/newsfirstlive-kannada/media/media_files/2025/08/05/siraj_kohli-2-2025-08-05-16-52-37.jpg)
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಪಡೆಯುತ್ತಿದ್ದಂತೆ ಸೆಲೆಬ್ರೆಷನ್ ಮುಗಿಲು ಮುಟ್ಟಿತ್ತು. ಈ ಒಂದು ಪಂದ್ಯದ ಗೆಲುವು ಟೆಸ್ಟ್ ಸರಣಿಯನ್ನ ಸಮಬಲ ಮಾಡಿಕೊಳ್ಳಲು ಭಾರತಕ್ಕೆ ನೆರವಾಯಿತು. ಕೇವಲ 6 ರನ್ಗಳಿಂದ ವಿಜಯ ಸಾಧಿಸಿದ ಟೀಮ್ ಇಂಡಿಯಾಕ್ಕೆ ಹಾಗೂ ಮೊಹಮ್ಮದ್ ಸಿರಾಜ್ಗೆ ವಿರಾಟ್ ಕೊಹ್ಲಿ ಅಭಿನಂದನೆ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಅಭಿನಂದನೆ ತಿಳಿಸಿದ್ದಾರೆ. ಗೆಲುವಿನ ಬಳಿಕ ಟ್ವೀಟ್ ಮಾಡಿರೋ ಕೊಹ್ಲಿ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ತಂಡಕ್ಕಾಗಿ ಸದಾ ಕಾಲ ಹೋರಾಡುವ ಮೊಹಮ್ಮದ್ ಸಿರಾಜ್ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಟ್ವೀಟ್ನ ರೀ ಟ್ವೀಟ್ ಮಾಡಿರೋ ಸಿರಾಜ್, ನನ್ನನ್ನ ನಂಬಿದ್ದಕ್ಕೆ ಧನ್ಯವಾದಗಳು ಭಯ್ಯಾ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಮೊದಲ ಬಾರಿಗೆ ಕಣ್ಣೀರು ಹಾಕಿದ ಹೆಡ್ ಕೋಚ್ ಗಂಭೀರ್.!
ಕೊನೆ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಒಟ್ಟು 30.1 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಅವರು 6 ಓವರ್ ಮೆಡಿನ್ ಮಾಡಿದ್ದರು. ಇದರ ಜೊತೆಗೆ 104 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಈ ಎಲ್ಲಕ್ಕಿಂತ ಮಿಗಿಲಾಗಿ ಒಟ್ಟು 5 ವಿಕೆಟ್ಗಳನ್ನು ಕಬಳಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು. ಇಂಗ್ಲೆಂಡ್ ಗೆಲುವಿಗೆ ಕೊನೆಯಲ್ಲಿ ಕೇವಲ 6 ರನ್ಗಳು ಬೇಕಾಗಿದ್ದವು. ಟೀಮ್ ಇಂಡಿಯಾಕ್ಕೆ ಕೇವಲ 1 ವಿಕೆಟ್ ಬೇಕಾಗಿತ್ತು.
ವೋಕ್ಸ್ ಬ್ಯಾಟಿಂಗ್ಗೆ ಬಂದರೂ, ಇಂಗ್ಲೆಂಡ್ ಪಾಲಿಗೆ ಕೊನೆಯ ಭರವಸೆಯಾಗಿ ಉಳಿದಿದ್ದು ಗಸ್ ಅಟ್ಕಿನ್ಸನ್ ಮಾತ್ರ. 29 ಎಸೆತ ಎದುರಿಸಿ 17 ರನ್ಗಳಿಸಿ ಭರವಸೆಯಾಗಿದ್ದ ಅಟ್ಕಿನ್ಸನ್ ಅವರನ್ನು ಮೊಹಮ್ಮದ್ ಸಿರಾಜ್ ಬೇಟೆಯಾಡಿದರು. ತಂಡದ 85ನೇ ಓವರ್ ಮೊದಲ ಎಸೆತದಲ್ಲೇ ಅಟ್ಕಿನ್ಸನ್ನ ಕ್ಲೀನ್ಬೋಲ್ಡ್ ಮಾಡಿದ ಸಿರಾಜ್, ಟೀಮ್ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದರು. ಡ್ರೆಸ್ಸಿಂಗ್ ರೂಮ್ನಲ್ಲಿ, ಮೈದಾನದಲ್ಲಿ ಸಂಭ್ರಮಾಚರಣೆಯು ಮುಗಿಲು ಮುಟ್ಟಿತ್ತು.
Great win by team india. Resilience and determination from Siraj and Prasidh has given us this phenomenal victory. Special mention to Siraj who will put everything on the line for the team. Extremely happy for him ❤️@mdsirajofficial@prasidh43
— Virat Kohli (@imVkohli) August 4, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ