/newsfirstlive-kannada/media/post_attachments/wp-content/uploads/2024/04/sonu-gowda5.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ ಒಂದರ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದ ಸೋನು ಗೌಡರ ಮತ್ತೊಂದು ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಹೌದು, ರೀಲ್ಸ್​ ರಾಣಿ ಸೋನು ಗೌಡ ಅಕ್ರಮವಾಗಿ ಮಗುವನ್ನು ದತ್ತು ಪಡೆದ ಕೇಸ್​ ಸಂಬಂಧ ಜೈಲುವಾಸ ಅನುಭವಿಸುತ್ತಿದ್ದರು. ಆ ವೇಳೆ ಸೋನು ಗೌಡರನ್ನು ಪೊಲೀಸ್ ಸ್ಟೇಷನ್‌ನಲ್ಲಿ ವಿಚಾರಣೆ ಒಳಪಟ್ಟಿದ್ದಾಗ, ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ಸ್ ಬಂದಿದ್ದು ನಿಜ. ಆದ್ರೆ, ಅದೇ ಸೋನು ಗೌಡರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದಾಗ ನಿಜಕ್ಕೂ ಮರುಗಿದರವೇ ಹೆಚ್ಚು.
ಇದನ್ನೂ ಓದಿ:23 ವರ್ಷಕ್ಕೆ ಜೈಲು ನೋಡಿ ಬಂದೆ.. ಜೈಲುವಾಸ ಅನುಭವದ ಬಗ್ಗೆ ಸೋನು ಗೌಡ ಹೇಳಿದ್ದೇನು?
ಹೀಗಾಗಿ ಕೆಲವರು ಸಾಮಾಜಿಕ ಜಾಲತಣದಲ್ಲಿ ತಮ್ಮ ಜೈಲುವಾಸ ಅನುಭವ ಹೇಗಿತ್ತು ಎಂದು ಹೇಳಿ ಅಂತಾ ಕಾಮೆಂಟ್​ ಮಾಡಿದ್ದರು. ಹೀಗಾಗಿ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಜೈಲುವಾಸ ಅನುಭವದ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇನ್ನು ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ಸೋನು ಗೌಡ ಅದೊಂದು ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಅದೇನೆಂದರೆ ನಾನು ಜೈಲಿನಲ್ಲಿದ್ದಾಗ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು ಎಂದು ಹೇಳಿದ್ದಾರೆ. ಇದೇ ವಿಚಾರದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ