newsfirstkannada.com

VIDEO: ವೃದ್ಧ ತಾಯಿಗೆ ಅಟ್ಟಾಡಿಸಿ ಥಳಿಸಿದ ಮಗ.. ಮಗನ ಏಟಿಗೆ ಗೋಗರೆದು ಓಡಿದರು ಸಹಾಯಕ್ಕೆ ಬಾರದ ಜನ

Share :

Published April 3, 2024 at 12:14pm

    ಅಮ್ಮನ ಮೇಲೆ ಮಗನಿಂದ ಹಲ್ಲೆ.. ಕೋಲಿನಿಂದ ಥಳಿಸಿದ ಮಗ

    ಮಗನ ಏಟು ತಾಳಲಾರದೆ ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿರುವ ತಾಯಿ

    ವೃದ್ಧ ತಾಯಿಗೆ ಥಳಿಸುವ ದೃಶ್ಯವನ್ನು ನೋಡಿಕೊಂಡು ನಿಂತ ಜನರು

ಮಗನೋರ್ವ ಹೆತ್ತ ತಾಯಿಯನ್ನು ಅಟ್ಟಾಡಿಸಿ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬುಲಂದ್​​ಶಹರ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ವ್ಯಕ್ತಿ ತನ್ನ ವೃದ್ಧ ತಾಯಿಯನ್ನು ಹಿಂಬಾಲಿಸಿಕೊಂಡು ಕೋಲಿನಿಂದ ಹಲ್ಲೆ ಮಾಡುತ್ತಾನೆ. ಆಕೆ ಆತನ ಕೈಯಲ್ಲಿದ್ದ ಕೋಲಿನ ಏಟು ತಪ್ಪಿಸಿಕೊಳ್ಳಲು ಓಡುತ್ತಾಳೆ. ಆದರೂ ಆತ ಬೆನ್ನು ಬಿಡದೆ ಆಕೆಗೆ ಹಲ್ಲೆ ಮಾಡುತ್ತಾನೆ. ಹೀಗೆ ಮಗನ ಏಟಿನಿಂದ ತಪ್ಪಿಸಿಕೊಳ್ಳಲು ಓಡಿದರು ಆಕೆಯ ಸಹಾಯಕ್ಕೆ ಯಾರು ಬರುವುದಿಲ್ಲ. ಎಲ್ಲರೂ ಆಕೆಯ ಮೇಲಿನ ಹಲ್ಲೆಯನ್ನು ನಿಂತುಕೊಂಡು ನೋಡುತ್ತಿರುತ್ತಾರೆ. ಕೊನೆಗೆ ನೆರೆಹೊರೆಯವರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: CISF​ ಕ್ವಾಟರ್ಸ್​ ಬಳಿ 3 ಪ್ಲಾಸ್ಟಿಕ್​​ ಬ್ಯಾಗ್​ನಲ್ಲಿ ಸಿಕ್ತು ಮಹಿಳೆಯ ತುಂಡರಿಸಿದ ಮೃತದೇಹ

ಮಾಹಿತಿ ಪ್ರಕಾರ, ಸೇಲಂಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಖೈರ್​ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ಧ ತಾಯಿಗೆ ಹಲ್ಲೆ ನಡೆಸುವ ಮಗನ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು ಪೊಲೀಸರಿಗೆ ದೂರು ನೀಡಿದ್ದರು. ದೃಶ್ಯ ಸಾಕ್ಷಧಾರದ ಮೇಲೆ ಪೊಲೀಸರು ಆರೋಪಿಯನ್ನು ಅರೆಸ್ಟ್​ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವೃದ್ಧ ತಾಯಿಗೆ ಅಟ್ಟಾಡಿಸಿ ಥಳಿಸಿದ ಮಗ.. ಮಗನ ಏಟಿಗೆ ಗೋಗರೆದು ಓಡಿದರು ಸಹಾಯಕ್ಕೆ ಬಾರದ ಜನ

https://newsfirstlive.com/wp-content/uploads/2024/04/Uttar-Pradesh.jpg

Load More