/newsfirstlive-kannada/media/media_files/2025/12/20/jaiswal-2025-12-20-14-51-03.jpg)
ಫೆಬ್ರವರಿ 7 ರಿಂದ ಆರಂಭವಾಗುವ ಟಿ-20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ಅಚ್ಚರಿ ಎಂಬಂತೆ ಶುಬ್ಮನ್ ಗಿಲ್ ಅವರನ್ನು ಬಿಸಿಸಿಐ ಡ್ರಾಪ್ ಮಾಡಿದೆ. ಜೊತೆಗೆ ಇಬ್ಬರು ಸ್ಟಾರ್ ಆಟಗಾರರಿಗೆ ಮರುಜೀವ ನೀಡಿದೆ.
ಸರ್ಪ್ರೈಸಿಂಗ್ ಶಾಕ್ ನೀಡಿರುವ ಆಯ್ಕೆಗಾರರು, ಶುಬ್ಮನ್ ಗಿಲ್ ಹಾಗೂ ಜಿತೇಶ್ ಶರ್ಮಾ ಅವರನ್ನು ಬಿಸಿಸಿಐ ಡ್ರಾಪ್ ಮಾಡಿದೆ. ಹಾಗೆಯೇ ಅಚ್ಚರಿ ಎನ್ನುವಂತೆ.. ಇಶಾನ್ ಕಿಶನ್ ಹಾಗೂ ರಿಂಕು ಸಿಂಗ್​​ಗೆ ಆಯ್ಕೆ ಸಮತಿ ಅವಕಾಶ ನೀಡಿದೆ. ಇಶಾನ್ ಕಿಶನ್ ಅವರು ಇತ್ತೀಚೆಗೆ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಬಿಸಿಸಿಐ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿ ಜಿತೇಶ್ ಶರ್ಮಾ ಅವರನ್ನು ಡ್ರಾಪ್ ಮಾಡಿದೆ. ಸಂಜು ಸ್ಯಾಮ್ಸನ್ ಅವರ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್​ಗೆ ಅವಕಾಶ ನೀಡಲಾಗಿದೆ. ಇನ್ನು, ರಿಂಕು ಸಿಂಗ್​ಗೆ ಫಿನಿಶಿಂಗ್ ರೋಲ್​ಗೆ ಆಯ್ಕೆ ಮಾಡಲಾಗಿದೆ.
🚨India’s squad for ICC Men’s T20 World Cup 2026 announced 🚨
— BCCI (@BCCI) December 20, 2025
Let's cheer for the defending champions 💪#TeamIndia | #MenInBlue | #T20WorldCuppic.twitter.com/7CpjGh60vk
ಬಲಿಷ್ಠ ಟೀಂ ಇಂಡಿಯಾ:
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ವಾಯ್ಸ್ ಕ್ಯಾಪ್ಟನ್), ಇಶಾನ್ ಕಿಶನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಆರ್ಷ್​ದೀಪ್ ಸಿಂಗ್, ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us