ಟೀಮ್ ಇಂಡಿಯಾದಲ್ಲಿ ವಿಶ್ವದ ಬೆಸ್ಟ್ ಸ್ಪಿನ್ ಅಟ್ಯಾಕ್
ಪ್ಲೇಯಿಂಗ್ ಕಂಡಿಷನ್ಸ್ ಕೂಡ ಭಾರತಕ್ಕೆ ನೆರವು
ವಿಶ್ವಕಪ್ ಟೂರ್ನಿಗೆ ಭಾರತ ಭರ್ಜರಿ ತಯಾರಿ
ಅಪ್ಘನ್ ವಿರುದ್ಧದ ಸರಣಿಯ ಜೊತೆ ಜೊತೆಗೆ ಟಿ20 ವಿಶ್ವಕಪ್ಗೂ ಟೀಮ್ ಇಂಡಿಯಾದ ತಯಾರಿ ಆರಂಭವಾಗಿದೆ. ಬಹುಕಾಲದ ಐಸಿಸಿ ಟ್ರೋಫಿ ಕೊರಗಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಟೀಮ್ ಇಂಡಿಯಾ, ಸ್ಪೆಷಲ್ ಸೂತ್ರವನ್ನ ರೂಪಿಸಿದೆ.
ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯಲಿರೋ ಮಹತ್ವದ ಟೂರ್ನಿ ಕಪ್ ಗೆಲ್ಲಲು 10 ತಂಡಗಳು ಭರ್ಜರಿಯಾಗಿ ಸಜ್ಜಾಗಿವೆ. ಅಪ್ಘನ್ ವಿರುದ್ಧದ ಚುಟುಕು ಸರಣಿಯ ಮೊದಲ ಎರಡು ಪಂದ್ಯಗಳನ್ನ ಗೆದ್ದಿರುವ ಟೀಮ್ ಇಂಡಿಯಾ, ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿಯನ್ನೇ ನಡೆಸಿದೆ. ಈ ಮೂಲಕ ಬಹುಕಾಲದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕಲು ಪಣತೊಟ್ಟಿದೆ.
‘ಸ್ಪಿನ್ ಟು ವಿನ್’ ಮಂತ್ರವೇ ಯಶಸ್ಸಿನ ಸೂತ್ರ
ಈ ಬಾರಿಯ ವಿಶ್ವಕಪ್ ನಡೆಯೋ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದ ಪಿಚ್ಗಳು ಸ್ಲೋ ಪಿಚ್ಗಳಾಗಿವೆ. ಈ ನಿಧಾನಗತಿಯ ಪಿಚ್ಗಳಲ್ಲಿ ಸ್ಪಿನ್ನರ್ಗಳೇ ಮ್ಯಾಚ್ ವಿನ್ನರ್ಸ್. ಇಲ್ಲಿನ ಪಿಚ್ಗಳು ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವಾಗೋದ್ರಿಂದ, ಟೀಮ್ ಇಂಡಿಯಾ ಈ ಬಾರಿ ಸ್ಪಿನ್ ಟು ವಿನ್ ಸೂತ್ರದ ಮೊರೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಸ್ಪಿನ್ ಕೋಟಾದಲ್ಲಿ ಸ್ಥಾನಕ್ಕಾಗಿ ಪೈಪೋಟಿಯೂ ಶುರುವಾಗಿದೆ.

ವಿಶ್ವಕಪ್ ಟೂರ್ನಿಯನ್ನಾಡೋ ಉಳಿದ 20 ತಂಡಗಳ ಪೈಕಿ ಸ್ಪಿನ್ ವಿಭಾಗದಲ್ಲಿ ಟೀಮ್ ಇಂಡಿಯಾನೇ ಬಲಿಷ್ಟವಾಗಿದೆ. ಏಳಕ್ಕೂ ಹೆಚ್ಚು ವರ್ಲ್ಡ್ ಕ್ಲಾಸ್ ಸ್ಪಿನ್ನರ್ಗಳು ಟೀಮ್ ಇಂಡಿಯಾದಲ್ಲಿದ್ದು, ವಿಶ್ವಕಪ್ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿದ್ದಾರೆ. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವಿ ಬಿಷ್ನೋಯಿ ಹಾಗೂ ವಾಷಿಂಗ್ಟನ್ ಸುಂದರ್ ಸ್ಥಾನದ ರೇಸ್ನಲ್ಲಿರೋ ಟಾಪ್ ಕಂಟೆಂಡರ್ಸ್ಗಳಾಗಿದ್ದಾರೆ. ಇವರ ಜೊತೆಗೆ ಆರ್.ಅಶ್ವಿನ್, ಯುಜುವೇಂದ್ರ ಚಹಲ್ ಕೂಡ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಬೌಲಿಂಗ್ಗೂ ಸೈ, ಬ್ಯಾಟಿಂಗ್ಗೂ ಜೈ
ವಿಶ್ವಕಪ್ ತಂಡದ ಸ್ಥಾನದ ರೇಸ್ನಲ್ಲಿರೋ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ಗಳು, ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿಯೋ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಜಡೇಜಾ, ಅಕ್ಷರ್, ಸುಂದರ್ ಲೋವರ್ ಆರ್ಡರ್ ಬ್ಯಾಟಿಂಗ್ಗೆ ಬಲವಾಗಲಿದ್ದಾರೆ. ಇದು ಚುಟುಕು ವಿಶ್ವಕಪ್ ದಂಗಲ್ನಲ್ಲಿ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ.
ಪ್ಲೇಯಿಂಗ್ ಕಂಡಿಷನ್ಸ್ ಕೂಡ ಭಾರತಕ್ಕೆ ನೆರವು
ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿನ ವಾತಾವರಣ ಕೂಡ ಟೀಮ್ ಇಂಡಿಯಾಗೆ ಹೆಚ್ಚು ನೆರವಾಗಲಿದೆ. ಭಾರತದಲ್ಲಿನ ಪ್ಲೇಯಿಂಗ್ ಕಂಡಿಷನ್ಸ್, ವಿಂಡೀಸ್ ಹಾಗೂ ಅಮೆರಿಕದಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ ಬಹುತೇಕ ಒಂದೆ ತೆರನಾಗಿರೋದ್ರಿಂದಾಗಿ ಆಟಗಾರರು ಆದಷ್ಟು ಬೇಗ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದಾರೆ. ಇದು ಟೀಮ್ ಇಂಡಿಯಾಗಿರೋ ಬಿಗ್ಗೆಸ್ಟ್ ಅಡ್ವಾಂಟೇಜ್.
ಒಟ್ಟಿನಲ್ಲಿ, ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯೋದು ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಾದ್ರೂ, ಟೀಮ್ ಇಂಡಿಯಾಗೆ ಹೆಚ್ಚು ಅಡ್ವಾಂಟೇಜ್ ಇದೆ. ರೋಹಿತ್ ಪಡೆ ಇದನ್ನ ಸಮರ್ಥವಾಗಿ ಬಳಸಿಕೊಳ್ಳುತ್ತಾ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್