ಇಸ್ರೇಲ್ ರಾಯಭಾರಿ ಕಚೇರಿ ಮುಂದೆಯೇ ಯುಎಸ್ ಸೈನಿಕ ಆತ್ಮಹತ್ಯೆ!
ಪ್ಯಾಲೆಸ್ಟೀನ್ ಹೋರಾಟ ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಹುತಾತ್ಮ ಯೋಧ
ಫ್ರೀ ಪ್ಯಾಲೆಸ್ಟಿನ್ ಎಂದು ಇಸ್ರೇಲ್ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರಾಣತ್ಯಾಗ ಮಾಡಿದ
ವಾಷಿಂಗ್ಟನ್: ಯುಎಸ್ನಲ್ಲಿರೋ ಇಸ್ರೇಲ್ ರಾಯಭಾರಿ ಕಚೇರಿ ಮುಂಭಾಗ ಸೈನಿಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆರೋನ್ ಬುಶ್ನೆಲ್ (25) ಎಂಬ ಯುಎಸ್ ಸೈನಿಕ ಆತ್ಮಹತ್ಯೆ ಮಾಡಿಕೊಂಡವರು.
ಇದನ್ನು ಓದಿ: ಹೇ ನವಿಲೇ.. ಹೆಣ್ಣವಿಲೇ.. ಬಿಗ್ಬಾಸ್ ‘ಬೆಂಕಿ’ ಪೋಸ್ಗೆ ಫಿದಾ ಆದ ಫ್ಯಾನ್ಸ್; ಫೋಟೋ ಇಲ್ಲಿದೆ!
ಇಸ್ರೇಲ್, ಪ್ಯಾಲೆಸ್ಟೀನ್ ಮಧ್ಯೆ ಸಂಘರ್ಷ ಮುಂದುವರಿದಿದೆ. ಸದ್ಯ ಗಾಜಾ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇಸ್ರೇಲ್ ವಿರುದ್ಧ ಪ್ಯಾಲೆಸ್ಟೀನ್ ಹೋರಾಟವನ್ನು ಬೆಂಬಲಿಸಿ ಯುಎಸ್ ಸೈನಿಕ ಆತ್ಮಾಹುತಿ ಮಾಡಿಕೊಂಡಿದ್ದಾನೆ. ಫ್ರೀ ಪ್ಯಾಲೆಸ್ಟೀನ್ ಎಂದು ಘೋಷಣೆ ಕೂಗುತ್ತಾ ಬೆಂಕಿ ಹಚ್ಚಿಕೊಂಡು ಇಸ್ರೇಲ್ ರಾಯಭಾರಿ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಇಡೀ ಅಮೆರಿಕಾವನ್ನೇ ತಲ್ಲಣಗೊಳಿಸಿದೆ.
ಬುಶ್ನೆಲ್ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಬಲಿಯಾಗುವ ಮುನ್ನ ಫ್ರೀ ಪ್ಯಾಲೆಸ್ಟೀನ್ ಎಂದು ಘೋಷಣೆ ಕೂಗಿದ್ದಾನೆ. ಈ ಘಟನೆ ನಡೆದ ಕೂಡಲೇ ಸ್ಥಳದಲ್ಲೇ ಇದ್ದ ಭದ್ರತಾ ಅಧಿಕಾರಿ ಒಬ್ಬರು ಸೈನಿಕನನ್ನು ಕಾಪಾಡಲು ಮುಂದಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ, ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿದ್ದಾಗ ಮಾರ್ಗಮಧ್ಯೆಯೇ ಸೈನಿಕ ಪ್ರಾಣಬಿಟ್ಟಿದ್ದಾನೆ ಎಂದು ಯುಎಸ್ ಸೇನೆ ಮೂಲಗಳು ತಿಳಿಸಿವೆ. ಸದ್ಯ ಪ್ಯಾಲೆಸ್ಟೀನ್ ಹೋರಾಟ ಬೆಂಬಲಿಸಿ ಯುಎಸ್ ಸೈನಿಕ ಮಾಡಿಕೊಂಡ ಆತ್ಮಹತ್ಯೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ