newsfirstkannada.com

ಮಗು ದತ್ತು ಪಡೆದುಕೊಂಡ ಪ್ರಕರಣ; ಇಂದು ಸೋನು ಗೌಡಳನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು; ಯಾಕೆ?

Share :

Published March 24, 2024 at 7:40am

Update March 24, 2024 at 7:42am

  ಕಾನೂನುಬಾಹಿರವಾಗಿ ಮಗುವನ್ನ ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ

  ಮುಂದುವರೆದ ಸೋನು ಶ್ರೀನಿವಾಸ ಗೌಡ ಬಂಧನ ಪ್ರಕರಣದ ತನಿಖೆ

  ಇಂದು ರಾಯಚೂರಿಗೆ ಕರೆದುಕೊಂಡು ಹೋಗಿರುವ ಪೊಲೀಸರು; ಯಾಕೆ?

ರಾಯಚೂರು: ಕಾನೂನುಬಾಹಿರವಾಗಿ ಮಗುವನ್ನ ದತ್ತು ಪಡೆದ ಪ್ರಕರಣ ಸಂಬಂಧಿಸಿದಂತೆ ಸೋನು ಶ್ರೀನಿವಾಸ ಗೌಡ ಬಂಧನ ಪ್ರಕರಣದ ತನಿಖೆ ಮುಂದುವರೆದಿದೆ. ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರದಲ್ಲಿ ಇಂದು ಪೊಲೀಸರಿಂದ ಸ್ಥಳ ಮಹಜರ್ ನಡೆಯಲಿಕ್ಕಿದೆ.

ಬಾಡರಳ್ಳಿ ಪೊಲೀಸರು ಸೋನು ಗೌಡಳನ್ನ ರಾಯಚೂರಿಗೆ ಕರೆದುಕೊಂಡು ಬಂದಿದ್ದಾರೆ. ಗ್ರಾಮಕ್ಕೆ ತೆರಳಿ ಮಗುವಿನ ಮನೆಗೆ ಭೇಟಿ ನೀಡಲಿದ್ದಾರೆ. ಅಧಿಕಾರಿಗಳು ಗ್ರಾಮದಲ್ಲಿ ಮಗುವಿನ ಪೊಷಕರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ.

ಇದನ್ನೂ ಓದಿ: Video: ಉಷಾ ಉತ್ತುಪ್​ ಹಾಕುವ ಬಿಂದಿಗೂ ಕರ್ನಾಟಕಕ್ಕೂ ಸಂಬಂಧವಿದೆ! ಬೇಕಿದ್ರೆ ಅವರ ಬಾಯಲ್ಲೇ ಕೇಳಿ

ಇನ್ನು ಸೋನು ಗೌಡ ಗಾರೆ ಕೆಲಸ ಮಾಡಿಕೊಂಡಿದ್ದ ದಂಪತಿಯಿಂದ ಮಗು ದತ್ತು ಪಡೆದುಕೊಂಡಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಗುರುತು ಬಹಿರಂಗ ಪಡಿಸಿ ಜೆಜೆ ಆಕ್ಟ್ ಉಲ್ಲಂಘನೆ ಮಾಡಿದ್ದಳು. ಈ ಕುರಿತಾಗಿ ಆಕೆಯ ಮೇಲೆ ಪ್ರಕರಣ ದಾಖಲಾಗಿತ್ತು. ದತ್ತು ನಿಯಮಗಳನ್ನ ಉಲ್ಲಂಘನೆ ಮಾಡಿದ್ದಳು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗು ದತ್ತು ಪಡೆದುಕೊಂಡ ಪ್ರಕರಣ; ಇಂದು ಸೋನು ಗೌಡಳನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು; ಯಾಕೆ?

https://newsfirstlive.com/wp-content/uploads/2024/03/SONUGOWDA.jpg

Load More