/newsfirstlive-kannada/media/media_files/2025/11/08/abhishek_sharma_sanju_samsan_jaiswal_in_ind_vs_aus-2025-11-08-12-39-17.jpg)
ಟೀಮ್ ಇಂಡಿಯಾಗೆ ಸ್ಟಾರ್ಟ್​​​​ ಟ್ರಬಲ್ ಶುರುವಾಗಿದೆ. ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಉತ್ತಮ ಆರಂಭಕ್ಕಾಗಿ ಪರದಾಡ್ತಿರುವ ಟೀಮ್ ಇಂಡಿಯಾ, ಭಾರೀ ಹಿನ್ನಡೆ ಅನುಭವಿಸ್ತಿದೆ. ಅಭಿಷೇಕ್ ಶರ್ಮಾಗೆ ಯಾರು ಸಾಥ್ ನೀಡಬೇಕು ಅನ್ನೋದು, ಇದೀಗ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಟೀಮ್ ಇಂಡಿಯಾ ಆರಂಭಿಕ ಸಮಸ್ಯೆಗೆ, ಕಾರಣ ಯಾರು?.
ಕ್ಯಾನ್​ಬೆರಾದಲ್ಲಿ 35 ರನ್​ಗಳ ಜೊತೆಯಾಟ, ಮೆಲ್ಬರ್ನ್​ನಲ್ಲಿ 20 ರನ್​ಗಳ ಜೊತೆಯಾಟ, ಹೊಬಾರ್ಟ್​ನಲ್ಲಿ 33 ರನ್​ಗಳ ಜೊತೆಯಾಟ, ಗೋಲ್ಡ್ ಕೋಸ್ಟ್​ T20 ಪಂದ್ಯದಲ್ಲಿ 56 ರನ್​ಗಳ ಜೊತೆಯಾಟದ ಸಾಧನೆ ಇದ್ರೂ, ಸಮಾಧಾನವಿಲ್ಲ. ಒಂದೆಡೆ ಅಭಿಷೇಕ್ ಶರ್ಮಾ ತಂಡಕ್ಕೆ ಒಳ್ಳೆ ಸ್ಟಾರ್ಟ್ ನೀಡ್ತಿದ್ದಾರೆ. ಆದ್ರೆ ಅಭಿಷೇಕ್ ಪಾರ್ಟ್ನರ್ ಶುಭ್ಮನ್ ಗಿಲ್, ಸರಿಯಾಗಿ ಸಾಥ್ ಕೊಡ್ತಿಲ್ಲ. ಹಾಗಾಗಿ ಟೀಮ್ ಇಂಡಿಯಾಕ್ಕೀಗ ಹೊಸ ಆರಂಭಿಕ ಬೇಕಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2024/07/yashasvi-jaiswal.jpg)
ಅಭಿಷೇಕ್ ಶರ್ಮಾಗೆ ಯಾರು ಸಾಥ್ ಕೊಡಬೇಕು..?
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್.. ಹೀಗೆ ಟೀಮ್ ಇಂಡಿಯಾ ಪರ T20 ಕ್ರಿಕೆಟ್​​​ನಲ್ಲಿ ಸಾಕಷ್ಟು ಮಂದಿ ಆಟಗಾರರು, ಓಪನರ್ಸ್ ಆಗಿ ಕಣಕ್ಕಿಳಿದಿದ್ದರು. ಇವರಷ್ಟೇ ಅಲ್ಲ, ಇತ್ತೀಚಿಗೆ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಸಹ, ಆರಂಭಿಕರಾಗಿ ಕಾಣಿಸಿಕೊಂಡಿದ್ದರು. ಇಷ್ಟೆಲ್ಲಾ ಮಂದಿ ಬಂದು ಹೋದರೂ, ತಂಡದ ಆರಂಭಿಕ ಸಮಸ್ಯೆಗೆ ಮಾತ್ರ ಉತ್ತರವೇ ಸಿಗಲಿಲ್ಲ.
ಗೌತಮ್ ಗಂಭೀರ್​​ ಕೋಚ್ ಹುದ್ದೆಗೇರಿದ ನಂತರ, ಸಾಕಷ್ಟು ಯಡವಟ್ಟುಗಳನ್ನ ಮಾಡಿದ್ದಾರೆ. ಅದ್ರಲ್ಲಿ ಶುಭ್ಮನ್ ಗಿಲ್​​ರನ್ನ ಟಿ-ಟ್ವೆಂಟಿ ಕ್ರಿಕೆಟ್​​ಗೆ ಅನಾವಶ್ಯಕವಾಗಿ ಫಿಟ್ ಮಾಡಿ, ಕೈಸುಟ್ಟುಕೊಂಡಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಗಿಲ್ ಸಾಧನೆಯೇ, ಇದಕ್ಕೆ ಉದಾಹರಣೆ.
ಆರಂಭಿಕನಾಗಿ ಶುಭ್ಮನ್ ಗಿಲ್ ಸಾಧನೆ
32 ಟಿ-ಟ್ವೆಂಟಿ ಪಂದ್ಯಗಳನ್ನ ಆಡಿರುವ ಗಿಲ್, 28.85ರ ಬ್ಯಾಟಿಂಗ್ ಸರಾಸರಿಯಲ್ಲಿ 808 ರನ್​ ಕಲೆಹಾಕಿದ್ದಾರೆ. 3 ಅರ್ಧಶತಕ ಮತ್ತು 1 ಶತಕ, ಗಿಲ್ ಬ್ಯಾಟ್​ನಿಂದ ದಾಖಲಾಗಿದೆ.
ಗಿಲ್​​ಗೆ ಕಂಪೇರ್ ಮಾಡಿದ್ರೆ, ಆರಂಭಿಕನಾಗಿ ಸಂಜು ಸ್ಯಾಮ್ಸನ್ ಎಷ್ಟೋ ಉತ್ತಮ. ಆದ್ರೆ ಸ್ಯಾಮ್ಸನ್​​ಗೆ ಪರ್ಮನೆಂಟ್​​​​ ಬ್ಯಾಟಿಂಗ್ ಸ್ಲಾಟ್ ಇಲ್ಲದ ಕಾರಣ, ಸಿಕ್ಕ ಸಿಕ್ಕ ಸ್ಲಾಟ್​​​ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಆರಂಭಿಕನಾಗಿ ಸಂಜು ಸ್ಯಾಮ್ಸನ್ ಸಾಧನೆ
ಆಡಿರೋ 17 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 552 ರನ್​ಗಳಿಸಿದ್ದಾರೆ. 32.62ರ ಬ್ಯಾಟಿಂಗ್ ಸರಾಸರಿ ಹೊಂದಿರುವ ಸ್ಯಾಮ್ಸನ್, 1 ಅರ್ಧಶತಕ ಮತ್ತು 3 ಭರ್ಜರಿ ಶತಕಗಳನ್ನ ಸಿಡಿಸಿದ್ದಾರೆ. ಗಿಲ್, ಸ್ಯಾಮ್ಸನ್ ಬ್ಯಾಟಿಂಗ್ ಸಾಧನೆ ಒಂದೆಡೆಯಾದ್ರೆ, ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ಟಿ-ಟ್ವೆಂಟಿ ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರ ಎನಿಸಿಕೊಂಡಿದ್ರು. ಆದ್ರೆ ಕಾರಣವಿಲ್ಲದೆ, ಜೈಸ್ವಾಲ್​​ನ ಸೈಲೆಂಟ್ ಆಗೇ ಸೈಡ್​​ಲೈನ್ ಮಾಡಿಬಿಟ್ರು.​​
/filters:format(webp)/newsfirstlive-kannada/media/media_files/2025/09/09/sanju_samson-2-2025-09-09-16-39-42.jpg)
ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಸಾಧನೆ
23 ಟಿ-ಟ್ವೆಂಟಿ ಪಂದ್ಯಗಳಲ್ಲಿ ಜೈಸ್ವಾಲ್ 723 ರನ್​ ಸಿಡಿಸಿದ್ದಾರೆ. 5 ಅರ್ಧಶತಕ ಮತ್ತು 1 ಶತಕ ಬಾರಿಸಿರುವ ಜಯಸ್ವಾಲ್ ಬ್ಯಾಟಿಂಗ್ ಌವರೇಜ್ 36.15. ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಆರಂಭಿಕರಾಗಿ ಯಾಱರು ಏನೆಲ್ಲಾ ಸಾಧನೆ ಮಾಡಿದ್ದಾರೆ ಅಂತ. ಆದ್ರೆ ಕೋಚ್ ಗಂಭೀರ್​​​​​​​​​​​​​​​​​ ಫೇವರಿಸಂಗೆ, ಟ್ಯಾಲೆಂಟೆಡ್ ಪ್ಲೇಯರ್​ಗಳು ಮೂಲೆಗುಂಪಾಗಿ ಬಿಟ್ಟಿದ್ದಾರೆ.
ಕೋಚ್ ಗಂಭೀರ್ ರಾಜಕೀಯಕ್ಕೆ ಜೈಸ್ವಾಲ್ ಬಲಿ..?
ಯಶಸ್ವಿ ಜೈಸ್ವಾಲ್ ಟಿ-ಟ್ವೆಂಟಿ ತಂಡಕ್ಕೆ ಫಿಟ್ ಆಗೊಲ್ಲ ಅಂತ ಹೇಳೋ ಹಾಗೇ ಇಲ್ಲ. ಜೈಸ್ವಾಲ್ ಆಲ್​ಫಾರ್ಮೆಟ್ ಪ್ಲೇಯರ್. ಸದ್ಯ ಟಿ-ಟ್ವೆಂಟಿ ತಂಡದಲ್ಲಿ ಅಭಿಷೇಕ್ ಶರ್ಮಾ ಮಿಂಚ್ತಿದ್ದಾರೆ. ಜೈಸ್ವಾಲ್ ಅಭಿಷೇಕ್​ಗೆ ಸಾಥ್ ನೀಡಿದ್ರೆ, ಇಬ್ಬರೂ ಮೋಸ್ಟ್ ಡೇಂಜರಸ್ ಪೇರ್ ಎನಿಸಿಕೊಳ್ಳಲಿದ್ದಾರೆ. ಆದ್ರೆ ಇದನ್ನ ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಯಾಕೆ ಯೋಚಿಸಲ್ಲ.? ಏನೋ ಮಾಡೋಕೆ ಹೋಗಿ ಅದೇನೋ ಆಯ್ತು ಅಂತಾರಲ್ಲ. ಹಾಗಾಯ್ತು ನೋಡಿ ಕೋಚ್ ಗಂಭೀರ್ ಲೆಕ್ಕಾಚಾರ. ಇನ್ಮುಂದೆ ಆದ್ರೂ ಕೋಚ್, ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಪ್ರತಿಭೆಗಳನ್ನ ತುಳಿಯೋದಕ್ಕೂ ಮುಂಚೆ, ಒಮ್ಮೆ ಯೋಚಿಸಬೇಕು.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us