/newsfirstlive-kannada/media/media_files/2025/08/24/gill_kohli-2-2025-08-24-10-24-46.jpg)
ಶುಭ್ಮನ್ ಗಿಲ್ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿದ್ದೇ ಆಗಿದ್ದು, ಆತನ ಚರೀಷ್ಮಾನೇ ಬದಲಾಗಿದೆ. ಆನ್ ಫೀಲ್ಡ್ನಲ್ಲಿ ನಯಾ ಕೊಹ್ಲಿ ಎನಿಸಿಕೊಳ್ತಿರುವ ಶುಭ್ಮನ್, ಆಪ್ ದಿ ಫೀಲ್ಡ್ನಲ್ಲೂ ವಿರಾಟ್ ಹಾದಿಯಲ್ಲೇ ಸಾಗಿದ್ದಾರೆ. ಆದ್ರೆ, ಇದೇ ಈಗ ವಿರಾಟ್ ಕೊಹ್ಲಿಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಅದು ಯಾವ ವಿಚಾರಕ್ಕೆ?.
ವಿಶ್ವ ಕ್ರಿಕೆಟ್ ಲೋಕದಲ್ಲಿ ಶುಭ್ಮನ್ ಗಿಲ್ ಯುಗಾರಂಭ ಶುರುವಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕನಾಗಿ ಆನ್ಫೀಲ್ಡ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಪಂಜಾಬ್ ಪುತ್ತರ್, ರನ್ ಹೊಳೆಯನ್ನೇ ಹರಿಸಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸಿ ದಿಗ್ಗಜರ ದಾಖಲೆಗಳನ್ನೇ ಉಡೀಸ್ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಬರೋಬ್ಬರಿ 754 ರನ್ ಕೊಳ್ಳೆ ಹೊಡೆದಿದ್ದ ಶುಭ್ಮನ್ ಗಿಲ್, ಟೀಮ್ ಇಂಡಿಯಾದ ಹೊಸ ರನ್ ಮಷಿನ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಹಾದಿಯಲ್ಲೇ ಮುನ್ನಡೆದಿರುವ ಶುಭಮನ್, ಆನ್ಫೀಲ್ಡ್ನಲ್ಲೇ ಅಲ್ಲ, ಆಫ್ ದಿ ಫೀಲ್ಡ್ನಲ್ಲೂ ವಿರಾಟ್ ಕೊಹ್ಲಿಯಂತೆಯೇ ಸಾಗ್ತಿದ್ದಾರೆ.
/filters:format(webp)/newsfirstlive-kannada/media/media_files/2025/08/12/shubman-gill-captain-2025-08-12-17-22-12.jpg)
ಬ್ರ್ಯಾಂಡ್‌ಗಳ ಪಾಲಿನ ಹೊಸ ಕೊಹ್ಲಿ ಶುಭ್ಮನ್ ಗಿಲ್..!
ಶುಭ್ಮನ್ ಗಿಲ್, ಟೆಸ್ಟ್ ಕ್ಯಾಪ್ಟನ್ ಪಟ್ಟವೇರಿದ್ದೇ ಏರಿದ್ದು. ಟೀಮ್ ಇಂಡಿಯಾದ ನಯಾ ರನ್ ಮಷಿನ್ ಆಗಿದ್ದಾರೆ. ಆದ್ರೆ, ಆನ್ ಫೀಲ್ಡ್ನಲ್ಲಿ ರನ್ ಮಷಿನ್ ಆಗಿರುವ ಶುಭ್ಮನ್, ಈಗ ಆಲ್ ಫಾರ್ಮೆಟ್ ಕ್ಯಾಪ್ಟನ್ ಆಗುವ ಬಗ್ಗೆ ವದಂತಿಗಳು ಕೇಳಿ ಬರ್ತಿವೆ. ಇದೇ ಕಾರಣಕ್ಕೆ ಏಷ್ಯಾಕಪ್ನಲ್ಲಿ ಉಪ ನಾಯಕನ ಪಟ್ಟ ಕಟ್ಟಲಾಗಿದೆ ಎನ್ನಲಾಗ್ತಿದೆ. ಆದ್ರೀಗ ಶುಭ್ಮನ್ ಗಿಲ್, ಟೆಸ್ಟ್ ತಂಡದ ನಾಯಕನಾದ್ಮೇಲೆ ಚರೀಷ್ಮಾನೆ ಬದಲಾಗಿದೆ. ಯಾಕಂದ್ರೆ, ಶುಭಮನ್ ಗಿಲ್, ಈಗ ಕಾರ್ಪೋರೇಟ್ ಜಗತ್ತಿನ ಹೊಸ ವಿರಾಟ್ ಕೊಹ್ಲಿಯಾಗಿದ್ದಾರೆ.
ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್‌ನ ಕಿಂಗ್ ಮಾತ್ರವಲ್ಲ, ಕಾರ್ಪೋರೇಟ್ ಜಗತ್ತಿನ ಕಿಂಗ್ ಕೂಡ ಆಗಿದ್ದರು. ಆದ್ರೀಗ ಇದೇ ಹಾದಿಯಲ್ಲೇ ಶುಭ್ಮನ್ ಗಿಲ್ ಹೆಜ್ಜೆ ಹಾಕ್ತಿದ್ದಾರೆ. ಇದಕ್ಕೆ ಕಾರಣ ಇಂಗ್ಲೆಂಡ್ ಪ್ರವಾಸದ ಬಳಿಕ ಶುಭ್ಮನ್ ಗಿಲ್ಗೆ ಹೆಚ್ಚಾಗಿರುವ ಡಿಮ್ಯಾಂಡ್.
ಫುಲ್ ಡಿಮ್ಯಾಂಡ್.. ಪ್ರಿನ್ಸ್ಗಾಗಿ ಜಾಹೀರಾತು ಕಂಪನಿಗಳ ಕ್ಯೂ!
ಇಂಗ್ಲೆಂಡ್ ಸರಣಿಯಲ್ಲಿ ಫ್ಯಾನ್ಸ್ ಮನ ಗೆದ್ದಿದ್ದ ಶುಭ್ಮನ್, ಮತ್ತೊಂದಡೆ ಬ್ರ್ಯಾಂಡ್‌ಗಳ ಹೃದಯ ಗೆಲ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ನಯಾ ಡಾರ್ಲಿಂಗ್ ಆಗಿರುವ ಶುಭ್ಮನ್, ಈಗ ನ್ಯೂ ಬ್ರ್ಯಾಂಡ್ ಮಷಿನ್ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಶುಭ್ಮನ್ ಗಿಲ್ಗಾಗಿ ಪ್ರಖ್ಯಾತ ಬ್ರ್ಯಾಂಡ್ ಕಂಪನಿಗಳೇ ಕ್ಯೂ ನಿಲ್ತಿವೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಹಿಂದೆ ತಿಂಗಳಿಗೆ ನಾಲ್ಕೈದು ಕಂಪನಿಗಳು ಕಾಯ ತೊಡಗಿದ್ರೆ. ಈಗ ಬರೋಬ್ಬರಿ 10 ರಿಂದ 15ಕ್ಕೆ ಏರಿಕೆಯಾಗಿವೆ. ಇದು ಶುಭ್ಮನ್ ಡಿಮ್ಯಾಡ್ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಎಕ್ಸಾಂಪಲ್.
ಶುಭ್ಮನ್ ಗಿಲ್ ವಾಲ್ಯೂನಲ್ಲಿ ಶೇ.40ರಷ್ಟು ಹೆಚ್ಚಳ..!
ಕಾರ್ಪೋರೇಟ್ ಜಗತ್ತಿನ ನಯಾ ಡಾರ್ಲಿಂಗ್ ಶುಭ್ಮನ್ ಗಿಲ್, ಈಗ ಫುಲ್ ಕಾಸ್ಟ್ಲಿಯಾಗಿದ್ದಾರೆ. ಇಷ್ಟು ದಿನ ಬ್ರ್ಯಾಂಡ್‌ಗಳ ಒಪ್ಪಂದಗಳಿಗಾಗಿ ಸುಮಾರು 4 ಕೋಟಿ ಪಡೀತ್ತಿದ್ದ ಶುಭ್ಮನ್ ಗಿಲ್, ಇನ್ಮುಂದೆ 7 ರಿಂದ 8 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ. ಅಂದ್ರೆ, ಈ ಹಿಂದೆ ಪಡೀತಿದ್ದ ಹಣಕ್ಕಿಂತ ದುಪ್ಪಟ್ಟು ಹಣ ಶುಭ್ಮನ್ ಜೇಬಿಗಿಳಿಸ್ತಾರೆ.
2024ರಲ್ಲಿ ಬ್ರ್ಯಾಂಡ್ ಎಂಡೋರ್ಸ್ಮೆಂಟ್ನಿಂದ 40 ಕೋಟಿ ಹಣ
MRF, ನೈಕಿ, ಟಾಟಾ ಕ್ಯಾಪಿಟಲ್ಸ್, ಕೋಕಾ-ಕೋಲಾ, ಬಜಾಜ್ ಅಲಿಯಾನ್ಸ್, ಆಪಲ್ ಒಡೆತನದ ಬೀಟ್ಸ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಪ್ರಖ್ಯಾತ ಬ್ರ್ಯಾಂಡ್‌ಗಳ ಪ್ರಚಾರಕನಾಗಿರುವ ಶುಭ್ಮನ್, 2023ರ ಅಂತ್ಯದಲ್ಲಿ ಕೇವಲ 8 ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದರು. ಆದ್ರೀಗ ಇದರ ಸಂಖ್ಯೆ ಬರೋಬ್ಬರಿ 19ಕ್ಕೆ ಏರಿಕೆಯಾಗಿದೆ. ಇದು ಶುಭ್ಮನ್ ಗಿಲ್, ಡಿಮ್ಯಾಂಡ್ ಅನ್ನೇ ಪ್ರತಿ ಸೂಚಿಸುತ್ತೆ.
ಬ್ರ್ಯಾಂಡ್ ಎಂಡೋರ್ಸ್ಮೆಂಟ್ನಿಂದ ಶುಭ್ಮನ್, 2024ರಲ್ಲಿ 40 ಕೋಟಿ ಗಳಿಸಿದ್ದಾರೆ. ಇದೀಗ ಈ ಆದಾಯ ಡಬಲ್ ಆಗೋದು ಗ್ಯಾರಂಟಿ. ಯಾಕಂದ್ರೆ, ಶುಭ್ಮನ್ಗಾಗಿ ಮತ್ತಷ್ಟು ಬ್ರ್ಯಾಂಡ್ಗಳು ಕ್ಯೂ ನಿಂತಿವೆ. ಶೀಘ್ರದಲ್ಲೇ ಇನ್ನಷ್ಟು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಶುಭ್ಮನ್ ಆದಾಯದಲ್ಲಿ ಗಣನೀಯ ಏರಿಕೆ ಆಗೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ:ಕುರಿ ಕಾಯೋರಿಗೆ ಗನ್ ಲೈಸೆನ್ಸ್ ಕೊಡಬೇಕು.. ಸಚಿವ ಭೈರತಿ ಸುರೇಶ್ ಇನ್ನೇನು ಹೇಳಿದರು?
ಕಿಂಗ್ ಕೊಹ್ಲಿಗೆ ಹಿನ್ನಡೆಯಾಗುತ್ತಾ ಶುಭ್ಮನ್ ಪ್ರವರ್ಧಮಾನ..?
ಟಿ20, ಟೆಸ್ಟ್ ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ನಿವೃತ್ತಿಯಾಗಿದ್ದಾರೆ. ಆದ್ರೆ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ವಿಚಾರದಲ್ಲಿ ಇವತ್ತಿಗೂ ಕೊಹ್ಲಿಯೇ ಕಿಂಗ್ ಆಗಿದ್ದಾರೆ. ಪ್ರತಿ ಬ್ರ್ಯಾಂಡ್ನ ಒಪ್ಪಂದಕ್ಕೆ 7.5 ಕೋಟಿಯಿಂದ 10 ಕೋಟಿ ಚಾರ್ಚ್ ಮಾಡ್ತಾರೆ. 42ಕ್ಕೂ ಅಧಿಕ ಬ್ರ್ಯಾಂಡ್‌ಗಳ ಪ್ರಮೋಟರ್ ಆಗಿದ್ದಾರೆ. ವಾರ್ಷಿಕ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಫೀಸ್ನಿಂದಲೇ 200 ಕೋಟಿಗೂ ಅಧಿಕ ಹಣ ಗಳಿಸ್ತಾರೆ.
ಆದ್ರೆ, ವಿರಾಟ್ ಕೊಹ್ಲಿ ಕ್ರಿಕೆಟ್ನಿಂದ ತೆರೆಮರೆಗೆ ಸರಿಯುತ್ತಿದ್ದಾರೆ. ಮತ್ತೊಂದ್ಕಡೆ ಶುಭ್ಮನ್ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಸೂಪರ್ ಸ್ಟಾರ್ ಅಂತಾನೇ ಬಿಂಬಿಸಲಾಗ್ತಿದೆ. ಇದಲ್ಲವೂ ಕೊಹ್ಲಿಗೆ ಪೆಟ್ಟಾಗೋದ್ರಲ್ಲಿ ಅನುಮಾನ ಇಲ್ಲ. ಆನ್ಫೀಲ್ಡ್ ಆಟಕ್ಕೆ ತಕ್ಕಂತೆ ನೇಮ್ ಫೇಮ್ ಮಾತ್ರವೇ ಅಲ್ಲ, ಬ್ರ್ಯಾಂಡ್ ವಾಲ್ಯೂ ಏರುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಶುಭ್ಮನ್ ಗಿಲ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ