ಟಿ-20 ವಿಶ್ವಕಪ್​! ಎದುರಾಳಿಗಳಿಗೆ ನಡುಕ ಹುಟ್ಟಿಸಿದ ಏಕೈಕ ಆಟಗಾರ ಈತ..!

ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಓಪನರ್​ ಅಭಿಷೇಕ್​ ಶರ್ಮಾ ಬೌಲರ್​ಗಳ ನಿದ್ದೆಗೆಡಿಸಿದ್ದಾರೆ. ಸಿಂಗಲ್, ಟೂಡಿ ಅಂತಾ ರನ್ಸ್ ಕದಿಯೋಕಿಂತ ಸಿಕ್ಸರ್​ ಬೌಂಡರಿಗಳಿಂದಲೇ ಈತ ಡೀಲ್ ಮಾಡೋದು. ಈ ಅಭಿಷೇಕ್ ಶರ್ಮಾ ಕ್ರೀಸ್​ನಲ್ಲಿ ಇದ್ದೊಷ್ಟು ಹೊತ್ತು ಫ್ಯಾನ್ಸ್​ಗೆ ಎಂಟರ್​ಟೈನ್ಮೆಂಟ್ ಪಕ್ಕಾ​.

author-image
Ganesh Kerekuli
Abhishek Sharma (6)
Advertisment
  • T20 ವಿಶ್ವಕಪ್​ಗೂ ಬೌಲರ್ಸ್​​ಗೆ ಶುರುವಾಯ್ತು ಭಯ
  • ಅಭಿಷೇಕ್ ಆರ್ಭಟಕ್ಕೆ ಬೆಚ್ಚಿದ ಘಟಾನುಘಟಿಗಳು​
  • ಚುಟುಕು ಫಾರ್ಮೆಟ್​ನ ರಿಯಲ್ ರನ್​ ಮಷೀನ್​

ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಓಪನರ್​ ಅಭಿಷೇಕ್​ ಶರ್ಮಾ ಬೌಲರ್​ಗಳ ನಿದ್ದೆಗೆಡಿಸಿದ್ದಾರೆ. ಸಿಂಗಲ್, ಟೂಡಿ ಅಂತಾ ರನ್ಸ್ ಕದಿಯೋಕಿಂತ ಸಿಕ್ಸರ್​ ಬೌಂಡರಿಗಳಿಂದಲೇ ಈತ ಡೀಲ್ ಮಾಡೋದು. ಈ ಅಭಿಷೇಕ್ ಶರ್ಮಾ ಕ್ರೀಸ್​ನಲ್ಲಿ ಇದ್ದೊಷ್ಟು ಹೊತ್ತು ಫ್ಯಾನ್ಸ್​ಗೆ ಎಂಟರ್​ಟೈನ್ಮೆಂಟ್ ಪಕ್ಕಾ​.

ಪ್ರತಿಷ್ಟಿತ ಟ್ರೋಫಿ ಮೇಲೆ ಕಣ್ಣಿಟ್ಟಿರೋ ಟಾಪ್​ ಟೀಮ್ಸ್​​ ಚಾಂಪಿಯನ್​ ಪಟ್ಟ ಗಿಟ್ಟಿಸಿಕೊಳ್ಳೋಕೆ ಟೀಂ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಅಭ್ಯಾಸದ ಅಖಾಡದಲ್ಲೇ ಎದುರಾಳಿ ಪಡೆಗಳಲ್ಲಿ ಟೀಮ್​ ಇಂಡಿಯಾ ಯಂಗ್​ ಟೈಗರ್​ ಅಭಿಷೇಕ್​ ಶರ್ಮಾ ನಡುಕ ಹುಟ್ಟಿಸಿದ್ದಾರೆ. ಅಭಿಯ ಆರ್ಭಟ ಕಂಡು ಬೌಲರ್​​ಗಳು ಬೆಚ್ಚಿ ಬಿದ್ದಿದ್ದಾರೆ.

ಎದುರಾಳಿಗಳಿಗೆ ಅಭಿಷೇಕ್ ಭಯ

ಫೇಸ್​ ಮಾಡಿದ ಫಸ್ಟ್​ ಬಾಲ್​​ನಿಂದಲೇ ಬೌಂಡರಿ,​​ ಸಿಕ್ಸರ್​ಗಟ್ಟೋಕೆ​ ಎಂಟೆದೆ ಗುಂಡಿಗೆ ಬೇಕು. ಆ ಎಂಟೆದೆ ಬಂಟನೇ ನಮ್ಮ ಅಭಿಷೇಕ್​ ಶರ್ಮಾ. ಈತನ ಫಿಯರ್​​ಲೆಸ್​ ಆ್ಯಟಿಟ್ಯೂಡ್​, ಬ್ರೇವ್​ ಕ್ಯಾರೆಕ್ಟರ್​ ಕ್ರಿಕೆಟ್​ ಲೋಕದಲ್ಲಿ ಹೊಸ ಸೆನ್ಸೇಷನ್​ ಕ್ರಿಯೇಟ್​​ ಮಾಡಿದೆ. ಸರಣಿ ಸರಣಿಗೆ ರೆಕಾರ್ಡ್​ಗಳನ್ನ ಚಿಂದಿ ಉಡಾಯಿಸ್ತಿರೋ ಅಭಿಷೇಕ್​ ದಾಖಲೆ ವೀರನಾಗಿ ವಿಶ್ವಕಪ್ ಅಖಾಡಕ್ಕೆ ರಾಯಲ್​ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. 

ಟಿ20 ಫಾರ್ಮೆಟ್​ನ ರಿಯಲ್ ರನ್​ ಮಷೀನ್

ಅಭಿಷೇಕ್ ಶರ್ಮಾನ ಟಿ20 ಫಾರ್ಮೆಟ್​ನ ರಿಯಲ್ ರನ್​ ಮಷೀನ್ ಅಂದ್ರೆ ತಪ್ಪೇ ಇಲ್ಲ. 2024ರ ಟಿ20 ವಿಶ್ವಕಪ್ ಅಂತ್ಯದ ಬಳಿಕ ನಡೆದಿರೋದು ಅಭಿಷೇಕ್ ಶರ್ಮಾ ದರ್ಬಾರ್​. ಈ ಅವಧಿಯಲ್ಲಿ 37 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಅಭಿಷೇಕ್​ 1297 ರನ್​ಗಳಿಸಿದ್ದಾರೆ. ವಿಶ್ವದ ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ 2024ರ ವಿಶ್ವಕಪ್​ ಬಳಿಕ ಇಷ್ಟು ರನ್​ಗಳಿಸಿಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ಗರ್ಭಿಣಿ ಬೆಕ್ಕಿನ ವಿಚಾರಕ್ಕೆ ಎಫ್​ಐಆರ್ ದಾಖಲು..!

Abhishekh Sharma (1)

ಅಭಿಷೇಕ್​ ಶರ್ಮಾ ಸ್ಪೋಟಕ ಬ್ಯಾಟಿಂಗ್​ ನೋಡಿರೋ ಫ್ಯಾನ್ಸ್​ ಹೆಸರನ್ನೇ ಬದಲಾಯಿಸಿಬಿಟ್ಟಿದ್ದಾರೆ. ಈಗ ಪಂಜಾಬ್​ ಪುತ್ತರ್​ ಅಭಿ ಸಿಕ್ಸ್​ ಶರ್ಮಾ ಎಂದೇ ಫೇಮಸ್​. ಡೆಬ್ಯೂ ಮಾಡಿದ ಬಳಿಕ ಆಡಿರೋ 37 ಇನ್ನಿಂಗ್ಸ್​ಗಳಲ್ಲೇ ಅಭಿಷೇಕ್​ 86 ಸಿಕ್ಸರ್​ ಚಚ್ಚಿದ್ದಾರೆ. ಒನ್ಸ್​ ಅಗೇನ್ 2024ರ ವಿಶ್ವಕಪ್​ ಬಳಿಕ​ ವಿಶ್ವದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಈ ದಾಖಲೆಯ ಸನಿಹವೂ ಸುಳಿದಿಲ್ಲ.

ಅಭಿಷೇಕ್​ ಶರ್ಮಾ ಅಬ್ಬರಕ್ಕೆ ದಾಖಲೆಗಳೆಲ್ಲಾ ಶೇಕ್​ ಆಗ್ತಿವೆ. ಹಾಫ್​ ಸೆಂಚುರಿ ಸಿಡಿಸೋ ವಿಚಾರದಲ್ಲೂ ಅಭಿಷೇಕ್​ ಶರ್ಮಾ ದಾಖಲೆಯನ್ನ ಧ್ವಂಸ ಮಾಡಿದ್ದಾರೆ. 25 ಅಥವಾ ಅದಕ್ಕೂ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಕೂಡ ಅಭಿ ಹೆಸರಲ್ಲಿದೆ. 9 ಬಾರಿ 25 ಎಸೆತಕ್ಕೂ ಕಡಿಮೆ ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ದಾರೆ. ಸೂರ್ಯಕುಮಾರ್​ ಹೆಸರಲ್ಲಿದ್ದ ಈ ದಾಖಲೆ ಅಭಿಯ ಅಬ್ಬರದ ಮುಂದೆ ಶೇಕ್ ಆಗಿದೆ. 

ಕಳೆದ 2 ವರ್ಷಗಳಲ್ಲಿ ಟಿ20 ಫಾರ್ಮೆಟ್​ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ಕೂಡ ಅಭಿಷೇಕ್ ಶರ್ಮಾ ಹೆಸರಲ್ಲಿದೆ. 2 ವರ್ಷಕ್ಕೂ ಕಡಿಮೆ ಅವಧಿಯಲ್ಲಿ 10 ಹಾಫ್​ ಸೆಂಚುರಿಗಳನ್ನ ಪಂಜಾಬ್​ ಪುತ್ತರ್​ ಬಾರಿಸಿ ಬಿಸಾಕಿದ್ದಾರೆ. ವಿಧ್ವಂಸಕ ಬ್ಯಾಟಿಂಗ್​ನಿಂದ ದಾಖಲೆಗಳನ್ನ ಪೀಸ್​ ಪೀಸ್​ ಮಾಡಿ ವಿಶ್ವಕಪ್ ಅಖಾಡಕ್ಕೆ ಅಭಿಷೇಕ್ ಶರ್ಮಾ ಎಂಟ್ರಿ ಕೊಟ್ತಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಜಲಕ್​ ತೋರಿಸಿರೋ ವಿಶ್ವ ಸಮರದಲ್ಲಿ ಮತ್ತಷ್ಟು ಜೋರಾಗಿ ಆರ್ಭಟಿಸೋದ್ರಲ್ಲಿ ಅನುಮಾನವೇ ಬೇಡ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಪ್ರಾಬ್ಲಂ, ಪ್ರಾಬ್ಲಂ.. ಈ 5 ಸಮಸ್ಯೆಗೆ ಉತ್ತರ ಸಿಕ್ಕರೆ ಕಪ್ ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

T20 world cup Team India
Advertisment