ಜುಲೈ ಮುಗಿದು ನಾಳೆಯಿಂದ ಆಗಸ್ಟ್ ತಿಂಗಳು ಆರಂಭ
ಆಗಸ್ಟ್ನಲ್ಲಿ 13 ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ, ನೆನಪಿರಲಿ!
ಈ ವಿಚಾರದಲ್ಲಿ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕರೂ ಅಚ್ಚರಿ ಇಲ್ಲ
ಜುಲೈ ತಿಂಗಳು ಮುಗಿದಿದ್ದು ನಾಳೆಯಿಂದ ಆಗಸ್ಟ್ ಆರಂಭ ಆಗಲಿದೆ. ಆಗಸ್ಟ್ ಮೊದಲ ದಿನದಿಂದ ದೇಶದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ. ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಜೊತೆಗೆ ಅನೇಕ ಲಾಭವನ್ನೂ ನಿರೀಕ್ಷೆ ಮಾಡಬಹುದಾಗಿದೆ. ಅದು ನೇರವಾಗಿ ಅಡುಗೆ ಮನೆಯಿಂದಲೇ ಶುರುವಾದರೂ ಅಚ್ಚರಿ ಇಲ್ಲ. ಕ್ರೆಡಿಡ್ ಕಾರ್ಡ್, ಎಲ್ಪಿಜಿ ಸಿಲಿಂಡರ್, ಪೇಯಿಂಗ್ ಆ್ಯಪ್ಗಳು ಸೇರಿದಂತೆ ಪ್ರಮುಖ ಐದು ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇದೆ.
ಈ ವಿಚಾರದಲ್ಲಿ ಗುಡ್ನ್ಯೂಸ್..?
ತೈಲ ಕಂಪನಿಗಳು ಪ್ರತಿ ತಿಂಗಳು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ ನಾಳೆ ಬೆಳಗ್ಗೆ 6 ಗಂಟೆ ವೇಳೆಗೆ ಎಲ್ಪಿಜಿ ಸಿಲಿಂಡರ್ಗೆ ಹೊಸ ಬೆಲೆ ನಿಮಗೆ ಸಿಗುವ ಸಾಧ್ಯತೆ ಇದೆ. ಇತ್ತೀಚೆಗಿನ ತಿಂಗಳಲ್ಲಿ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ನಿರಂತರವಾಗಿ ಬದಲಾಯಿಸುತ್ತ ಬಂದಿವೆ. ಆದರೆ 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಆಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಅದು ಏನಾಗುತ್ತೋ ಅನ್ನೋದ ನಾಳೆ ಗೊತ್ತಾಗಲಿದೆ.
ಇದನ್ನೂ ಓದಿ:ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ..!
ಎಟಿಎಫ್ ಮತ್ತು ಸಿಎನ್ಜಿ-ಪಿಎನ್ಜಿ
ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಮಾಡಿದಂತೆ ತೈಲ ಕಂಪನಿಗಳು ಏರ್ ಇಂಧನದ ಬೆಲೆಯನ್ನು ಪರಿಷ್ಕೃರಣೆ ಮಾಡುತ್ತವೆ. ಏರ್ ಟ್ರೈಬನ್ ಇಂಧನ (ATF) ಹಾಗೂ ಸಿಎನ್ಜಿ-ಪಿಎನ್ಜಿ (piped natural gas- piped natural gas) ಬೆಲೆಯೂ ಪರಿಷ್ಕೃತಗೊಳ್ಳಲಿದೆ. ಏಪ್ರಿಲ್ ಆರಂಭದಲ್ಲಿ ಎಟಿಎಫ್ ಬೆಲೆ ಕಡಿಮೆ ಮಾಡಲಾಗಿತ್ತು.
ಮೂರನೇ ಬದಲಾವಣೆ ಯಾವುದು?
ನಾಳೆಯಿಂದ HDFC ಬ್ಯಾಂಕ್ ದೊಡ್ಡ ಬದಲಾವಣೆ ತರುತ್ತಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇದರ ಎಫೆಕ್ಟ್ ನೇರವಾಗಿ ತಟ್ಟಲಿದೆ. CRED, Paytm, Mobikwik ನಂತರ ಆ್ಯಪ್ಗಳ ಸಹಾಯದಿಂದ ಕ್ರೆಡಿಡ್ ಕಾರ್ಡ್ ಮೂಲಕ ಕರೆಂಟ್ ಪಾವತಿಸಿದರೆ ಶೇಕಡಾ 1 ರಷ್ಟು ಶುಲ್ಕ ವಿಧಿಸಲಿದೆ. ಪ್ರತಿ ವಹಿವಾಟಿನ ಮಿತಿಯನ್ನು ಮೂರು ಸಾವಿರ ರೂಪಾಯಿಗೆ ನಿಗಧಿ ಮಾಡಿದೆ. 15 ಸಾವಿರ ರೂಪಾಯಿಗಿಂತ ಕಡಿಮೆ ವಹಿವಾಟುಗಳಿಗೆ, ಇಂಧನ ವಹಿವಾಟಿನ ಮೇಲೆ ಯಾವುದೇ ಶುಲ್ಕಗಳನ್ನು ವಿಧಿಸುತ್ತಿಲ್ಲ.
ಗೂಗಲ್ ಮ್ಯಾಪ್ ಶುಲ್ಕ..!
ಆಗಸ್ಟ್ 1, 2024ರಿಂದ ಗೂಗಲ್ ಮ್ಯಾಪ್ ತನ್ನ ನಿಯಮವನ್ನು ಬದಲಾಯಿಸಲಿದೆ. ವಿಶ್ವದ ಅತಿದೊಡ್ಡ ಸರ್ಜ್ ಎಂಜಿನ್ ಆಗಿರುವ ಗೂಗಲ್, ತನ್ನ ಮ್ಯಾಪ್ ಸೇವೆಯ ಶುಲ್ಕವನ್ನು ಶೇಕಡಾ 70 ರಷ್ಟು ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದೆ. ಗೂಗಲ್ ಮ್ಯಾಪ್ ಸೇವೆಗೆ ಡಾಲರ್ಗಳ ಬದಲಿಗೆ ಭಾರತೀಯ ರೂಪಾಯಿಗಳಲ್ಲಿ ಪಾವತಿಗಳನ್ನ ತೆಗೆದುಕೊಳ್ಳಲಿದೆ.
ಇದನ್ನೂ ಓದಿ:ಆರ್ಸಿಬಿಗೆ ದೊಡ್ಡ ಲಾಸ್; ತಂಡ ತೊರೆಯಲು ನಿರ್ಧರಿಸಿದ ಬಿಗ್ ಪ್ಲೇಯರ್..!
13 ದಿನ ಬ್ಯಾಂಕ್ ರಜೆ..!
ಆಗಸ್ಟ್ ತಿಂಗಳಲ್ಲಿ ನಿಮಗೆ ಬ್ಯಾಂಕ್ಗೆ ಸಂಬಂಧಿಸಿದ ಕೆಲಸಗಳು ಇದ್ದರೆ ಯಾವತ್ತು ಹೊರಡಬೇಕು ಅನ್ನೋದನ್ನು ಯೋಚಿಸಿ ನಿರ್ಧಾರ ಮಾಡಿ. ಯಾಕೆಂದರೆ ಬರೋಬ್ಬರಿ 13 ಬ್ಯಾಂಕ್ ರಜೆಗಳು ಇವೆ. ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಠಮಿ, ಸ್ವಾತಂತ್ರ್ಯ ದಿನಾಚಣೆ ಸೇರಿದಂತೆ ಬ್ಯಾಂಕ್ನ ಪ್ರಾದೇಶಿಕ ರಜೆಗಳು ಕೂಡ ಹೆಚ್ಚಿವೆ.
ಆಗಸ್ಟ್ 3, (ಕೆರ್ ಪೂಜಾ) ಪ್ರಾದೇಶಿಕ ರಜೆ
ಆಗಸ್ಟ್ 4, (ಭಾನುವಾರ)
ಆಗಸ್ಟ್ 8, Tendong Lho Rum Faat (ಸಿಕ್ಕಿಂ)
ಆಗಸ್ಟ್ 10, ಎರಡನೇ ಶನಿವಾರ
ಆಗಸ್ಟ್ 11, ಭಾನುವಾರ
ಆಗಸ್ಟ್ 13, ದೇಶಭಕ್ತ ದಿನ ( Patriots Day, ಮಣಿಪುರ)
ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 18, ಭಾನುವಾರ
ಆಗಸ್ಟ್ 19, ರಕ್ಷಾ ಬಂಧನ
ಆಗಸ್ಟ್ 20, ಶ್ರೀ ನಾರಾಯಣ ಗುರು ಜಯಂತಿ (ಅಹ್ಮದಾಬಾದ್, ಜೈಪುರ, ಕಾನ್ಪುರ, ಲಖನೌ)
ಆಗಸ್ಟ್ 24, ನಾಲ್ಕನೇ ಶನಿವಾರ
ಆಗಸ್ಟ್ 25, ಭಾನುವಾರ
ಆಗಸ್ಟ್ 26 ಶ್ರೀಕೃಷ್ಣ ಜನ್ಮಾಷ್ಠಮಿ
ಇದನ್ನೂ ಓದಿ:ಗಂಭೀರ್ ಅಧ್ಯಕ್ಷತೆಯಲ್ಲಿ ಎಲ್ಲರೂ ಬೌಲರ್ಗಳೇ.. 4 ವಿಕೆಟ್ ಕಿತ್ತ ಸೂರ್ಯ, ರಿಂಕು ಸಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ