/newsfirstlive-kannada/media/media_files/2025/09/09/pak_captain_1-2025-09-09-18-12-41.jpg)
2025ರ ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಗ್ರ್ಯಾಂಡ್ ಆಗಿ ಆರಂಭಗೊಳ್ಳಲಿದೆ. ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವೆ ಮೊದಲ ಪಂದ್ಯ ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಸಾಂಪ್ರದಾಯಿಕ ಜಂಟಿ ಮಾಧ್ಯಮಗೋಷ್ಠಿ ನಡೆಸಲಾಗಿದ್ದು ಇದರಲ್ಲಿ ಎಲ್ಲ ತಂಡದ ನಾಯಕರು ಪಾಲ್ಗೊಂಡಿದ್ದರು. ಆದರೆ ಈ ವೇಳೆ ಸೂರ್ಯಕುಮಾರ್ ಹಾಗೂ ಪಾಕ್ ಕ್ಯಾಪ್ಟನ್ ಇಬ್ಬರು ಪರಸ್ಪರ ಮಾತೇ ಆಡಲಿಲ್ಲ ಎಂದು ಹೇಳಲಾಗಿದೆ.
ಇವತ್ತು ಏಷ್ಯಾ ಕಪ್ ಟ್ರೋಫಿಯ ಪಂದ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಇದಕ್ಕೂ ಮೊದಲು ಮಾಧ್ಯಮಗೋಷ್ಠಿ ನಡೆಸಲಾಯಿತು. ಇದರಲ್ಲಿ ಯುಎಇ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಭಾರತ, ಒಮನ್ ಹಾಗೂ ಹಾಂಗ್ ಕಾಂಗ್ ತಂಡದ ನಾಯಕರು ಪಾಲ್ಗೊಂಡಿದ್ದರು. ಆದರೆ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಹಾಗೂ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರಿಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರು ಒಳ್ಳೆಯ ರೀತಿಯಲ್ಲಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ತೊಡೆ ತಟ್ಟಿ ಗೆದ್ದವರಿಲ್ಲ.. ಹಾಲಿ ಚಾಂಪಿಯನ್ ಟೀಮ್ ಇಂಡಿಯಾದ 50 ವರ್ಷದ ಇತಿಹಾಸ ಹೇಗಿದೆ?
ಈ ಮಾಧ್ಯಮಗೋಷ್ಠಿ ಮುಗಿದ ಮೇಲೆ 8 ತಂಡದ ನಾಯಕರು ಎದ್ದು ಹೋಗಬೇಕಾದರೆ ಒಬ್ಬರಿಗೊಬ್ಬರು ಥ್ಯಾಂಕ್ಸ್, ಪರಸ್ಪರ ತಬ್ಬಿಕೊಂಡರು ಶುಭಾಶಯ ಹೇಳಿಕೊಂಡಿದ್ದಾರೆ. ಆದರೆ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಯಾರಿಗೂ ಥ್ಯಾಂಕ್ಸ್ ಕೊಡದೇ ಬೇಗನೆ ಚೇರ್ನಿಂದ ಎದ್ದು ಹೋಗಿದ್ದಾರೆ. ಇವರ ಜೊತೆ ಹಾಂಗ್ ಕಾಂಗ್ ಹಾಗೂ ಒಮನ್ ತಂಡದ ನಾಯಕರು ಹಾಗೇ ಮಾಡಿದ್ದಾರೆ. ಸೂರ್ಯಕುಮಾರ್ ಜೊತೆ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಒಂದು ಸ್ಮೈಲ್ ಕೂಡ ಮಾಡಿಲ್ಲ. ಈ ಇಬ್ಬರು ಥ್ಯಾಂಕ್ಸ್, ಹಗ್ ಕೂಡ ಮಾಡಿಲ್ಲ ಎಂದು ಹೇಳಲಾಗಿದೆ.
ಆದರೆ ಸೂರ್ಯಕುಮಾರ್ ಯಾದವ್ ವೇದಿಕೆ ಮೇಲೆ ಇದ್ದಂತಹ ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡದ ನಾಯಕರಿಗೆ ಥ್ಯಾಂಕ್ಸ್ ಕೊಟ್ಟು ಅಭಿನಂದನೆ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು ವಿಡಿಯೋ ಕೂಡ ವೈರಲ್ ಆಗಿದೆ. ಸೂರ್ಯಕುಮಾರ್ ವೇದಿಕೆ ಇಳಿದ ಮೇಲೆ ಪಾಕ್ ನಾಯಕ ಕ್ಯಾಮೆರಾ ಕಣ್ಣಿಗಾಗಿ ಕೈ ಕುಲುಕಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ