13 ಲಕ್ಷದ ವಾಚ್​.. 2 ಲಕ್ಷದ ಬ್ಯಾಗ್; ಆಧ್ಯಾತ್ಮಿಕ ವಾಗ್ಮಿ ಜೀವನ ಶೈಲಿಗೆ ಬೆಚ್ಚಿ ಬಿದ್ದ ನೆಟ್ಟಿಗರು; ಇವರ ಹಿನ್ನೆಲೆ ಏನು?

author-image
admin
Updated On
13 ಲಕ್ಷದ ವಾಚ್​.. 2 ಲಕ್ಷದ ಬ್ಯಾಗ್; ಆಧ್ಯಾತ್ಮಿಕ ವಾಗ್ಮಿ ಜೀವನ ಶೈಲಿಗೆ ಬೆಚ್ಚಿ ಬಿದ್ದ ನೆಟ್ಟಿಗರು; ಇವರ ಹಿನ್ನೆಲೆ ಏನು?
Advertisment
  • ಏರ್‌ಪೋರ್ಟ್‌ನಲ್ಲಿ 2 ಲಕ್ಷದ ಬ್ಯಾಗ್ ಜೊತೆ ಪ್ರತ್ಯಕ್ಷವಾದ ಜಯ ಕಿಶೋರಿ
  • ಆಧ್ಯಾತ್ಮಿಕ ವಾಗ್ಮಿ ಕೈಯಲ್ಲಿ ಮಿಂಚಿದ ಬರೋಬ್ಬರಿ 13 ಲಕ್ಷದ ವಾಚ್‌!
  • 7 ವರ್ಷ ವಯಸ್ಸಲ್ಲೇ ಆಧ್ಯಾತ್ಮಿಕ ಚಿಂತನೆ ಬಗ್ಗೆ ಒಲವು ಹೊಂದಿದ್ದರು

ನವದೆಹಲಿ: ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಅವರ ದುಬಾರಿ ಜೀವನ ಶೈಲಿಗೆ ಎಲ್ರೂ ಶಾಕ್ ಆಗಿದ್ದಾರೆ. ಬರೋಬ್ಬರಿ 2.1 ಲಕ್ಷ ಮೌಲ್ಯದ ಬ್ಯಾಗ್‌ ಹಿಡಿದು ಕಿಶೋರಿ ನಡೆದಾಡಿದ ವಿಡಿಯೋ ವೈರಲ್‌ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಬಹುದಿನದ ಆಸೆ ಈಡೇರಿಸಿಕೊಂಡ ಬಿಗ್​ಬಾಸ್​ ಬೆಂಕಿ; ತನಿಷಾ ಕುಪ್ಪಂಡ ದುಬಾರಿ ಕಾರಿನ ಬೆಲೆ ಎಷ್ಟು? 

ವಾಗ್ಮಿ ಜಯ ಕಿಶೋರಿ ಜೀವನದಲ್ಲಿ ಕಾಂಟ್ರೋವರ್ಸಿ ಇದೇ ಮೊದಲಲ್ಲ. 13 ಲಕ್ಷದ ವಾಚ್‌ ಧರಿಸಿದ್ದ ಜಯ ಕಿಶೋರಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಏರ್‌ಪೋರ್ಟ್‌ನಲ್ಲಿ ಕ್ರಿಶ್ಚಿಯನ್ ಡಿಯಾರ್ ಕಂಪನಿ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದಿರುವ ಜಯ ಕಿಶೋರಿ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

publive-image

ಯಾರು ಈ ಜಯ ಕಿಶೋರಿ?
ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಅವರು ಮೂಲತಃ ಪಶ್ಚಿಮ ಬಂಗಾಳ ಮೂಲದವರು. ಜುಲೈ 13, 1995ರಂದು ಕೋಲ್ಕತ್ತಾದಲ್ಲಿ ಜನಿಸಿದ್ದಾರೆ. 7 ವರ್ಷ ವಯಸ್ಸಲ್ಲೇ ಆಧ್ಯಾತ್ಮಿಕ ಚಿಂತನೆ ಬಗ್ಗೆ ಒಲವು ಹೊಂದಿರುವ ಜಯ, ಭಾರತದ ಪ್ರಸಿದ್ಧ ಆಧ್ಯಾತ್ಮಿಕ ವಾಗ್ಮಿಗಳಲ್ಲಿ ಒಬ್ಬರಾಗಿದ್ದಾರೆ.


">October 27, 2024

ಮಾತಿನ ಚಾತುರ್ಯ ಹೊಂದಿರುವ ಜಯ ಕಿಶೋರಿ ಅವರು ಧಾರ್ಮಿಕ ಗಾಯಕಿಯು ಕೂಡ ಹೌದು. ಜಯ ಕಿಶೋರಿಯ ಅವರ ದುಬಾರಿ ಬ್ಯಾಗ್​ ಕಂಡು ಜನ ಶಾಕ್ ಆಗಿದ್ರೆ, ₹13.80 ಲಕ್ಷ ಮೌಲ್ಯದ ರೋಲೆಕ್ಸ್​ ವಾಚ್​ ದೃಶ್ಯ ಸಹ ವೈರಲ್ ಆಗಿದೆ.

publive-image

ಆಕ್ರೋಶ ಯಾಕೆ?

ಆಧ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿರುವ ಜಯ ಕಿಶೋರಿ ಅವರಿಗೆ ಇಷ್ಟು ಐಷಾರಾಮಿ ಜೀವನ ಬೇಕೆ? ಐಷಾರಾಮಿ ಜೀವನ ನಡೆಸೋ ಇವ್ರು ಆಧ್ಯಾತ್ಮಿಕ ವಾಗ್ಮಿಯೇ ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಜಯ ಕಿಶೋರಿ ಅವರು ತಮ್ಮ ಸಾಕಷ್ಟು ಪ್ರವಚನಗಳಲ್ಲಿ ಜನರಿಗೆ ಐಷಾರಾಮಿ ಜೀವನ ಅಗತ್ಯವಿಲ್ಲ ಎಂದು ಬೋಧಿಸುತ್ತಾರೆ. ಆದರೆ ಈಗ ಜಯ ಕಿಶೋರಿ ಅವರೇ ಐಷಾರಾಮಿ ಜೀವನ ಶೈಲಿಗೆ ಭಾರೀ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment