Mutton Sambar: ಇವನು ಮಗನೇ ಅಲ್ಲ.. ಮಟನ್​ ಸಾಂಬಾರಿಗಾಗಿ ಹೆತ್ತಪ್ಪನನ್ನೇ ಮುಗಿಸಿಬಿಟ್ಟ!

author-image
AS Harshith
Updated On
Mutton Sambar: ಇವನು ಮಗನೇ ಅಲ್ಲ.. ಮಟನ್​ ಸಾಂಬಾರಿಗಾಗಿ ಹೆತ್ತಪ್ಪನನ್ನೇ ಮುಗಿಸಿಬಿಟ್ಟ!
Advertisment
  • ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದ ತಂದೆಯನ್ನೇ ಮಸಣ ಸೇರಿಸಿದ
  • ಮನೆಯ ಯಜಮಾನನ ಸಾವಿಂದ ಇಡೀ ಕುಟುಂಬ ಕಣ್ಣೀರು
  • ಮಟನ್‌ ಸಾಂಬಾರಿಗಾಗಿ ಅಪ್ಪನನ್ನೇ ಮುಗಿಸಿಬಿಟ್ಟ ಮಗ

ಮನುಷ್ಯನಿಗೆ ಹಸಿವಾದ್ರೆ ಒಪ್ಪೊತ್ತು ಗಂಜಿ ಸಿಕ್ರೆ ಸಾಕಪ್ಪಾ ಅಂತಾರೆ. ಆದ್ರೆ ಇಲ್ಲೊಬ್ಬ ಮಗ ಮನೆಯಲ್ಲಿ ಮಟನ್ ಸಾರೇ ಬೇಕು, ಅದನ್ನ ಮಾಡಿಲ್ಲ ಅಂತ ಕ್ಯಾತೆ ತೆಗೆದು ತಂದೆಯನ್ನೇ ಕೊಂದಿದ್ದಾನೆ. ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದ ತಂದೆಯನ್ನೇ ಮಸಣ ಸೇರುವಂತೆ ಮಾಡಿದ್ದಾನೆ. ಮನೆಯ ಯಜಮಾನನ ಸಾವಿಂದ ಇಡೀ ಕುಟುಂಬ ಅನಾಥವಾಗಿದೆ.

ತಾಯಿ 9 ತಿಂಗಳು ಹೆತ್ತು ಹೊತ್ತು ಸಾಕಿದ್ರೆ. ತಂದೆ ಮಗ ತನ್ನ ಕಾಲ್ಮೇಲೆ ನಿಂತುಕೊಳ್ಳುವ ತನಕ ದುಡಿದು ಹಾಕ್ತಾನೆ. ಆದ್ರೆ, ಇಲ್ಲೊಬ್ಬ ಪಾಪಿ ಮಗ. ಹೆತ್ತಪ್ಪನನ್ನೇ ಯಕಶ್ಚಿತ್ ಮಟನ್‌ಗಾಗಿ ಕೊಂದು ಹಾಕಿದ್ದಾನೆ.

ಈ ಫೋಟೋದಲ್ಲಿ ಒಳ್ಳೆ ಕಳ್ಳನ ತರ ಪೋಸ್ ಕೊಡ್ತಿದ್ದಾನಲ್ಲ. ಇವನೇ ನೋಡಿ ಆ ಪಾಪಿ ಮಗ. ಹೆಸ್ರು ದೇವರಾಜ. ಹೆಸರಿಗೆ ಮಾತ್ರ ದೇವ. ಆದ್ರೆ, ಹೆತ್ತಪ್ಪನಿಗೆ ಇವ್ನು ದೆವ್ವದಂತೆ ಕಾಡಿ ಕೊಂದು ಹಾಕಿದ್ದಾನೆ. ಈ ಭೀಕರ ಕೊಲೆ ನಡೆದಿರೋದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಕುಂದಲಗುರ ಗ್ರಾಮದಲ್ಲಿ.

ಇದನ್ನೂ ಓದಿ: ಸಹಕಾರ ಸಂಘದಿಂದ ಕೋಟಿ‌ ಕೋಟಿ ಹಣ‌ ಗುಳುಂ! ರೈತರ ಠೇವಣಿ ಹಣ, ಅಡವಿಟ್ಟ ಚಿನ್ನಾಭರಣ ‌ಮಂಗಮಾಯ

ತಂದೆ ರಂಗಸ್ವಾಮಿ ಜೊತೆ ಪುತ್ರ ದೇವರಾಜ ಬೆಳ್ಳಂ ಬೆಳಗ್ಗೆ ಕ್ಯಾತೆ ತೆಗೆದಿದ್ದ. ಮನೆಯಲ್ಲಿ ನಾನು ಹೇಳಿದ ಮಟನ್ ಅಡುಗೆ ಮಾಡಿಲ್ಲ, ಬದಲಿಗೆ ಮೊಟ್ಟೆ ಸಾಂಬಾರ್ ಮಾಡಿದ್ದಾರೆ ಅಂತ ಜಗಳವಾಡಿದ್ದ. ಹೀಗೆ ಕೇವಲ ಮಟನ್ ಊಟಕ್ಕೆ ಶುರುವಾದ ಜಗಳದಲ್ಲಿ ರಂಗಸ್ವಾಮಿಗೆ ಪುತ್ರ ದೇವರಾಜ ಹಿಗ್ಗಾ ಮುಗ್ಗ ಹಲ್ಲೆ ಮಾಡಿದ್ದ. ಇದ್ರಿಂದ ನಿತ್ರಾಣಗೊಂಡ ರಂಗಸ್ವಾಮಿ ನೆಲಕ್ಕೆ ಬಿದ್ದಿದ್ದಾರೆ. ಆದ್ರೂ ಅಪ್ಪ ಅನ್ನೋ ಕಿಂಚಿತ್ತೂ ಕರುಣೆ ಇಲ್ಲದ ಪುತ್ರ ದೇವರಾಜ ತನ್ನ ಕಾಲುಗಳಿಂದ ತಂದೆಯನ್ನೇ ತುಳಿದಿದ್ದಾನೆ. ಮನೆಯಲ್ಲಿದ್ದವರು ಎಷ್ಟೇ ಬಿಡಿಸಿದ್ರೂ ಬಿಟ್ಟಿರಲಿಲ್ಲ. ಮೊದಲೇ ವಯಸ್ಸಾಗಿದ್ದ ರಂಗಸ್ವಾಮಿ ಏಟು ತಾಳದೆ ಜೀವ ಬಿಟ್ಟಿದ್ದಾರೆ.

ಇನ್ನೂ ಕೇವಲ ಮಟನ್ ಊಟ ಮಾಡಿಸಿಲ್ಲವೆಂದು ಪುತ್ರನಿಂದ ಹತ್ಯೆ ಆದ ರಂಗಸ್ವಾಮಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಗೆ ಒಬ್ಬ ಮಗ, ಎರಡನೇ ಪತ್ನಿಗೆ ಆರೋಪಿ ದೇವರಾಜ, ಇಬ್ಬರು ಪುತ್ರಿಯರು ಸೇರಿ ಒಟ್ಟು ನಾಲ್ವರು ಮಕ್ಕಳಿದ್ದಾರೆ. ಇರೋ ಎರಡುವರೆ ಎಕರೆ ಜಮೀನಿನಲ್ಲಿ ಆದಾಯ ಅಷ್ಟಕಷ್ಟೆ. ಹೀಗಾಗಿ ಎರಡನೆ ಹೆಂಡ್ತಿ, ಮಕ್ಕಳು ಬೆಂಗಳೂರು ಸೇರಿದ್ದಾರೆ. ಮೊದಲ ಪತ್ನಿ ತನ್ನ ಪುತ್ರನ ಜೊತೆ ತವರು ಮನೆಯಲ್ಲಿದ್ದಾರೆ.

ಇದನ್ನೂ ಓದಿ: ದೃಶ್ಯಂ ಸಿನಿಮಾ ರೀತಿಯಲ್ಲಿ ಕೊ*ಲೆ! ಪ್ರೇಯಸಿಯನ್ನು ಕೊಂದು ಜಿಲ್ಲಾಧಿಕಾರಿ ಬಂಗಲೆಯಲ್ಲೇ ಹೂತಿಟ್ಟಿದ್ದ ಲವ್ವರ್​!

ಕಳೆದ ಎರಡ್ಮೂರು ದಿನಗಳ ಹಿಂದೆ ಮಟನ್ ಸಾಂಬಾರ್ ಮಾಡಿ ಕೊಟ್ಟಿದ್ದರಂತೆ. ಇಷ್ಟಕ್ಕೆ ಸುಮ್ಮನಾಗದ ಈ ದೇವರಾಜ ರಾತ್ರಿ ಮತ್ತೆ ಮಟನ್ ಮಾಡುವಂತೆ ಹೇಳಿದ್ನಂತೆ. ಇದಕ್ಕೆ ಒಪ್ಪದಿದ್ದಕ್ಕೆ ತಂದೆ ಮೇಲೆ ಜಗಳ ತೆಗೆದು ಕೊಲೆ ಮಾಡಿದ್ದಾನೆ. ಬಳಿಕ ಸಂಬಂಧಿಕರಿಗೆ ಫೋನ್ ಮಾಡಿ ಅಪ್ಪಂಗೆ ಹಾರ್ಟ್ ಅಟ್ಯಾಕ್ ಆಗಿದೆ ಬನ್ನಿ ಅಂತ ಕರೆದು ಡ್ರಾಮಾ ಮಾಡಿದ್ದಾನೆ.

ಇನ್ನೂ ಕೊಲೆ ನಡೆದ ಗ್ರಾಮಕ್ಕೆ ಚಿತ್ರದುರ್ಗ ಎಎಸ್‌ಪಿ ಕುಮಾರಸ್ವಾಮಿ, ಅಬ್ಬಿನಹೊಳೆ ಪೊಲೀಸರು, FSL ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಪ್ರಕರಣ ದಾಖಲಿಸಿಕೊಂಡು ತಂದೆಯನ್ನ ಹತ್ಯೆಗೈದ ಪಾಪಿ ಪುತ್ರ ದೇವರಾಜನನ್ನ ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

ಒಟ್ಟಾರೆ ಕೇವಲ ಮಟನ್ ಊಟದ ಚಪಲಕ್ಕೆ ಹೆತ್ತ ತಂದೆಯನ್ನೇ ಕೊಂದ ಮಗ ಈಗ ಜೈಲು ಸೇರಿದ್ದಾನೆ. ಇವನು ಮಾಡಿರುವ ಪಾಪದ ಕೃತ್ಯಕ್ಕೆ ಇಡೀ ಕುಟುಂಬ ಅನಾಥವಾಗಿದೆ. ಇಂಥ ಮಕ್ಕಳು ಯಾರೀಗೂ ಹುಟ್ಟೋದು ಬೇಡ ಅಂತ ಊರಿನ ಜನ ಹಿಡಿಶಾಪ ಹಾಕ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment