ಜಗತ್ತಿನ ಸಂತೋಷದ ಸೂಚ್ಯಂಕದಲ್ಲಿ ಮಾರಿಷಸ್​​ಗೆ ಉನ್ನತ ಸ್ಥಾನ ಸಿಗಬೇಕು- ಶ್ರೀ ಶ್ರೀ ರವಿಶಂಕರ್‌ ಗುರೂಜಿ

author-image
Gopal Kulkarni
Updated On
ಜಗತ್ತಿನ ಸಂತೋಷದ ಸೂಚ್ಯಂಕದಲ್ಲಿ ಮಾರಿಷಸ್​​ಗೆ ಉನ್ನತ ಸ್ಥಾನ ಸಿಗಬೇಕು- ಶ್ರೀ ಶ್ರೀ ರವಿಶಂಕರ್‌ ಗುರೂಜಿ
Advertisment
  • ನಾಲ್ಕು ದಿನಗಳ ಕಾಲ ಮಾರಿಷಸ್​ ಪ್ರವಾಸದಲ್ಲಿ ಶ್ರೀ ರವಿಶಂಕರ್​ ಗುರೂಜಿ
  • ಮಾದಕ ವ್ಯಸನ ಮುಕ್ತ ಮಾರಿಷಸ್ ಮಾಡುವ ಉದ್ದೇಶದಲ್ಲಿ ನಡೆದ ಕಾರ್ಯಕ್ರಮ
  • ಇನ್ನೂ ಮೂರ ದಿನಗಳ ಕಾಲ ನಡೆಯಲಿವೆ ಜ್ಞಾನ, ಸಂಗೀತ, ಸತ್ಸಂಗ ಕಾರ್ಯಕ್ರಮಗಳು

ಬೆಂಗಳೂರು: ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರಾದ ಶ್ರೀ ರವಿಶಂಕರ್ ಗುರೂಜಿಯವರು ಈಗ ಮಾರಿಷಸ್ ಗೆ ನಾಲ್ಕು ದಿವಸಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಮಾರಿಷಸ್ ದೇಶದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಮಂತ್ರಿಗಳಾದ ಶ್ರೀ ಪ್ರವೀಣ್ ಕುಮಾರ್ ಜಗನ್ನಾಥ್ ರವರು ಗುರುದೇವರನ್ನು ಆದರದಿಂದ ಸ್ವಾಗತಿಸಿದರು. ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ಗುರುದೇವರು, ಮಾರಿಷಸ್ ನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್​ ಗುರಿಯನ್ನು ತಲುಪುವುದರ ವಿಚಾರಗಳ ಬಗ್ಗೆ ಚರ್ಚಿಸಿದರು.

publive-image

ಇದನ್ನೂ ಓದಿ:ಕಾಶಿಯಲ್ಲಿ ಪಾನ್​ ಬೀಡ ಮೇಲೆ ಹೂಡಿಕೆ ಮಾಡಿ; ವಿಶ್ವ ಉದ್ಯಮಿಗಳಿಗೆ ಪ್ರಧಾನಿ ಮೋದಿ ಆಫರ್​​

ಅಧ್ಯಕ್ಷರನ್ನು ಭೇಟಿ ಮಾಡಿದ ಗುರುದೇವರು, ಅವರೊಡನೆ ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣೆ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಸ್ಥಾಪಿಸುವ ಕುರಿತು ಮಾತನಾಡಿದರು. ಇದರ ಜೊತೆಗೆ ಮಾರಿಷಸ್​ಗೆ ಆಯುರ್ವೇದದ ಪರಿಚಯ ಹಾಗೂ ಅದು ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಬಗ್ಗೆ ಮತ್ತು ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು. ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ , ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕುವ ಸಿದ್ಧತೆಯೂ ನಡೆದಿದೆ.

publive-image

ಇದನ್ನೂ ಓದಿ:ವಿಶೇಷ ಶಕ್ತಿ ಪೀಠಕ್ಕೆ ಗಂಭೀರ್ ದಿಢೀರ್ ಭೇಟಿ; IPLನಲ್ಲಿ ನಡೆದಿತ್ತು ಚಮತ್ಕಾರ..!

ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ ಎಂದು ಹೇಳಲಾಗಿದೆ. ಗುರುದೇವರು ಇದರ ಬಗ್ಗೆ ಮಾತನಾಡುತ್ತಾ, "ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದಿದ್ದಾರೆ, ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ: 10 ನಿಮಿಷದಲ್ಲಿ ಹೀಗೆ ಮೋದಕ ತಯಾರಿಸಿ! ಗಣೇಶನಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತೆ ನೋಡಿ

publive-image

ಗುರುದೇವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ ನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಸನ್ಮಾನ್ಯ ಅಧ್ಯಕ್ಷರು, ವಿಪಕ್ಷದ ನಾಯಕರು, ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಶ್ರೀ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ಆದ ಶ್ರೀಮತಿ ನಂದಿನಿ ಸಿಂಗ್ಲಾ, ಮಾರಿಷಸ್ ನ ಮಾಜಿ ಅಧ್ಯಕ್ಷರ ಪತ್ನಿಯಾದ ಶ್ರೀಮತಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕರಾದ ಅರವಿಂದ್ ಬೂಲೆಲೀ, ಶ್ರೀ ಅಲನ್ ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವರಾದ ಶ್ರೀ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವರಾದ ಶ್ರೀ ಅಂಜೀವ್ ರಾಮ್ಧಾನ್, ಸಹಕಾರ ಸಚಿವರಾದ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ ನ ಸಚಿವರಾದ ಶ್ರೀ ಕೈಲಾಶ್ ಜಗತ್ಪಾಲ್ ಇವೆರಲ್ಲರೂ ಭಾಗಿಯಾಗಿದ್ದರು.

ಇನ್ನು ಮಾರಿಷಸ್​ಗೆ ನಾಲ್ಕು ದಿನಗಳ ಪ್ರವಾಸದಲ್ಲಿರುವ ರವಿಶಂಕರ್ ಗುರೂಜಿಯವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ರೀತಿಯ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ ನಲ್ಲೂ ನಡೆಯಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment