newsfirstkannada.com

ತೆಲುಗು ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕೊಟ್ಟ ಗಾಯಕ S.P ಬಾಲಸುಬ್ರಹ್ಮಣ್ಯಂ ಪುತ್ರ; ಕಾರಣವೇನು?

Share :

Published February 17, 2024 at 12:45pm

    ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಖಾಂತರ ಎಸ್‌ಪಿಬಿ ಧ್ವನಿ ಬಳಕೆ

    ತೆಲುಗಿನ ಕೀಡಾ ಕೋಲಾ ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ಜಾರಿ

    ಚಿತ್ರದ ಹಾಡಿನಲ್ಲಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಬಳಸಿದ ಆರೋಪ

ಹೈದರಾಬಾದ್‌: ಎದೆ ತುಂಬಿ ಹಾಡಿದ ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಕುಟುಂಬ ತೆಲುಗು ಸಿನಿಮಾದ ವಿರುದ್ಧ ಕಾನೂನು ಸಮರ ಸಾರಿದೆ. ಕೀಡಾ ಕೋಲಾ ಎಂಬ ತೆಲುಗು ಸಿನಿಮಾ ತಂಡಕ್ಕೆ ಎಸ್‌ಪಿಬಿ ಅವರ ಪುತ್ರ ಎಸ್‌.ಪಿ ಚರಣ್ ಅವರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ತೆಲುಗಿನ ಕೀಡಾ ಕೋಲಾ ಚಿತ್ರದ ಹಾಡಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮುಖಾಂತರ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಬಳಕೆ ಮಾಡಿದೆ. ಇದು ಡೀಪ್ ಫೇಕ್ ಮಾದರಿಯಾದ್ದಾಗಿದೆ. ಆದರೆ ಚಿತ್ರ ತಂಡ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಬಳಕೆ ಮಾಡಿರೋ ಆರೋಪವನ್ನು ನಿರಾಕರಿಸಿದೆ.

ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಹಾಡಿನಲ್ಲಿ ಬಳಕೆ ಮಾಡಿರುವುದನ್ನ ಎಸ್‌.ಪಿ ಚರಣ್ ಅವರು ಖಂಡಿಸಿದ್ದಾರೆ. ಕೀಡಾ ಕೋಲಾ ಚಿತ್ರದ ಸಂಗೀತ ನಿರ್ದೇಶಕ ವಿವೇಕ್ ಸಾಗರ್ ಅವರು ಸಂದರ್ಶನವೊಂದರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಕರು ಆಗಿರುವ ಎಸ್‌.ಪಿ ಕಲ್ಯಾಣ್ ಚರಣ್ ಅವರು ಕೀಡಾ ಕೋಲಾ ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: VIDEO: ಹೊಸಪೇಟೆ ಅಪ್ಪು ಪ್ರತಿಮೆಗೆ ಬಿಗ್‌ಬಾಸ್ ವಿನ್ನರ್‌ ಕಾರ್ತಿಕ್ ಮಾಲಾರ್ಪಣೆ; ವಿನಯ್ ಸಾಥ್‌!

ಎಸ್‌.ಪಿ ಕಲ್ಯಾಣ್ ಚರಣ್ ಅವರು ಅನುಮತಿ ಪಡೆಯದೇ ತಮ್ಮ ತಂದೆ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕೀಡಾ ಕೋಲಾ ಚಿತ್ರದ ನಿರ್ಮಾಪಕರು ಹಾಗೂ ಸಂಗೀತಾ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇದೇ ವೇಳೆ ಎ.ಆರ್ ರೆಹಮಾನ್ ಅವರ ಹೆಸರನ್ನು ಉಲ್ಲೇಖಿಸಿರುವ ಕಲ್ಯಾಣ್ ಚರಣ್ ಅವರು, ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಬಳಸಿದ್ದ ರೆಹಮಾನ್ ಅವರು ಕ್ರೆಡಿಟ್‌ ಸಹ ಕೊಟ್ಟಿದ್ದರು. ಆದರೆ ಕೀಡಾ ಕೋಲಾ ಚಿತ್ರತಂಡ ಯಾವುದೇ ಅನುಮತಿ ಪಡೆಯದೇ ಇದ್ದು ಕ್ರೆಡಿಟ್ ಕೂಡ ಕೊಟ್ಟಿಲ್ಲ. ಹೀಗಾಗಿ ಲೀಗಲ್ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲುಗು ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕೊಟ್ಟ ಗಾಯಕ S.P ಬಾಲಸುಬ್ರಹ್ಮಣ್ಯಂ ಪುತ್ರ; ಕಾರಣವೇನು?

https://newsfirstlive.com/wp-content/uploads/2024/02/Sp-Balasubrahmanyam-1.jpg

Load More