/newsfirstlive-kannada/media/post_attachments/wp-content/uploads/2024/06/Vinish-darshan.jpg)
ಇಂದು ವಿಶ್ವ ತಂದೆಯಂದಿರ ದಿನಾಚರಣೆ.. ಈ ವಿಶೇಷ ದಿನದಂದಂದು ದರ್ಶನ್​ ಮಗ ವಿನೀಶ್​ ಅಪ್ಪನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಆದರೀಗ ಕೆಲವೇ ಗಂಟೆಗಳಲ್ಲಿ ಆ ಪೋಸ್ಟ್​ ಡಿಲೀಟ್​ ಆಗಿದೆ.
ಇದನ್ನೂ ಓದಿ: ನನ್ನ ಬದುಕಿನಲ್ಲಿ ಎಲ್ಲವೂ ನೀನೆ.. ತಾಯಿ ಪವಿತ್ರಾ ಗೌಡಳಿಗೆ ಭಾವನಾತ್ಮಕ ಪೋಸ್ಟ್​ ಬರೆದ ಮಗಳು ಖುಷಿ
ಹೌದು. ವಿನೀಶ್​ ‘ನಿಮ್ಮನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ಬರೆದಿದ್ದರು. ಆದರೀಗ ಆ ಪೋಸ್ಟ್​ ಇನ್​ಸ್ಟಾದಲ್ಲಿ ಮಾಯವಾಗಿದೆ.
ಸದ್ಯ ಪೋಸ್ಟ್​ ಡಿಲೀಸ್​ ಆದಂತೆ ನೆಟ್ಟಗರಲ್ಲಿ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದೆ. ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಗ ವಿನೀಶ್​ ಅಪ್ಪನ ಮೇಲೆ ಕೋಪಗೊಂಡಿದ್ದಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ ಇದಕ್ಕೆಲ್ಲಾ ವಿನೀಶ್​ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ