/newsfirstlive-kannada/media/media_files/2025/08/05/kl_rahul-4-2025-08-05-18-41-14.jpg)
ಕೊನೆ ಪಂದ್ಯವನ್ನು ಕೇವಲ 6 ರನ್ಗಳಿಂದ ಗೆಲ್ಲುವ ಮೂಲಕ ಗಿಲ್ ನೇತೃತ್ವದ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ತಿಂಗಳ ನಡೆದ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತ ಆಟಗಾರರ ಅನುಪಸ್ಥಿತಿ ಇತ್ತು. ಆದರೆ ಇದನ್ನು ಕೆ.ಎಲ್ ರಾಹುಲ್ ಶಾಂತವಾಗಿ ನಿಭಾಯಿಸಿದರು ಎಂದು ಭಾರತದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರು ಹೇಳಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ ಅವರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯಲ್ಲಿ ಕೆ.ಎಲ್ ರಾಹುಲ್ ಅವರ ಪ್ರಭಾವಶಾಲಿ ಪ್ರದರ್ಶನ ಮೆಚ್ಚಲೇಬೇಕು. ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ನಿವೃತ್ತಿ ಹೊಂದಿದ ಬಳಿಕ ಅವರ ಸ್ಥಾನವನ್ನು ಕೆ.ಎಲ್ ರಾಹುಲ್ ಅವರು ತುಂಬಿದ್ದಾರೆ ಎನ್ನಬಹುದು ಎಂದಿದ್ದಾರೆ.
ಏಕೆಂದರೆ ಪ್ರಭಾವಶಾಲಿ ಬ್ಯಾಟಿಂಗ್, ಶಾಂತತೆ, ಕಿರಿಯ ಆಟಗಾರರ ಜೊತೆ ಅವರು ಹೊಂದಿಕೊಂಡಿರುವುದು ಎಲ್ಲವು ಕೆ.ಎಲ್ ರಾಹುಲ್ರನ್ನ ಪಾಯಿಂಟ್ಔಟ್ ಮಾಡುತ್ತವೆ. ತಂಡದಲ್ಲಿ ಹಿರಿಯ ಆಟಗಾರರು ಇಲ್ಲದ್ದನ್ನ ಅತ್ಯಂತ ಅನುಭವಿಯಾಗಿ ಟೆಸ್ಟ್ನಲ್ಲಿ ಕಾಣಿಸಿಕೊಂಡರು. ಅಲ್ಲದೇ ಸರಣಿಯಲ್ಲಿ ಭಾರತ ತಂಡ ಸಮಬಲ ಸಾಧಿಸಲು ಕೆ.ಎಲ್ ರಾಹುಲ್ ಕೀ ರೋಲ್ ಪ್ಲೇ ಮಾಡಿದರು ಎಂದು ಆಶಿಶ್ ನೆಹ್ರಾ, ಕನ್ನಡಿಗನನ್ನ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ಗೆ ಸ್ಪೆಷಲ್ ಮೆಸೇಜ್ ಕಳುಹಿಸಿದ ಕಿಂಗ್ ಕೊಹ್ಲಿ.. ಭಾರತದ ಗೆಲುವಿಗೆ
ಈ ಸರಣಿಯಲ್ಲಿ ಒಟ್ಟು 10 ಇನ್ನಿಂಗ್ಸ್ಗಳನ್ನು ಆಡಿದ ಕನ್ನಡಿಗ ರಾಹುಲ್ ಸರಾಸರಿ 53.2 ರಿಂದ 532 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 2 ಸೆಂಚುರಿ, 2 ಅರ್ಧಶತಕ ಇವೆ. ಇದು ಅಲ್ಲದೇ ನಾಯಕ ಗಿಲ್ ನಂತರದ ಅತ್ಯಧಿಕ ರನ್ ಬಾರಿಸಿದರು. ಪಂದ್ಯಗಳಲ್ಲಿ ಆ ಸಮಯಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್ ಪ್ರದರ್ಶನ ಮಾಡಿರುವುದು ಮುಖ್ಯವಾಗಿದೆ. ಇದು ಹಿರಿಯ ಆಟಗಾರರು ಇಲ್ಲದ್ದನ್ನ ತುಂಬಿದಂತೆ ಆಗಿದೆ ಎಂದು ಹೇಳಿದ್ದಾರೆ.
ಟೆಸ್ಟ್ನಲ್ಲಿ ತಮ್ಮ ತಾಳ್ಮೆ, ಜವಾಬ್ದಾರಿ, ಬದ್ಧತೆಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಕೊಹ್ಲಿ, ರೋಹಿತ್ರಂತೆ ಅನುಭವಿಯಾಗಿರುವ ರಾಹುಲ್, ಯುವ ಆಟಗಾರರೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ಟೂರ್ ಅಷ್ಟು ಸುಲಭವಾಗಿರಲ್ಲ. ಆದರೆ ರಾಹುಲ್ ಸೇರಿ ಎಲ್ಲರು ಅತ್ಯುತ್ತಮ ಪ್ರದರ್ಶನ ನೀಡಿದರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ