/newsfirstlive-kannada/media/post_attachments/wp-content/uploads/2024/04/Uttar-Pradesh.jpg)
ಮಗನೋರ್ವ ಹೆತ್ತ ತಾಯಿಯನ್ನು ಅಟ್ಟಾಡಿಸಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ವ್ಯಕ್ತಿ ತನ್ನ ವೃದ್ಧ ತಾಯಿಯನ್ನು ಹಿಂಬಾಲಿಸಿಕೊಂಡು ಕೋಲಿನಿಂದ ಹಲ್ಲೆ ಮಾಡುತ್ತಾನೆ. ಆಕೆ ಆತನ ಕೈಯಲ್ಲಿದ್ದ ಕೋಲಿನ ಏಟು ತಪ್ಪಿಸಿಕೊಳ್ಳಲು ಓಡುತ್ತಾಳೆ. ಆದರೂ ಆತ ಬೆನ್ನು ಬಿಡದೆ ಆಕೆಗೆ ಹಲ್ಲೆ ಮಾಡುತ್ತಾನೆ. ಹೀಗೆ ಮಗನ ಏಟಿನಿಂದ ತಪ್ಪಿಸಿಕೊಳ್ಳಲು ಓಡಿದರು ಆಕೆಯ ಸಹಾಯಕ್ಕೆ ಯಾರು ಬರುವುದಿಲ್ಲ. ಎಲ್ಲರೂ ಆಕೆಯ ಮೇಲಿನ ಹಲ್ಲೆಯನ್ನು ನಿಂತುಕೊಂಡು ನೋಡುತ್ತಿರುತ್ತಾರೆ. ಕೊನೆಗೆ ನೆರೆಹೊರೆಯವರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:CISF ಕ್ವಾಟರ್ಸ್ ಬಳಿ 3 ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಸಿಕ್ತು ಮಹಿಳೆಯ ತುಂಡರಿಸಿದ ಮೃತದೇಹ
ಮಗನೋರ್ವ ಹೆತ್ತ ತಾಯಿಯನ್ನು ಅಟ್ಟಾಡಿಸಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.#UttarPradesh#khairpur#mother#Bulandshahrpic.twitter.com/9JkqCkX45x
— Harshith Achrappady (@HAchrappady)
ಮಗನೋರ್ವ ಹೆತ್ತ ತಾಯಿಯನ್ನು ಅಟ್ಟಾಡಿಸಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.#UttarPradesh#khairpur#mother#Bulandshahrpic.twitter.com/9JkqCkX45x
— Harshith Achrappady (@HAchrappady) April 3, 2024
">April 3, 2024
ಮಾಹಿತಿ ಪ್ರಕಾರ, ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖೈರ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ಧ ತಾಯಿಗೆ ಹಲ್ಲೆ ನಡೆಸುವ ಮಗನ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಪೊಲೀಸರಿಗೆ ದೂರು ನೀಡಿದ್ದರು. ದೃಶ್ಯ ಸಾಕ್ಷಧಾರದ ಮೇಲೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ