/newsfirstlive-kannada/media/media_files/2025/09/28/abhishek_sharma_gill-1-2025-09-28-17-11-51.jpg)
ಮತ್ತೊಂದು ಇಂಡೋ-ಪಾಕ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ದುಬೈ ಅಂಗಳದಲ್ಲಿ ನಡೆಯೋ ಫೈನಲ್​ ಕದನದಲ್ಲಿ ಇಂಡಿಯನ್​​ ಓಪನರ್ಸ್​ VS ಪಾಕಿಸ್ತಾನ ಪೇಸರ್ಸ್​​ ಫೈಟ್​ ನಡೆಯಲಿದೆ. ಶುಭ್​ಮನ್​​ ಗಿಲ್​- ಅಭಿಷೇಕ್​ ಶರ್ಮಾ ಪಾಕ್​ ದಾಳಿಯಲ್ಲಿ ಚಿಂದಿ ಉಡಾಯಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಹ್ಯಾರೀಸ್​​ ರೌಫ್​, ಶಾಹೀನ್​ ಅಫ್ರಿದಿ ಕಣಕ್ಕಿಳಿಯೋಕೆ ಮುನ್ನವೇ ಭಯಭೀತರಾಗಿದ್ದಾರೆ.
ಇಂಡೋ-ಪಾಕ್​ ನಡುವೆ ಮತ್ತೊಂದು ಕಾಳಗಕ್ಕೆ ಕೆಲವೇ ಗಂಟೆಗಳು ಬಾಕಿ. ದುಬೈ ರಣಾಂಗಣದಲ್ಲಿ ನಡೆಯೋ ಪ್ರತಿಷ್ಟೆಯ ಸಮರದಲ್ಲಿ ಬದ್ಧವೈರಿಗಳು ಮುಖಾಮುಖಿಯಾಗಲಿದೆ. ಏಷ್ಯಾಕಪ್​ ಸಮರದ ಈ ಹಿಂದಿನ 2 ಮುಖಾಮುಖಿಗಳು ಒನ್​ ಸೈಡೆಡ್​ ಆಗಿ ಅಂತ್ಯ ಕಂಡ್ರೂ, ಇಂದಿನ ಪಂದ್ಯ ಕ್ರಿಕೆಟ್​ ಜಗತ್ತಿನಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿದೆ. ಅದ್ರಲ್ಲೂ ಈ ನಾಲ್ವರು ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಅಭಿಷೇಕ್​ ಶರ್ಮಾ ಮೇಲಿದೆ ಎಲ್ಲರ ಕಣ್ಣು.!
ಇವತ್ತಿನ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​ ಪಂಜಾಬ್​ನ ಪುತ್ರರು. ಟೀಮ್​ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿತಾ ಇರೋ ಐಸ್​ & ಫೈರ್​ ಜೋಡಿ ಏಷ್ಯಾಕಪ್​ ಅಖಾಡದಲ್ಲಿ ದೂಳೆಬ್ಬಿಸಿದೆ. ಪವರ್​​ ಪ್ಲೇನಲ್ಲೇ ಪವರ್​​ ಫುಲ್​ ಆಟವಾಡ್ತಿರೋ ಅಭಿಷೇಕ್​​ ಶರ್ಮಾ, ಶುಭ್​ಮನ್​ ಗಿಲ್​​ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಅದೇ ಸಮಯದಲ್ಲಿ ಫ್ಯಾನ್ಸ್​ಗೆ ಸಖತ್​ ಎಂಟರ್​​ಟೈನ್​ಮೆಂಟ್​ ನೀಡ್ತಿದ್ದಾರೆ.
ಪಾಕಿಸ್ತಾನ​ ಬೌಲರ್​ಗಳಿಗೆ ಇವರಿಬ್ಬರದ್ದೇ ಭಯ.!
ಸಾಲಿಡ್​ ಟಚ್​​ನಲ್ಲಿರೋ ಶುಭ್​ಮನ್​ ಗಿಲ್​, ಅಭಿಷೇಕ್ ಶರ್ಮಾ ರನ್​ ಹೊಳೆಯನ್ನೇ ಹರಿಸ್ತಿದ್ದಾರೆ. ಇಂದೂ ಕೂಡ ಮೊದಲ ಎಸೆತದಿಂದಲೇ ಬೌಲರ್​​ಗಳನ್ನ ಬೆಂಡೆತ್ತುತ್ತಿರೋ ಇವರಿಬ್ಬರದ್ದೇ ಭಯ ​ಪಾಕ್​ ಪಡೆಯನ್ನ ಆವರಿಸಿಕೊಂಡಿದೆ. ಶುಭ್​​ಮನ್ ಗಿಲ್​ ಕೂಲ್​ & ಕಾಮ್​ ಆಟದಿಂದ ಕಂಗೆಡಿಸಿದ್ರೆ, ಅಭಿಷೇಕ್​ ಶರ್ಮಾ ಅಬ್ಬರ ಬೆಚ್ಚಿ ಬೀಳಿಸಿದೆ. ಇವರಿಬ್ಬರ ಆಟಕ್ಕೆ ಬ್ರೇಕ್​ ಹಾಕಿದ್ರೆ ಗೆಲುವು ನಮ್ಮದೆ ಅನ್ನೋದು ಪಾಕಿಸ್ತಾನ ಪಡೆಯ ಲೆಕ್ಕಾಚಾರವಾಗಿದೆ. ಔಟ್​ ಮಾಡೋಕೆ ತಂತ್ರ-ರಣತಂತ್ರದ ಮೊರೆ ಹೋಗಿದೆ.
ಶಾಹೀನ್​ ಅಫ್ರಿದಿ, ಹ್ಯಾರಿಸ್​ ರೌಫ್​​ ಕಾದಿದೆ ಮಾರಿಹಬ್ಬ.!
ಅಭಿಷೇಕ್​ ಶರ್ಮಾ ಹಾಗೂ ಶುಭ್​ಮನ್​ ಗಿಲ್​ನ ಔಟ್​ ಮಾಡೋಕೆ ಪಾಕಿಸ್ತಾನ ತಂಡ ನೆಚ್ಚಿಕೊಂಡಿರೋದು ವೇಗಿಗಳಾದ ಶಾಹೀನ್​ ಅಫ್ರಿದಿ ಹಾಗೂ ಹ್ಯಾರಿಸ್​ ರೌಫ್​ನ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರೋದು ಸದ್ಯ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಲಂಕಾ ಎದುರು ಅಫ್ರಿದಿ ಹಾಗೂ ರೌಫ್​ ತಲಾ 3 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಆದ್ರೆ, ಇದೇ ಫಾರ್ಮ್ ಟೀಮ್​ ಇಂಡಿಯಾ ಎದುರೂ ಮುಂದುವರೆಸ್ತಾರಾ ಅಂದ್ರೆ ಕಷ್ಟ.. ಕಷ್ಟ.! ಯಾಕಂದ್ರೆ, ಕೆಣಕಿ ತಪ್ಪು ಮಾಡ್ಬಿಟ್ಟಿದ್ದಾರೆ.
ಅಭಿಷೇಕ್​, ಶುಭ್​ಮನ್​ ಹಾಗೂ ರೌಫ್​, ಅಫ್ರಿದಿ ನಡುವಿನ ಬ್ಯಾಟಲ್​ ಇವತ್ತು ಕ್ರಿಕೆಟ್​ ಲೋಕವನ್ನ ತುದಿಗಾಲಲ್ಲಿ ನಿಲ್ಲಿಸಿರೋದು. ಸೂಪರ್​-4 ಕದನದಲ್ಲಿ ರೌಫ್​ ಹಾಗೂ ಅಫ್ರಿದಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ರು. ಮಾತಿಗೆ ಮಾತು ಬೆಳೆದು ಜಗಳದ ಸ್ವರೂಪಕ್ಕೂ ಘಟನೆ ತಿರುಗಿತ್ತು. ಆ ಬಳಿಕ ಕಾಲು ಕೆರೆದುಕೊಂಡು ಜಗಳಕ್ಕೆ ಬಂದ ಇಬ್ಬರನ್ನೂ ಅಭಿಷೇಕ್​, ಗಿಲ್​ ಬೆಂಡೆತ್ತಿ ಪಾಠ ಕಲಿಸಿದ್ರು. ಆ ಟಾಕ್​ ವಾರ್​ ಇಂದಿನ ಪಂದ್ಯದಲ್ಲೂ ಮುಂದುವರೆಯಲಿದೆ. ಸೇಡು ತೀರಿಸಿಕೊಳ್ಳೋಕೆ ರೌಫ್, ಅಫ್ರಿದಿ ಎದುರು ನೋಡ್ತಿದ್ರೆ, ಮತ್ತೊಮ್ಮೆ ಚಿಂದಿ ಉಡಾಯಿಸೋಕೆ ಗಿಲ್​, ಶುಭ್​ಮನ್​ ಕಾಯ್ತಿದ್ದಾರೆ.
ಇದನ್ನೂ ಓದಿ: BIGG BOSS 12; ಸೋಶಿಯಲ್ ಮೀಡಿಯಾ ಸ್ಟಾರ್​ ದೊಡ್ಮನೆಗೆ ಎಂಟ್ರಿ.. ಯಾರು ಈಕೆ?
ಅಫ್ರಿದಿಗೆ ಅಭಿಷೇಕ್​ ಭಯ.. ಗಿಲ್​ ನೋಡಿ ರೌಫ್​​ ಢರ್​​ಗಯಾ.!
ಈ ಎಡಗೈ ವೇಗಿ ಶಾಹೀನ್​ ಅಫ್ರಿದಿಗೆ ಅಭಿಷೇಕ್​ ಶರ್ಮಾ ಭಯ ಕಾಡ್ತಿದೆ. ಮೊದಲ ಎಸೆತದಲ್ಲೇ ಬೌಂಡರಿ ಅಥವಾ ಸಿಕ್ಸರ್ ಸಿಡಿಸಿ ಅಫ್ರಿದಿನ ಅಭಿಷೇಕ್​ ವೆಲ್​ಕಮ್​ ಮಾಡ್ತಿದ್ದಾರೆ. ಎದುರಿಸಿದ 14 ಎಸೆತಗಳಲ್ಲಿ 221ರ ಸ್ಟ್ರೈಕ್​ರೇಟ್​ನಲ್ಲಿ 31 ರನ್​ ಚಚ್ಚಿದ್ದಾರೆ. ಇನ್ನು, ಶುಭ್​ಮನ್​ ಗಿಲ್​, ಹ್ಯಾರೀಸ್​ ರೌಫ್​ಗೆ ಕಾಟ ಕೊಟ್ಟಿದ್ದಾರೆ. ರೌಫ್​ ಎದುರು 175ರ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ್ದಾರೆ.
ಇಂದಿನ ಫೈನಲ್​ ಫೈಟ್​ನಲ್ಲಿ ಟೀಮ್​ ಇಂಡಿಯಾ ಡೇರ್​ಡೆವಿಲ್​ ಆರಂಭಿಕರು VS ಪಾಕಿಸ್ತಾನ ಪೇಸರ್ಸ್​ ನಡುವಿನ ಬ್ಯಾಟಲ್​ ಕ್ರಿಕೆಟ್​ ಜಗತ್ತಿನ ಕುತೂಹಲನ್ನ ಹೆಚ್ಚಿಸಿದ್ದಾರೆ. ದುಬೈ ದಂಗಲ್​ನಲ್ಲಿ ಯಾರು ಮೇಲುಗೈ ಸಾಧಿಸ್ತಾರೆ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ