Asia Cup​; ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ!

ಏಷ್ಯಾ ಕಪ್​ಗೆ ಟೀಮ್ ಇಂಡಿಯಾ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಮುಂದಿನ ಹಾದಿ ಸುಲಭವಾಗಲಿದೆ. ಏಕೆಂದರೆ ಮುಂದೆ ಎರಡು ಮಹತ್ವದ ಟ್ರೋಫಿಗಳು ನಡೆಯಲಿದ್ದು ಬಲಿಷ್ಠ ತಂಡ ಕಟ್ಟುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಲೇ ಇದೆ.

author-image
Bhimappa
SURYA_KUMAR (1)
Advertisment

ಏಷ್ಯಾಕಪ್​ ಟೂರ್ನಿಯೊಂದಿಗೆ 2026ರ ಟಿ20 ವಿಶ್ವಕಪ್​​ಗೆ ಟೀಮ್​ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಏಷ್ಯನ್​ ಸಮರಕ್ಕೆ ಪ್ರಕಟಿಸಿರೋ ತಂಡವೇ ಬಹುತೇಕ ಚುಟುಕು ವಿಶ್ವಕಪ್​ ಸಮರದಲ್ಲಿ ಆಡೋದು ಕನ್​ಫರ್ಮ್​ ಆಗಿದೆ. ತಂಡವೇನೋ ಮೆಲ್ನೋಟಕ್ಕೆ ಬಲಿಷ್ಠವಾಗೇ ಕಾಣ್ತಿದೆ. ಆದ್ರೆ, ಒಂದು ಪ್ರಶ್ನೆ ಮಾತ್ರ ಪ್ರಶ್ನೆಯಾಗೇ ಉಳಿದಿದೆ. 

ಟೀಮ್ ಇಂಡಿಯಾ ಬದಲಾಗ್ತಿದೆ. ಕೆಲ ಆಟಗಾರರು ಟೀಮ್ ಇಂಡಿಯಾದಿಂದ ದೂರ ಆಗಿದ್ದಾರೆ. ಕೆಲ ಹಿರಿಯ ಆಟಗಾರರ ಭವಿಷ್ಯ ಅಂತ್ರತ್ರಕ್ಕೆ ಸಿಲುಕಿದೆ. ಮುಂದಿನ 6 ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್​​ಗೆ ಒಂದೊಳ್ಳೆ ಟೀಮ್ ಕಟ್ಟುವ ಸವಾಲು ಗಂಭೀರ್​​​​​​​ & ಟೀಮ್​ ಮುಂದಿದೆ. ಇದಕ್ಕೆ ಈಗಾಗಲೇ ಸಿದ್ಧತೆಯೂ ಆರಂಭವಾಗಿದೆ. ಆದ್ರೂ, ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿರುವ ಟೀಮ್ ಮ್ಯಾನೇಜ್​ಮೆಂಟ್, ಕಣ್ಣಿದ್ದು ಕುರುಡಾಗಿದ್ಯಾ ಎಂಬ ಅನುಮಾನ ಹುಟ್ಟಿದೆ.

GILL_KOHLI (2)

ಗಂಭೀರ್ ದೃಷ್ಟಿಯಲ್ಲಿ ಟೀಮ್ ಇಂಡಿಯಾಗೆ ಬೇಕಿಲ್ವಾ ‘ಫಿನಿಶರ್’.!?

ವೈಟ್​ಬಾಲ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಡೇಂಜರಸ್ ಟೀಮ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಕಳೆದ ಐಸಿಸಿ ಟೂರ್ನಿಗಳ ರಿಸಲ್ಟ್​​. 2023ರ ಏಕದಿನ ವಿಶ್ವಕಪ್​ ರನ್ನರ್ಸ್​ ಆಗಿರೋ ಟೀಮ್​ ಇಂಡಿಯಾ, 2024ರ ಟಿ20 ವಿಶ್ವಕಪ್​ 2025ರ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್ಸ್. ಇಂತಾ ಚಾಂಪಿಯನ್​ ತಂಡದಲ್ಲೀಗ ಫಿನಿಶರ್ ಎಂಬ ಪದಕ್ಕೆ ಸ್ಥಾನವೇ ಇಲ್ಲ. 

ಗೌತಮ್ ಗಂಭೀರ್, ಟೀಮ್ ಇಂಡಿಯಾ ಹೆಡ್ ಕೋಚ್ ಅದ್ಮೇಲೆ, ಟೀಮ್ ಇಂಡಿಯಾದಲ್ಲಿ ಫಿನಿಶರ್ ಎಂಬ ಪರಿಕಲ್ಪನೆಯೇ ಇಲ್ಲ. ಟಾಪ್ ಆರ್ಡರ್​ಗೆ ನೀಡುವಷ್ಟು ಮಹತ್ವವನ್ನ ಲೋವರ್ ಆರ್ಡರ್​ಗೆ ನೀಡದ ಗೌತಮ್ ಗಂಭೀರ್, ಅಗ್ರ ಕ್ರಮಾಂಕವೇ ತಂಡಕ್ಕೆ ಸಕ್ಸಸ್​ ತಂದುಕೊಡುತ್ತೆ ಎಂದು ನಂಬಿದಂತಿದೆ. ಇದು ಟೀಮ್ ಇಂಡಿಯಾದಲ್ಲಿ ಫಿನಿಶರ್ ಪರಿಪಾಠ ಮರೆಯಾಗ್ತಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ. 

ಆಲ್​ರೌಂಡರ್​​ಗಳ ಮೇಲಷ್ಟೇ ಗೌತಮ್ ಗಂಭೀರ್​ ಒಲವು..!​

ಹೆಡ್ ಕೋಚ್ ಗೌತಮ್ ಗಂಭೀರ್, ಟೀಮ್ ಇಂಡಿಯಾಗೆ ಬಂದ್ಮೇಲೆ ಹೆಚ್ಚು ಬದಲಾಗಿದೆ. ಟಿ20 ತಂಡದಲ್ಲಿ ನೋಡಿದ್ರೆ, ಸೆಕ್ಯೂರ್ ಟಾಪ್ ಆರ್ಡರ್ ಇದೆ. ಟಿ20 ಸ್ಪೆಷಲಿಸ್ಟ್​​ಗಳ ದಂಡಿದೆ. ಲೆಫ್ಟ್​ ಆ್ಯಂಡ್ ರೈಟ್​ ಕಾಂಬಿನೇಷನ್​ ಬಗ್ಗೆ ಹೆಚ್ಚು ಯೋಚಿಸುವ ಗಂಭೀರ್, ಮತ್ತೊಂದ್ಕಡೆ ಆಲ್​ರೌಂಡರ್​ಗಳ ಮೇಲೆ ಒಲವು ಹೊಂದಿದ್ದಾರೆ. 

ಈ ಹಿಂದಿನ ಟೀಮ್ ಇಂಡಿಯಾಗೆ ಹೋಲಿಕೆ ಮಾಡಿದ್ರೆ, ಸದ್ಯ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಐದಾರು ಮಂದಿ ಆಲ್​ರೌಂಡರ್​​​ಗಳು ಸಿಕ್ತಾರೆ. ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಆಕ್ಷರ್ ಪಟೇಲ್, ವಾಷ್ಟಿಂಗ್ಟನ್ ಸುಂದರ್, ನಿತಿಶ್ ಕುಮಾರ್​ ರೆಡ್ಡಿ ಹೀಗೆ ಬೌಲಿಂಗ್​​ & ಬ್ಯಾಟಿಂಗ್​​ನಲ್ಲಿ ಹೆಚ್ಚು ಆಯ್ಕೆಗಳಿಗೆ ಆದ್ಯತೆ ನೀಡ್ತಿದ್ದಾರೆ. ಆದ್ರೆ, ಈ ಹಿಂದೆ ಸ್ಪೆಷಲಿಸ್ಟ್​ಗಳಾಗಿ ಫಿನಿಶರ್​​ ರೋಲ್​ ಪ್ಲೇ ಮಾಡ್ತಿದ್ದ ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡ್ತಿಲ್ಲ. 

ಇದನ್ನೂ ಓದಿ: ಹೆಚ್ಚಾಯಿತು ಗಿಲ್ ಡಿಮ್ಯಾಂಡ್.. ಬ್ರ್ಯಾಂಡ್‌ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್​ಮನ್..?

‘ನಾಚಿಕೆ ಆಗಬೇಕು ನಿನಗೆ’- ಕ್ಯಾಪ್ಟನ್​​ ಸೂರ್ಯಕುಮಾರ್​​ ಯಾದವ್​​ ವಿರುದ್ಧ ಭಾರೀ ಆಕ್ರೋಶ

ಏಷ್ಯಾಕಪ್​​ನಲ್ಲಿ ಕಂಡುಕೊಳ್ಳಬೇಕಿದೆ ಪ್ರಶ್ನೆ​ಗೆ ಉತ್ತರ..!

ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಡೆಪ್ತ್ ಇದೆ. ಆದ್ರೆ, ಓತ್ತಡದ ನಡುವೆ ಹೋರಾಡುವ ಆಟಗಾರರು ಇಲ್ಲ. ಹೈಫ್ರಷರ್ ಗೇಮ್ಸ್​ನಲ್ಲಿ ಈ ಆಲ್​ರೌಂಡರ್​ಗಳು ಕೈ ಹಿಡಿದ್ದಿಲ್ಲ. ಧೋನಿ ಬಳಿಕ ಹಾರ್ದಿಕ್ ಪಾಂಡ್ಯ ಫಿನಿಶರ್ ಆಗಿ ಹೆಸರು ಪಡೆದ್ರೂ, ಗೆಲ್ಲಿಸಿದ ಪಂದ್ಯಗಳು ಬೆರಳೆಣಿಕೆಯಷ್ಟು. ರಿಂಕು ಸಿಂಗ್ ನಯಾ ಫಿನಿಶರ್ ಆಗಿ ತಂಡಕ್ಕೆ ಬಂದ್ರೂ, ಆಡಿದ್ದು ಒಂದೆರೆಡು ಮ್ಯಾಚ್ ಮಾತ್ರ. ಐಪಿಎಲ್​​ನಲ್ಲಿ ನಡೆಯೋ ಶಿವಂ ದುಬೆ ಶಿವತಾಂಡವ ಟೀಮ್ ಇಂಡಿಯಾದಲ್ಲಿ ನಡೆದಿಲ್ಲ. ಅಕ್ಷರ್ ಪಟೇಲ್, ವಾಷಿಂಗ್ಟನ್​​ ಸುಂದರ್ 7 ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೂ, ಬ್ಯಾಟಿಂಗ್​​ನಲ್ಲಿ ಪವರ್ ಇಲ್ಲ. ಮುಂಬರೋ ಏಷ್ಯಾಕಪ್​​ನಲ್ಲಿ ಫಿನಿಶರ್​ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕಿದೆ. 

ಬೇಕಿದೆ ಪೂರನ್​, ಡೆವಿಡ್​​ರಂಥ ಫಿನಿಶರ್ಸ್, ಗೇಮ್ ಚೇಂಜರ್ಸ್..!

ಟೀಮ್ ಇಂಡಿಯಾದಲ್ಲಿ ಟಿ20 ಸ್ಪೆಷಲಿಸ್ಟ್​ಗಳ ದಂಡೇ ಇದೆ. ಆಲ್​​ರೌಂಡರ್​ಗಳು ಇದ್ದಾರೆ ನಿಜ. ಆದ್ರೆ,  ವೆಸ್ಟ್ ಇಂಡೀಸ್​​ನ ನಿಕೋಲಸ್ ಪೂರನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್​​ರಂಥ ಪವರ್ ಹಿಟ್ಟರ್​ಗಳ ಅನುಪಸ್ಥಿತಿ ಟೀಮ್ ಇಂಡಿಯಾಗೆ ಇದೆ.  ಪವರ್ ಹಿಟ್ಟರ್​, ಸಿಂಗಲ್ ಹ್ಯಾಂಡೆಡ್ಲಿ ಗೇಮ್​ ಫಿನಿಶ್ ಮಾಡುವ ಗೇಮ್ ಚೇಂಜರ್ಸ್ ತಂಡಕ್ಕೆ ಬೇಕಿದ್ದಾರೆ. ಸ್ಪಿನ್, ಪೇಸರ್ಸ್ ಎನ್ನದೆ ಎದುರಾಳಿ ಎದುರು ಹೋರಾಡುವಂತ ಬ್ಯಾಟರ್​​ನ ಅಗತ್ಯತೆ ಇದೆ. ಏಷ್ಯಾಕಪ್​ನಲ್ಲಿ ಟೀಮ್​ ಮ್ಯಾನೇಜ್​ಮೆಂಟ್​​ ಫಿನಿಷರ್​​ ಯಾರು​ ಎಂಬ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ರೆ, 2026ರ ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್ಸ್​ ಆಗಿ ಕಿರೀಟ ಉಳಿಸಿಕೊಳ್ಳುವುದು ಕಷ್ಟ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Asia Cup 2025 Indian cricket team news cricket players
Advertisment