/newsfirstlive-kannada/media/media_files/2025/09/30/abhishek_shamra_insta-2025-09-30-20-16-24.jpg)
ಟೀಮ್ ಇಂಡಿಯಾದಲ್ಲಿ ದಿನೇ ದಿನೇ ಹೆಚ್ಚು ಸೌಂಡ್​ ಮಾಡ್ತಿರುವ ಆಟಗಾರ ಅಭಿಷೇಕ್ ಶರ್ಮಾ. ಆನ್​ಫಿಲ್ಡ್​ನಲ್ಲಿ ರನ್ ಶಿಖರ ಕಟ್ಟುತ್ತಿರುವ ಪಂಜಾಬ್ ಪುತ್ತರ್, ಆಫ್ ದಿ ಫೀಲ್ಡ್​ನಲ್ಲೂ ಅಭಿಮಾನಿಗಳ ಪಾಲಿಗೆ ನೆಚ್ಚಿನ ಹೀರೋ ಆಗಿದ್ದಾರೆ. ದಿನೇ ದಿನೇ ರನ್ ಏರಿಕೆ ಆಯಾದಂತೆಯೇ, ಫಾಲೋವರ್ಸ್ ಸಂಖ್ಯೆ ಕೂಡ ಗಗನಕ್ಕೇರುತ್ತಿದೆ.
ಅಭಿಷೇಕ್ ಶರ್ಮಾ.. ಟೀಮ್ ಇಂಡಿಯಾದ ನಯಾ ಸೂಪರ್ ಸ್ಟಾರ್​. ಕಳೆದ 14 ತಿಂಗಳಿಂದ ಟೀಮ್ ಇಂಡಿಯಾ ಪರ ಧೂಳ್ ಎಬ್ಬಿಸ್ತಿರುವ ದಿ ಗೇಮ್ ಚೇಂಜರ್ ಪ್ಲೇಯರ್. ವಿಸ್ಪೋಟಕ ಆಟದಿಂದಲೇ ಕಮಾಲ್ ಮಾಡ್ತಿರುವ ಅಭಿಷೇಕ್, ಟೀಮ್ ಇಂಡಿಯಾದ ನಯಾ ಮ್ಯಾಚ್ ವಿನ್ನರ್ ಪ್ಲೇಯರ್. ಆದ್ರೆ, ಈತ ಕೇವಲ ಸೂಪರ್ ಸ್ಟಾರ್ ಮಾತ್ರವೇ ಅಲ್ಲ. ಅಭಿಮಾನಿಗಳ ಪಾಲಿನ ನಯಾ ಕ್ರೇಜಿ ಸ್ಟಾರ್..
ಇನ್​ಸ್ಟಾದಲ್ಲಿ ಪಂಜಾಬ್ ಪುತ್ತರ್ ಅಭಿಷೇಕ್ ರೆಕಾರ್ಡ್..​!
ಏಷ್ಯಾಕಪ್​​ನಲ್ಲಿ ಅನ್​ಸ್ಟಾಪಬಲ್​ ಪರ್ಫಾಮೆನ್ಸ್​ ನೀಡಿದ ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ ಆಗಿ ಮೆರೆದಾಡಿದೆ. ಇದಕ್ಕೆ ಮೇನ್ ರೀಸನ್ ಅಭಿಷೇಕ್ ಶರ್ಮಾರ ಪರ್ಫಾಮೆನ್ಸ್​.
ಏಷ್ಯಾಕಪ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ ಅಭಿಷೇಕ್, ಎದುರಾಳಿ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದ್ದರು. ಘಟಾನುಘಟಿ ಬೌಲರ್​ಗಳ ನಿದ್ದೆಗೆಡೆಸಿದ ಅಭಿಷೇಕ್ ಶರ್ಮಾ, ಏಷ್ಯಾಕಪ್​​ನಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಗೂ ಭಾಜನರಾದರು. ಆದ್ರೆ, ಅಭಿಷೇಕ್ ಶರ್ಮಾ ಕೇವಲ ಆನ್​​ಫೀಲ್ಡ್​ನಲ್ಲೇ ಅಲ್ಲ. ಆಫ್ ದಿ ಫೀಲ್ಡ್​ನಲ್ಲೂ ಕಮಾಲ್ ಮಾಡಿದ್ಧಾರೆ. ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿರುವ ಪಂಜಾಬ್ ಪುತ್ತರ್​, ಇನ್​​ಸ್ಟಾದಲ್ಲಿ ದಾಖಲೆಯನ್ನ ಬರೆದಿದ್ದಾರೆ.
14 ದಿನದಲ್ಲಿ ಹೆಚ್ಚಾದ 2 ಮಿಲಿಯನ್ ಪಾಲೋವರ್ಸ್..!
ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್​.. ಕ್ರೇಜಿ ಸ್ಟಾರ್​.. ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಎಂದು ಗುಣಗಾನ ಮಾಡೋಕೆ ರೀಸನ್.. ಇನ್​ಸ್ಟಾದಲ್ಲಿ ಅಭಿಷೇಕ್ ಶರ್ಮಾಗೆ ಹೆಚ್ಚಾದ ಫಾಲೋವರ್​ಗಳ ಸಂಖ್ಯೆ.
ಸೆಪ್ಟೆಂಬರ್​ 14ರಂದು 4.3 ಮಿಲಿಯನ್ ಇನ್​ಸ್ಟಾ ಫಾಲೋವರ್ಸ್​ ಹೊಂದಿದ್ದ ಅಭಿಷೇಕ್ ಶರ್ಮಾ, ಇದೀಗ 5.7 ಮಿಲಿಯನ್ ಫಾಲೋವರ್​ಗಳನ್ನ ಹೊಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಜಸ್ಟ್​ 14 ದಿನಗಳ ಅಂತರದಲ್ಲಿ ಬರೋಬ್ಬರಿ 2 ಮಿಲಿಯನ್​​​ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಇದು ಅಭಿಷೇಕ್ ಶರ್ಮಾರ ಕ್ರೇಜ್​​​, ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಸೂಚಕವೇ ಆಗಿದೆ. ಇದಕ್ಕೆ ಮೇನ್ ರೀಸನ್ ಪಾಕ್ ಎದುರಿನ ವಿಸ್ಪೋಟಕ ಬ್ಯಾಟಿಂಗ್​​ ಅನ್ನೋದ್ರಲ್ಲಿ ಡೌಟೇ ಇಲ್ಲ.
1 ವರ್ಷದಲ್ಲಿ 4 ಮಿಲಿಯನ್ ಫಾಲೋವರ್ಸ್ ಹೆಚ್ಚಳ..!
2024, ಜುಲೈ 6.. ಟೀಮ್ ಇಂಡಿಯಾ ಟಿ20 ತಂಡಕ್ಕೆ ಡೆಬ್ಯೂ ಮಾಡಿದ ದಿನಾಂಕ. ಐಪಿಎಲ್​ನ ಪ್ರದರ್ಶನದಿಂದ ಡೆಬ್ಯು ಮಾಡಿದ ಅಭಿಷೇಕ್, 1 ವರ್ಷದ ಹಿಂದೆ ಇನ್​ಸ್ಟಾದಲ್ಲಿ ಜಸ್ಟ್​ 1.2 ಮಿಲಿಯನ್ ಫಾಲೋವರ್​ಗಳನ್ನಷ್ಟೇ ಹೊಂದಿದ್ದರು. ಆದ್ರೆ, ಕಳೆದ ಒಂದು ವರ್ಷದಿಂದ ಅಭಿಷೇಕ್ ನೀಡ್ತಿರುವ ಪರ್ಫಾಮೆನ್ಸ್​, ಆನ್​ಫೀಲ್ಡ್​ನ ಮ್ಯಾಚ್ ವಿನ್ನಿಂಗ್ ಪಾರ್ಫಮೆನ್ಸ್​ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಅದು ಎಷ್ಟರ ಮಟ್ಟಿಗೆ ಆಂದ್ರೆ, 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಅಭಿಷೇಕ್, 1 ವರ್ಷದಲ್ಲಿ 4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಜೈಸ್ವಾಲ್​ರನ್ನೇ ಹಿಂದಿಕ್ಕಿದ್ದಾರೆ.
ಅಭಿಷೇಕ್ ಶರ್ಮಾಗಿಂತ 1 ವರ್ಷ ಮುನ್ನವೇ ಜೈಸ್ವಾಕ್, ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ್ದರು. 2023ರ ಜುಲೈನಲ್ಲಿ ಡೆಬ್ಯು ಮಾಡಿದ್ದ ಜೈಸ್ವಾಲ್, ಈಗ ಇನ್​ಸ್ಟಾದಲ್ಲಿ 4.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದ್ರೆ, ಅಭಿಷೇಕ್ ಶರ್ಮಾ 5.7 ಮಿಲಿಯನ್ ಫಾಲೋವರ್ಸ್​ನೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇದು ಅಭಿಷೇಕ್ ಶರ್ಮಾರ ಜನಪ್ರಿಯತೆ ಹೆಚ್ಚಳದ ಮುನ್ಸೂಚನೆಯೇ ಆಗಿದೆ ಅನ್ನೋದನ್ನ ತಳ್ಳಿಹಾಕುವಂತಿಲ್ಲ. ಇದೇ ಕನ್ಸಿಸ್ಟೆನ್ಸಿ, ಪಾಪ್ಯುಲಾರಿಟಿ ಮುಂದುವರಿದ್ರೆ, ಕಾರ್ಪೋರೇಟ್​​ ಜಗತ್ತನ್ನೇ ಆಳೋದ್ರಲ್ಲಿ ಡೌಟಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ