ಟೀಮ್ ಇಂಡಿಯಾದಲ್ಲಿ ಪ್ರಾಬ್ಲಂ, ಪ್ರಾಬ್ಲಂ.. ಈ 5 ಸಮಸ್ಯೆಗೆ ಉತ್ತರ ಸಿಕ್ಕರೆ ಕಪ್ ಪಕ್ಕಾ..!

ಇವತ್ತಿನಿಂದ T20 ವಿಶ್ವಕಪ್ ಶುರುವಾಗ್ತಿದೆ. ತವರಿನಲ್ಲಿ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹೊರಟಿರುವ ಟೀಮ್ ಇಂಡಿಯಾ ಮುಂದೆ ದೊಡ್ಡ ದೊಡ್ಡ ಸವಾಲುಗಳೇ ಇವೆ. ಈ ಐದು ಸಮಸ್ಯೆಗಳಿಗೆ ಉತ್ತರ ಕಂಡುಕೊಂಡ್ರೆ ಗೆಲುವು ಪಕ್ಕಾ!

author-image
Ganesh Kerekuli
gambhir (5)
Advertisment
  • ಸಂಜು ಸ್ಯಾಮ್ಸನ್ ಫಾರ್ಮ್ ಸಮಸ್ಯೆ..!
  • ಇಶಾನ್ ಕಿಶನ್ ಇನ್, ಔಟ್ ಯಾರು..?
  • ಕುಲ್ದೀಪ್, ವರುಣ್ ಇಬ್ಬರಿಗೂ ಸ್ಥಾನ ಸಿಗುತ್ತಾ ..?

ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಮ್ ಇಂಡಿಯಾಗೆ  ವಿಶ್ವಕಪ್​ನಲ್ಲಿ ಸಾಲು ಸಾಲು ಸವಾಲುಗಳು ಎದುರಾಗಿವೆ. ಕೋಚ್ ಗೌತಮ್ ಗಂಭೀರ್​​​​​​​ ಮತ್ತು ಟೀಮ್ ಮ್ಯಾನೇಜ್ಮೆಂಟ್​​​ ಎದುರಾಗಿರುವ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಬೇಕು. 

ಪ್ರಾಬ್ಲಂ ನಂ.1: ಸಂಜು ಸ್ಯಾಮ್ಸನ್ ಫಾರ್ಮ್ ಸಮಸ್ಯೆ

2025ರಲ್ಲಿ ಸಂಜು ಸ್ಯಾಮ್ಸನ್, T20 ಫಾರ್ಮೆಟ್​ನಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು, ಫ್ಲಾಪ್ ಶೊ ನೀಡಿದ್ದಾರೆ. ವಿಶ್ವಕಪ್​ಗೂ ಮುನ್ನ ಸಂಜು ಫಾರ್ಮ್, ಟೀಮ್ ಇಂಡಿಯಾವನ್ನ ಕಾಡೋದಂತೂ ನಿಜ. ಹಾಗಂತ ಸಂಜುರನ್ನ ಕಡೆಗಣಿಸೋಕೆ ಸಾಧ್ಯವೇ ಇಲ್ಲ.

ಇದನ್ನೂ ಓದಿ: ಬಿಗ್ ರಿಲೀಫ್! ರಷ್ಯಾ ತೈಲ ವಿವಾದದ ಶೇ. 25ರಷ್ಟು ಸುಂಕ ತೆರವು.. ಒಟ್ಟು ಶೇ. 50ರಿಂದ 18ಕ್ಕೆ ಅಮೆರಿಕನ್ ಸುಂಕ ಇಳಿಕೆ..!

India vs usa

ನ್ಯೂಜಿಲೆಂಡ್​​ T20 ಸರಣಿಯಲ್ಲಿ ಇಶಾನ್ ಕಿಶನ್, ಇಂಪ್ಯಾಕ್ಟ್​​ಫುಲ್ ಇನ್ನಿಂಗ್ಸ್ ಆಡಿದ್ರು. ಇಶಾನ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡಿದ್ರೆ ವರ್ಕ್​ಔಟ್ ಕೂಡ ಆಗುತ್ತೆ ಅನ್ನೋದು ಗೊತ್ತಾಗಿದೆ. ಒಂದು ವೇಳೆ ಇಶಾನ್ ಪ್ಯೂರ್ ಬ್ಯಾಟರ್ ಆಗಿ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡ್ರೆ ಯಾರು ಹೊರಗುಳಿಯುತ್ತಾರೆ..? ಇದಕ್ಕೆ ಟೀಮ್ ಮ್ಯಾನೇಜ್ಮೆಮಟ್ ಉತ್ತರ ಕಂಡುಕೊಳ್ಳಬೇಕು. ಅಲ್ಲದೇ ಅಭ್ಯಾಸ ಪಂದ್ಯದಲ್ಲಿ ಸಂಜು ಅವರನ್ನ ಬೆಂಚ್​​ನಲ್ಲಿ ಕೂರಿಸಲಾಗಿತ್ತು. ಹೀಗಾಗಿ ಇಶಾನ್ ಕಿಶನ್ ಅವರೇ ಇವತ್ತು ಬ್ಯಾಟಿಂಗ್ ಬರೋದು ಪಕ್ಕ ಎನ್ನಲಾಗ್ತಿದೆ. 

ಪ್ರಾಬ್ಲಂ ನಂ.2

ಶಸ್ತ್ರಚಿಕಿತ್ಸೆಯ ಬಳಿಕ ತಿಲಕ್ ವರ್ಮಾ ಫಿಟ್ ಌಂಡ್ ಫೈನ್ ಆಗಿದ್ದಾರೆ. ಈಗಾಗಲೇ ತಿಲಕ್ ವರ್ಮಾ ತಂಡ ಸೇರಿಕೊಂಡಿದ್ದಾರೆ. ತಂಡದಲ್ಲಿ ಹಲವಾರು ಪ್ರತಿಭಾವಂತ ಆಟಗಾರರಿದ್ದಾರೆ. ಆದ್ರೆ ಕೋಚ್ ಗಂಭೀರ್​ಗೆ ಆಟಗಾರರ ಆಯ್ಕೆ ಟಫ್ ಟಾಸ್ಕ್ ಆಗಲಿದೆ. ವಾಶಿಂಗ್ಟನ್ ಸುಂದರ್ ಡೀಸೆಂಟ್ ಆಲ್​ರೌಂಡರ್. T20 ಫಾರ್ಮೆಟ್​ಗೆ ವಾಶಿಯಂತಹ ಆಟಗಾರ ಬೇಕೇಬೇಕು. 

ಇದನ್ನೂ ಓದಿ:‘Time will answer’ ಸಿಎಂ ಕನಸಿನ ಬಗ್ಗೆ ಡಿಕೆ ಶಿವಕುಮಾರ್ ಏನಂದ್ರು..?

ಪ್ರಾಬ್ಲಂ ನಂ.3

ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಇಬ್ಬರೂ ಔಟ್ ಌಂಡ್ ಔಟ್ ವಿಕೆಟ್ ಟೇಕರ್ಸ್. ಬ್ಯಾಟಿಂಗ್​ನಲ್ಲಿ ಇಬ್ಬರ ಸ್ಟ್ರೈಕ್​ರೇಟ್ ತೀರಾ ಕಡಿಮೆ. ಹೀಗಿರುವಾಗ ಟೀಮ್ ಮ್ಯಾನೇಜ್ಮೆಂಟ್ ಆಲ್​ರೌಂಡರ್​ಗಳ ಮೊರೆ ಹೋಗೊ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಇಬ್ಬರೂ ಜೊತೆಯಲ್ಲಿ ಆಡ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ. 

ಪ್ರಾಬ್ಲಂ ನಂ.4

ಜಸ್ಪ್ರೀತ್ ಬೂಮ್ರಾ ವಿಶ್ವಕ್ರಿಕೆಟ್​​​​ನ ದ ಬೆಸ್ಟ್ ಬೌಲರ್. ಇದನ್ನ ಯಾರೂ ತಳ್ಳಿಹಾಕುವಂತಿಲ್ಲ. ಆದ್ರೆ ಟೀಮ್ ಮ್ಯಾನೇಜ್ಮೆಂಟ್, ಬೂಮ್ರಾರನ್ನ ವಿಶ್ವಕಪ್​ನಲ್ಲಿ ಹೇಗೆ ಮ್ಯಾನೇಜ್ ಮಾಡುತ್ತೆ? ಎಲ್ಲಾ ಪಂದ್ಯಗಳನ್ನ ಆಡಿಸುತ್ತಾ ಇಲ್ಲಾ ಬೂಮ್ರಾಗೆ ಸ್ಪೆಷಲ್ ವರ್ಕ್​ಲೋಡ್ ಮ್ಯಾನೇಜ್ಮೆಂಟ್ ಪ್ಲಾನ್ ಏನಾದ್ರೂ ಮಾಡಿಕೊಂಡಿದ್ಯಾ ಪ್ರಶ್ನೆಯಾಗಿಯೇ ಉಳಿದಿದೆ.  ಮತ್ತೊಂದೆಡೆ ಎಡಗೈ ವೇಗಿ ಆರ್ಷ್​ದೀಪ್ ಸಿಂಗ್, ಟಿ-20 ಕ್ರಿಕೆಟ್​​ನ ಸಕ್ಸಸ್​​ಫುಲ್ ಬೌಲರ್. ಆರ್ಷ್​ದೀಪ್​​ಗೆ ಮತ್ತಷ್ಟು ಗೇಮ್ ಟೈಮ್ ಬೇಕೇ ಬೇಕು. ಹರ್ಷಿತ್ ರಾಣಾ, ಹಲವು ಬಾರಿ ಆರ್ಷ್​ದೀಪ್ ಸ್ಲಾಟ್ BLOCK ಮಾಡಿದ್ದಾರೆ. ಎಡಗೈ ವೇಗಿಯನ್ನ ಯಾವ ರೀತಿ ಬಳಸಿಕೊಳ್ಳಲಾಗುತ್ತೆ ಅನ್ನೋದಕ್ಕೆ ಉತ್ತರ ಕೊಡಲೇಬೇಕು.

ಪ್ರಾಬ್ಲಂ ನಂ.5

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಹಲವಯ  ಕ್ಯಾಚ್​​ಗಳನ್ನ ಡ್ರಾಪ್ ಮಾಡಿದೆ. ಏಷ್ಯಾಕಪ್​​ನಲ್ಲೂ ಟೀಮ್ ಇಂಡಿಯಾ ಸರಿಸುಮಾರು 12 ಕ್ಯಾಚ್​ಗಳನ್ನ ಕೈಚೆಲ್ಲಿತ್ತು. ಅದ್ರಲ್ಲೂ ಬಾಂಗ್ಲಾ ವಿರುದ್ಧದ ಒಂದೇ ಪಂದ್ಯದಲ್ಲಿ 5 ಕ್ಯಾಚ್​ಗಳನ್ನ, ಮೆನ್ ಇನ್ ಬ್ಲೂ ಪಡೆ ಬಿಟ್ಟಿತ್ತು. ಆದ್ರೀಗ ವಿಶ್ವಕಪ್​ಗೂ ಮುನ್ನ ಕ್ಯಾಚಿಂಗ್ ಪ್ರಾಬ್ಲಂ SOLVE ಮಾಡಿಕೊಳ್ಳುತ್ತಾ..? ಒಟ್ನಲ್ಲಿ.. ಸಮಸ್ಯೆಗಳು ಟೀಮ್ ಇಂಡಿಯಾದಲ್ಲಿ ಮಾತ್ರ ಅಲ್ಲ. ಎಲ್ಲಾ ತಂಡಗಳಲ್ಲೂ ಇವೆ.! ಆದ್ರೆ ಸಮಸ್ಯೆಗಳನ್ನ OVER COME ಮಾಡಿದ್ರೆ ಮಾತ್ರ ಅಂದುಕೊಂಡಿದ್ದನ್ನ ಸಾಧಿಸೋಕೆ ಸಾಧ್ಯ.

ಇದನ್ನೂ ಓದಿ: ಅಭ್ಯಾಸ ಪಂದ್ಯದಲ್ಲಿ ಪಾಸ್​.. ವಿಶ್ವಕಪ್​​ಗಾಗಿ ನಡೆದ ಪ್ರಯೋಗಗಳು ಏನೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Cricket news in Kannada Kannada News T20 world cup Team India
Advertisment