newsfirstkannada.com

ಆ ಹುಡುಗಿ ಸೇಫ್ ಆಗಿದ್ದಾಳೆ.. ಕರೆದುಕೊಂಡು ಬಂದಿದ್ದು ಯಾಕಂದ್ರೆ; ಬಂಧನದ ಬಳಿಕ ಸೋನು ಗೌಡ ಹೇಳಿದ್ದೇನು?

Share :

Published March 22, 2024 at 5:54pm

    ಸಾಮಾಜಿಕ ಜಾಲತಾಣಲ್ಲಿ ಸಖತ್​ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್ ಸೋನು ಗೌಡ

    ದತ್ತು ಪಡೆದ ಕೇಸ್‌ ವಿಚಾರಣೆಗೆಂದು 4 ದಿನ ಸೋನು ಗೌಡ ಪೊಲೀಸ್​ ಕಸ್ಟಡಿಗೆ

    ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ವಿಚಾರಣೆ

ಬೆಂಗಳೂರು: ಸಾಮಾಜಿಕ ಜಾಲತಾಣಲ್ಲಿ ಸಖತ್​ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್‌ ಸೋನು ಶ್ರೀನಿವಾಸ ಗೌಡ ಅವರು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಮಗು ದತ್ತು ಪಡೆದುಕೊಂಡು ಇಟ್ಟುಕೊಂಡಿದ್ದರು. ಹೀಗಾಗಿ ಇದೇ ಆರೋಪದ ಅಡಿ ಪೊಲೀಸರು ಸೋನು ಗೌಡರನ್ನು ಅರೆಸ್ಟ್​ ಮಾಡಿದ್ದಾರೆ. ವಿಚಾರಣೆ ಬಳಿಕ ಕೋರ್ಟ್‌ ಮುಂದೆಯೂ ಹಾಜರು ಪಡಿಸಿದ್ದಾರೆ.

ಇದನ್ನು ಓದಿ: ಮಗು ದತ್ತು ಪಡೆದ ಕೇಸ್.. ಸೋನು ಶ್ರೀನಿವಾಸ್ ಗೌಡಗೆ 4 ದಿನ ಪೊಲೀಸ್‌ ಕಸ್ಟಡಿ; ಮುಂದೇನು?

ಕೋರ್ಟ್‌ಗೆ ಹಾಜರಾದ ಬಳಿಕ ಮೊದಲು ಪ್ರತಿಕ್ರಿಯೆ ನೀಡಿದ ಸೋನು ಗೌಡ ಅವರು ಕಾನೂನಿನ ಮೂಲಕವೇ ತನಿಖೆ ನಡೆಯುತ್ತಿದೆ. ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ. ಒಂದು ಹುಡುಗಿಯನ್ನ ರಕ್ಷಿಸಲು ಕರೆದುಕೊಂಡು ಬಂದಿದ್ದೆ. ಆ ಹುಡುಗಿ ಸೇಫ್ ಆಗಿದ್ದಾಳೆ ಆರಾಮಾಗಿದ್ದಾಳೆ ಎಂದು ಹೇಳಿದ್ದಾರೆ.

ಸದ್ಯ ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ನೃಪತುಂಗ ರಸ್ತೆಯ ಬೆಂಗಳೂರು ಗ್ರಾಮಾಂತರ CJM ಕೋರ್ಟ್​ಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆಂದು 4 ದಿನ ಸೋನು ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸ್ಥಾನದಲ್ಲಿರೋ ಸೋನು ಗೌಡ ಸದ್ಯಕ್ಕೆ ಮಹಿಳಾ ಸಾಂತ್ವನ ನಿಲಯ ಆಶ್ರಯ ಪಡೆಯಲಿದ್ದಾರೆ. ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಹುಡುಗಿ ಸೇಫ್ ಆಗಿದ್ದಾಳೆ.. ಕರೆದುಕೊಂಡು ಬಂದಿದ್ದು ಯಾಕಂದ್ರೆ; ಬಂಧನದ ಬಳಿಕ ಸೋನು ಗೌಡ ಹೇಳಿದ್ದೇನು?

https://newsfirstlive.com/wp-content/uploads/2024/03/sonu-gowda-4-1.jpg

Load More