Advertisment

ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿ.. ಆಸ್ಪತ್ರೆಯ ಬೆಡ್​ ಮೇಲಿಂದ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಏನಂದ್ರು?

author-image
Bheemappa
Updated On
ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿ.. ಆಸ್ಪತ್ರೆಯ ಬೆಡ್​ ಮೇಲಿಂದ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಏನಂದ್ರು?
Advertisment
  • ತಲೆ ಬುರಡೆಯಲ್ಲಿ ಸಮಸ್ಯೆಯಾಗಿದ್ದನ್ನ ವೈದ್ಯರು ಸರಿ ಪಡಿಸಿದ್ದಾರೆ
  • ಎಕ್ಸ್​ ವಿಡಿಯೋದಲ್ಲಿ ಮಾತನಾಡಿರುವ ಸದ್ಗುರು ಜಗ್ಗಿ ವಾಸುದೇವ್
  • ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ ಗುರು

ನವದೆಹಲಿ: ದೆಹಲಿಯಲ್ಲಿರುವ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಸರ್ಜರಿ ಯಶಸ್ವಿಯಾಗಿದ್ದು ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

Advertisment

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿರುವ ಸದ್ಗುರು ಜಗ್ಗಿ ವಾಸುದೇವ್ ಅವರು, ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡು ಸ್ವತಹ ತಾವೇ ಮಾತನಾಡಿದ್ದಾರೆ. ಅಫೋಲೋ ಆಸ್ಪತ್ರೆಯ ವೈದ್ಯರು ನನ್ನ ಬ್ರೇನ್​ ಅನ್ನು ಸರ್ಜರಿ ಮಾಡಿದ್ದಾರೆ. ತಲೆ ಬುರುಡೆಯಲ್ಲಿ ಆಗಿದ್ದ ಸಮಸ್ಯೆಯನ್ನು ಡಾಕ್ಟರ್ಸ್ ಸರಿ ಮಾಡಿ ತಲೆ ಮೇಲೆ ಪ್ಯಾಚ್ ಮಾಡಿದ್ದಾರೆ. ಸದ್ಯ ನಾನು ಈಗ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಯಾವುದೇ ಸಮಸ್ಯೆ ಇಲ್ಲ, ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: BREAKING: ಸದ್ಗುರು ಜಗ್ಗಿ ವಾಸುದೇವ್‌ಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು

ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಬ್ರೇನ್ ಸರ್ಜರಿ ಆಗಿದೆ ಎಂದು ಅವರ ಅಭಿಮಾನಿಗಳು, ಭಕ್ತರು ಆತಂಕ ವ್ಯಕ್ತಪಡಿಸಿದ್ದರು. ಜಗ್ಗಿ ವಾಸುದೇವ್ ಅವರು ಶೀಘ್ರ ಗುಣಮುಖರಾಗಬೇಕು ಎಂದು ಇಶಾ ಫೌಂಡೇಶನ್​ನ ಭಕ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದರೆ ಅವರಿಗೆ ಧೈರ್ಯ ನೀಡಲು ಸದ್ಗುರು ಅವರೇ ವಿಡಿಯೋ ಮೂಲಕ ಮಾತನಾಡಿ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

Advertisment

ಯೋಗ ಗುರು, ದಿವ್ಯದರ್ಶಿ, ಕವಿ ಹಾಗೂ ಲೇಖಕರಾದ ಇವರು ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದ ಜಗ್ಗಿ ವಾಸುದೇವ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಸನ್ಮಾರ್ಗವನ್ನು ತೋರಿಸುತ್ತಿದ್ದ ಸದ್ಗುರು ಅವರು ತಮ್ಮ ಜೀವನದಲ್ಲಿ ನಡೆದ ಅನೇಕ ನೋವುಗಳಲ್ಲಿ ಈ ಮೆದುಳು ಶಸ್ತ್ರ ಚಿಕಿತ್ಸೆಯು ಈಗ ಒಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment