/newsfirstlive-kannada/media/post_attachments/wp-content/uploads/2024/05/Virat-Kohli-RCB.jpg)
ಇತ್ತೀಚೆಗೆ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್ ಗೆದ್ದ ಕೂಡಲೇ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಇನ್ನು, ಟಿ20 ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಆಗಿದ್ದಾರೆ ಅನ್ನೋ ಬೇಸರದಲ್ಲಿರೋ ಫ್ಯಾನ್ಸ್ಗೆ ಗುಡ್ನ್ಯೂಸ್ ಒಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೊಹ್ಲಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಸದ್ಯ ಕೊಹ್ಲಿ ಅಂತರಾಷ್ಟ್ರೀಯ ಮಹತ್ವದ ಜವಾಬ್ದಾರಿಗಳಿಂದ ಮುಕ್ತರಾಗಿದ್ದು, ಐಪಿಎಲ್ನಲ್ಲಿ ಮತ್ತೆ ಆರ್ಸಿಬಿ ತಂಡವನ್ನು ಮುನ್ನಡೆಸಲು ಕೊಹ್ಲಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Virat Kohli's likely to be the Captain Of RCB in 2025 as RCB management is trying to convince him to take the captaincy! pic.twitter.com/Ky9cgIcwba
— Virat Kohli Fan Club (@Trend_VKohli)
Virat Kohli's likely to be the Captain Of RCB in 2025 as RCB management is trying to convince him to take the captaincy! pic.twitter.com/Ky9cgIcwba
— Virat Kohli Fan Club (@Trend_VKohli) July 1, 2024
">July 1, 2024
ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಈಗ 40 ವರ್ಷ. ಹಾಗಾಗಿ ಐಪಿಎಲ್ನಿಂದ ಫಾಫ್ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್ಗೆ ಕೊಹ್ಲಿ ಅವರಿಗೆ ಆರ್ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ಗಂಭೀರ್ ಕೋಚ್ ಆಗೋ ಮುನ್ನವೇ ಅಚ್ಚರಿ ಬೆಳವಣಿಗೆ; ಕೊಹ್ಲಿ, ರೋಹಿತ್ ನಿವೃತ್ತಿಗೆ ಅಸಲಿ ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ