Advertisment

ಓಪನಿಂಗ್​​ನಲ್ಲೇ ಅಭಿಷೇಕ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್​.. ದಡಂ ದಶಗುಣಂ ಆರಂಭಿಸಿದ್ದು ಯಾವಾಗ?

ಅಭಿಷೇಕ್ ಶರ್ಮಾ, ಟಿ20 ಕ್ರಿಕೆಟ್​​ನ ನಂಬರ್​.1 ಬ್ಯಾಟ್ಸ್​ಮನ್ ಮಾತ್ರವಲ್ಲ, ಟಿ20 ಕ್ರಿಕೆಟ್​ನ ಹೊಸ ಜಮಾನದ ಬೆಸ್ಟ್​ ಬ್ಯಾಟರ್ ಕೂಡ ಹೌದು​. ಸದ್ಯ ಏಷ್ಯಾಕಪ್​ನಲ್ಲಿ ಘರ್ಜಿಸ್ತಿರುವ ಈ ಪಂಜಾಬ್ ಪುತ್ತರ್, ಸುಲಭಕ್ಕೆ ಟಿ20 ಕ್ರಿಕೆಟ್​​ನ ನಂ.1 ಬ್ಯಾಟರ್ ಆಗಿಲ್ಲ.

author-image
Bhimappa
ABHISHEK_SHARMA (6)
Advertisment

ಅಭಿಷೇಕ್ ಶರ್ಮಾ.. ಟಿ20 ಕ್ರಿಕೆಟ್​ನ ಮಾಡ್ರನ್​ ಡೇ ಮಾಂತ್ರಿಕ. ಆಕ್ರಮಣಕಾರಿ ಆಟವಾಡುವ ಅಭಿಷೇಕ್ ಶರ್ಮಾ ನೆವರ್ ಗಿವ್ ಅಪ್ ಅಟಿಟ್ಯೂಡ್​​ನಿಂದಲೇ ಕ್ರಿಕೆಟ್​ ಲೋಕದ ಗಮನಸೆಳೆದಿದ್ದಾರೆ. ಈತ ಆಡಿರೋದು ಜಸ್ಟ್​ 21 ಮ್ಯಾಚ್, ವಯಸ್ಸು ಕೇವಲ 25. ಆದ್ರೆ, ವಿಶ್ವ ಕ್ರಿಕೆಟ್​ನಲ್ಲಿ ಮಾಡಿರೋ ಇಂಪ್ಯಾಕ್ಟ್​ ಮಾತ್ರ ಸಿಕ್ಕಾಪಟ್ಟೆ ದೊಡ್ಡದು. 

Advertisment

ಅಭಿಷೇಕ್ ಶರ್ಮಾ.. ಫಿಯರ್​ ಲೆಸ್ ಕ್ರಿಕೆಟರ್. ದಡಂ ದಶಗುಣಂ.. ಬಾಲ್ ಇರೋದು ದಂಡಿಸೋಕೆ ಅನ್ನೋದು ಈತನ ಮೂಲ ಮಂತ್ರ. ಎದುರಿಸೋ ಮೊದಲ ಎಸೆತದಿಂದ ಕೊನೆಯ ಎಸೆತವರೆಗೆ ಬೌಂಡರಿ, ಸಿಕ್ಸರ್​ಗಳ ಬೋರ್ಗೆರತ ಸೃಷ್ಟಿಸುವ ಅಭಿಷೇಕ್, ಆನ್​ಫೀಲ್ಡ್​ನಲ್ಲಿ ಮೈದಾನದಲ್ಲಿ ರನ್ ಅಭಿಷೇಕ ಮಾಡ್ತಾರೆ. 

ABHISHEK_SHARMA_50

ಕ್ರೀಸ್​ನಲ್ಲಿದ್ದಷ್ಟು ಹೊತ್ತು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಅಭಿಷೇಕ್, ಟಿ20 ಕ್ರಿಕೆಟ್​​ನ ನಂಬರ್​.1 ಬ್ಯಾಟ್ಸ್​ಮನ್ ಮಾತ್ರವಲ್ಲ, ಟಿ20 ಕ್ರಿಕೆಟ್​ನ ಹೊಸ ಜಮಾನದ ಬೆಸ್ಟ್​ ಬ್ಯಾಟರ್ ಕೂಡ ಹೌದು​. ಸದ್ಯ ಏಷ್ಯಾಕಪ್​ನಲ್ಲಿ ಘರ್ಜಿಸ್ತಿರುವ ಈ ಪಂಜಾಬ್ ಪುತ್ತರ್, ಸುಲಭಕ್ಕೆ ಟಿ20 ಕ್ರಿಕೆಟ್​​ನ ನಂ.1 ಬ್ಯಾಟರ್ ಆಗಿಲ್ಲ. ಟಿ20 ಕ್ರಿಕೆಟರ್​ನ ಡೇಂಜರಸ್ ಬ್ಯಾಟರ್ ಅಂತ ಕರೀಸಿಕೊಂಡಿಲ್ಲ. 

ಏಷ್ಯಾಕಪ್​​ನಲ್ಲಿ ಬೌಂಡರಿ, ಸಿಕ್ಸರ್​ನೊಂದಿಗೆ ಇನ್ನಿಂಗ್ಸ್ ಓಪನ್​​!

ಏಷ್ಯಾಕಪ್​ನಲ್ಲಿ ಅಭಿಷೇಕ್ ಶರ್ಮಾ, ರನ್ ಸುನಾಮಿ ಸೃಷ್ಟಿಸ್ತಿದ್ದಾರೆ. ಪ್ರತಿ ಮ್ಯಾಚ್ ರನ್ ಕೊಳ್ಳೆ ಹೊಡೆಯುತ್ತಾ, ಟೀಮ್ ಇಂಡಿಯಾ ಗೆಲುವಲ್ಲಿ ಮಹತ್ವದ ಪಾತ್ರ ವಹಿಸ್ತಿದ್ದಾರೆ. ಆದ್ರೆ, ಪ್ರತಿ ಮ್ಯಾಚ್​ನಲ್ಲಿ ರನ್ ಹೊಳೆ ಹರಿಸ್ತಿರುವ ಅಭಿಷೇಕ್ ಶರ್ಮಾ, ಪ್ರತಿ ಮ್ಯಾಚ್​ನಲ್ಲೂ ಇನ್ನಿಂಗ್ಸ್​ ಓಪನ್ ಮಾಡ್ತಿರುವುದು ಬೌಂಡರಿ ಅಥವಾ ಸಿಕ್ಸರ್​ನಿಂದ.

Advertisment

ಏಷ್ಯಾಕಪ್​​ನ ಯುಎಇ ಎದುರಿನ ಮೊದಲ ಪಂದ್ಯದಲ್ಲಿ ಸಿಕ್ಸರ್​​ ಹಾಗೂ ಬೌಂಡರಿಯಿಂದ ಅಭಿಷೇಕ್ ಶರ್ಮಾ ಅಕೌಂಟ್​ ಓಪನ್​ ಮಾಡಿದ್ರು. ಪಾಕ್ ಎದುರಿನ 2ನೇ ಪಂದ್ಯದಲ್ಲೂ ತಾನೆದುರಿಸಿದ ಮೊದಲ ಎರಡು ಎಸೆತಗಳಲ್ಲಿ ಬಾರಿಸಿದ್ದು ಬೌಂಡರಿ ಹಾಗೂ ಸಿಕ್ಸರ್​. ಮೊದಲ ಎರಡು ಪಂದ್ಯಗಳೇ ಅಲ್ಲ. ಓಮನ್ ಎದುರಿನ ಪಂದ್ಯದಲ್ಲೂ ಅಕೌಂಟ್​ ಓಪನ್ ಮಾಡಿದ್ದು ಬೌಂಡರಿ ಹಾಗೂ ಸಿಕ್ಸರ್​​ನಿಂದಲೇ. ಅದಷ್ಟೇ ಯಾಕೆ, ಪಾಕ್ ಎದುರಿನ ಸೂಪರ್-4 ಮ್ಯಾಚ್​ನಲ್ಲೂ ಮೊದಲ ಎಸೆತದಲ್ಲೇ ಸಿಡಿಸಿದ್ದು ಸಿಕ್ಸರ್​. 

ಫಸ್ಟ್​ ಬಾಲ್ ಬೌಂಡರಿ, ಸಿಕ್ಸರ್​ ಸಿಡಿಸೋದೆ ಅಭಿಷೇಕ್​ ಖಯಾಲಿ.!

ಏಷ್ಯಾಕಪ್​​ನಲ್ಲಿ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಅಥವಾ ಸಿಕ್ಸರ್ ಸಿಡಿಸ್ತಿದ್ದಾರೆ. ಇದು ಹೊಸದೇನು ಅಲ್ಲ, ಯಾಕಂದ್ರೆ, ಅಭಿಷೇಕ್ ಶರ್ಮಾರ ಐಪಿಎಲ್ ಜರ್ನಿ ಶುರುವಾಗಿದ್ದೇ ಬೌಂಡರಿಯೊಂದಿಗೆ. 2018ರಲ್ಲಿ ಆರ್​ಸಿಬಿ ಎದುರು ಡೆಬ್ಯು ಮಾಡಿದ್ದ ಅಭಿಷೇಕ್, ಡೆಲ್ಲಿ ಡೇರ್​ ಡೆವಿಲ್ಸ್​ ಪರ ಆಡಿದ್ದರು. ಆ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್, ಬೌಂಡರಿ ಬಾರಿಸಿ ಸಿರಾಜ್​​ಗೆ ಸ್ವಾಗತ ನೀಡಿದ್ದರು. ಇದೇ ಪಂದ್ಯದಲ್ಲಿ ಅಬ್ಬರಿಸಿದ್ದ ಅಭಿಷೇಕ್, 19 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಒಳಗೊಂಡ 46 ರನ್ ಚಚ್ಚಿದ್ದರು.

ಇದನ್ನೂ ಓದಿ: KL ರಾಹುಲ್​ಗೆ ಮಹತ್ವದ ಜವಾಬ್ದಾರಿ.. ಟೀಮ್ ಇಂಡಿಯಾದಲ್ಲಿ ಆ ಸ್ಥಾನ ಕನ್ನಡಿಗನಿಗೆ ಸಿಗುತ್ತಾ..?

Advertisment

ABHISHEK_SHARMA (5)

ಸಿಕ್ಸರ್​ನೊಂದಿಗೆ ಟೀಮ್​ ಇಂಡಿಯಾ ಪರ ಅಕೌಂಟ್​ ಓಪನ್..!

ಅಭಿಷೇಕ್ ಶರ್ಮಾ ಟೀಮ್​ ಇಂಡಿಯಾ ಪರ ಅಕೌಂಟ್​ ಓಪನ್​ ಮಾಡಿದ್ದು ಕೂಡ ಸಿಕ್ಸರ್​ನಿಂದಲೇ. ಡೆಬ್ಯು ಮ್ಯಾಚ್​ನಲ್ಲಿ ಡಕೌಟ್ ಆಗಿದ್ದ ಅಭಿಷೇಕ್, 2ನೇ ಮ್ಯಾಚ್​ನಲ್ಲಿ ರೌದ್ರವತಾರ ಎತ್ತಿದ್ರು. ಜಸ್ಟ್​ 36 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದ ಅಭಿಷೇಕ್, ಇವತ್ತು ಟಿ20 ಕ್ರಿಕೆಟ್​​ನ ನಂಬರ್​.1 ಬ್ಯಾಟರ್.!

21 ಮ್ಯಾಚ್.. 708 ರನ್​.. 63 ಬೌಂಡರಿ, 53 ಸಿಕ್ಸರ್​..!

ಇದು ಅಭಿಷೇಕ್ ಶರ್ಮಾರ ಟಿ20 ಇಂಟರ್​ನ್ಯಾಷನಲ್​​ನ ಟ್ರ್ಯಾಕ್ ರೆಕಾರ್ಡ್​.. 21 ಮ್ಯಾಚ್​ಗಳಲ್ಲೇ 700 ರನ್, 63 ಬೌಂಡರಿ, 53 ಸಿಕ್ಸರ್ ಸಿಡಿಸುವುದು ನಿಜಕ್ಕೂ ಸುಲಭದಲ್ಲ. ಆದ್ರೆ, ಇದನ್ನ ಸಾಧ್ಯವಾಗಿಸಿರುವ ಅಭಿಷೇಕ್, ನಿಜಕ್ಕೂ ಟಿ20 ಕ್ರಿಕೆಟ್​​ನ ಸೂಪರ್ ಸ್ಪೆಷಲ್ ಪ್ಲೇಯರ್. ದಿನದಿಂದ ದಿನಕ್ಕೆ ಮತ್ತಷ್ಟು ವೈಲೆಂಟ್ ಆಗ್ತಿರುವ ಅಭಿಷೇಕ್ ಶರ್ಮಾ, ಗ್ರೇಟ್ ಟಿ20 ಪ್ಲೇಯರ್ ಆಗೋ ದಿನಗಳು ದೂರವೇನಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Asia Cup 2025 india vs pakistan asia cup Abhishek Sharma
Advertisment
Advertisment
Advertisment