯರ್ಥಿ ಸೋಫಿಯಾ ಫಿರ್ದೌಸ್ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ.

ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

ಸೋಫಿಯಾ ಫಿರ್ದೌಸ್ ಇನ್ನು 32 ವರ್ಷದ ಚೆಲುವೆ. ರಾಜಕೀಯ ಕುಟುಂಬದ ಮಹಿಳೆ. ಇವರ ತಂದೆ ಮೊಹಮ್ಮದ್ ಮೊಕ್ವಿಮ್ ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದಾರೆ. ಪಕ್ಷವು 2024ರ ಬಾರಾಬತಿ-ಕಟಕ್ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ತಂದೆಯ ಬದಲಿಗೆ ಮಗಳನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಅದರಂತೆ ಸೋಫಿಯಾ ಫಿರ್ದೌಸ್ ವಿಜಯಶಾಲಿಯಾಗಿದ್ದಾರೆ.

ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ಕಳಿಂಗ ಯುನಿರ್ವಸಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿರುವ ಸೋಫಿಯಾ ಫಿರ್ದೌಸ್ 2022ರಲ್ಲಿ ಬೆಂಗಳೂರಿನ ಐಐಎಂಬಿಯಲ್ಲಿ ಜನರಲ್ ಮ್ಯಾನೆಜ್​​ಮೆಂಟ್ ಪ್ರೋಗ್ರಾಮ್ ಮುಗಿಸಿದ್ದಾರೆ. ಓದು ಮುಗಿದ ಮೇಲೆ 2023ರಲ್ಲಿ​ ಭುವನೇಶ್ವರ್​​ದ ರಿಯಲ್ ಎಸ್ಟೇಟ್​​ ಅಸೋಸಿಯೇಷನ್​ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ.

ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?

2024ರ ಒಡಿಶಾ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡಿದ್ದು 147 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ನವೀನ್ ಪಟ್ನಾಯಕ್ ಮತ್ತು ಬಿಜು ಜನತಾ ದಳ (ಬಿಜೆಡಿ) ಅವರ 24 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಒಡಿಶಾಸ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ 21 ಸ್ಥಾನಗಳ ಪೈಕಿ 20ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ ಒಂದು ಕ್ಷೇತ್ರದಲ್ಲಿ ಗೆಲುವು ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಮುಸ್ಲಿಂ ಮಹಿಳಾ MLA.. ಬೆಂಗಳೂರಿನ IIMBಯಲ್ಲಿ ಓದಿದ್ದ ಸೋಫಿಯಾ

https://newsfirstlive.com/wp-content/uploads/2024/06/Sofia_Firdous.jpg

Load More