newsfirstkannada.com

×

ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ.. ಸರ್ಕಾರದ ವಿರುದ್ಧ ಗರ್ಭಿಣಿಯರ ಆಕ್ರೋಶ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

Share :

Published July 13, 2023 at 6:21pm

Update July 13, 2023 at 6:23pm

    ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಆರೋಪ

    ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಕೊಳೆತ ಮೊಟ್ಟೆ ಕೊಡ್ತೀರಾ?

    ಹಾವೇರಿ, ಹಾಸನ, ಯಾದಗಿರಿಯಲ್ಲಿ ಗರ್ಭಿಣಿಯರ ಆಕ್ರೋಶ

ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸಿ, ಪೌಷ್ಟಿಕಾಂಶ ಹೆಚ್ಚಿಸಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳು ಮೊಟ್ಟೆಯನ್ನು ಪೂರೈಕೆ ಮಾಡಲಾಗುತ್ತದೆ. ಆದರೆ ರಾಜ್ಯದ ಹಲವೆಡೆ ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಗರ್ಭಿಣಿ ಮಹಿಳೆಯರಿಗೆ ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಹೀಗೆ ಯಾದಗಿರಿ, ಹಾವೇರಿ, ಹಾಸನ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಪೂರೈಕೆ ಮಾಡಿದ್ದ ಕಳಪೆ ಮೊಟ್ಟೆಗಳ ಬಣ್ಣ ಬಯಲಾಗಿದೆ. ಇನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಿದ್ದ ಮೊಟ್ಟೆಗಳನ್ನು ತಂದು ಬೇಯಿಸಿದ ಬಳಿಕ ಕೆಲವು ಕೆಟ್ಟಿರುವುದು ಕಂಡು ಬಂದಿದೆ.

ಮೊಟ್ಟೆಯ ಒಳಭಾಗದಲ್ಲಿ ಹಳದಿ ಬಣ್ಣದ ಬದಲು ಕಪ್ಪು ಬಣ್ಣಕ್ಕೆ ತಿರುಗಿದ್ದು, ಇದನ್ನು ನೋಡಿದ ಗರ್ಭಿಣಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಕೆಟ್ಟು ಹೋದ ಮೊಟ್ಟೆಗಳ ವಿತರಿಸಿದ್ದಾರೆ, ಸರ್ಕಾರ ಪೂರೈಕೆ ಮಾಡಿರುವ ಮೊಟ್ಟೆಗಳು ಗಬ್ಬು ನಾರುತ್ತಿವೆ, ತಿನ್ನಲು ಆಗುತ್ತಿಲ್ಲ ಎಂದು ಗರ್ಭಿಣಿ ಮಹಿಳೆಯರು ಬಿಸಾಡುತ್ತಿದ್ದಾರೆ.

ಇನ್ನು, ಈ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡುತ್ತಾರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು , ಸಪ್ಲೈ ಲಿಸ್ಟ್ ನಿಂದಲೂ ಕೈ ಬಿಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ.. ಸರ್ಕಾರದ ವಿರುದ್ಧ ಗರ್ಭಿಣಿಯರ ಆಕ್ರೋಶ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

https://newsfirstlive.com/wp-content/uploads/2023/06/laxmi-5.jpg

Load More